ಮುಂಬಯಿ: ಮಾಹಿಮ್ ಪಶ್ಚಿಮದ ಗಾಬ್ರಿಯೆಲ್ ರೋಡ್‍ನಲ್ಲಿನ ಮೌಂಟ್ ಕ್ಲೇರ್ ಅಪಾರ್ಟ್‍ಮೆಂಟ್ ನಿವಾಸಿ ಶ್ರೀಮತಿ ಸೆಲಿನ್ರಿ ಚಾರ್ಡ್ ಕಾರ್ವಾಲೊ (63.) ಅವರು ಕಳೆದ  ಆ.26 ರಂದು ಬುಧವಾರ ನಿಧನರಾದರು.
Celine Carvalho-3ಮೃತರು ಮೂಲತ ಬಾರಕೂರು ನಿವಾಸಿಯಾದ ಸೈಂಟ್ ಪೀಟರ್ಸ್ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ ಹಾಗೂ ಅಂಧೇರಿ ಮರೋಲ್‍ನಲ್ಲಿನ ಹೆಸರಾಂತ ರಿಚಾರ್ಡ್ ಗ್ಯಾರೇಜ್‍ನ ಮಾಲಕ ರಿಚ್ಚರ್ಡ್ ಕಾರ್ವಾಲೋ ಅವರ ಧರ್ಮಪತ್ನಿ ಆಗಿದ್ದು ಸೈಂಟ್ ಪೀಟರ್ಸ್ ಅಸೋಸಿಯೇಶನ್ ಮುಂಬಯಿ ಇದರ ಸಕ್ರೀಯ ಸದಸ್ಯೆಯಾಗಿದ್ದರು. ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ಶುಕ್ರವಾರ (28.08.2015)ಸಂಜೆ 4.00 ಗಂಟೆಗೆ ಸೈಂಟ್ ಮೈಕಲ್ ಚರ್ಚ್, ಮಾಹಿಮ್ ಇಲ್ಲಿ ನೇರವೇರಲಿದ್ದು, ಅಗಲಿದ ಸೆಲಿನ್ ಅವರಿಗೆ ಸೈಂಟ್ ಪೀಟರ್ಸ್ ಅಸೋಸಿಯೇಶನ್ ಮುಂಬಯಿ ಪದಾಧಿಕಾರಿಗಳು ಮತ್ತು ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *