ಮುಂಬಯಿ : ಬಿಎಸ್‍ಕೆಬಿಅಸೋಸಿಯೇಷನ್, ಸಾಯನ್ ನ ಗೋಕುಲ ಕಲಾವೃಂದ ಭಜನಾ ಮಂಡಳಿಯು ಕಳೆದ 7 ವರ್ಷಗಳಿಂದ ಪ್ರತಿ ತಿಂಗಳು “ಮನೆ ಮನೆಯಲ್ಲಿ ಭಜನೆ” ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಪ್ರತಿ ಗುರುವಾರ ಭಜನಾ ತರಗತಿಯನ್ನು ಗೋಕುಲದಲ್ಲಿ ನಡೆಸುತ್ತಿದೆ.
IMG-20150826-WA0036
ಮೂವತ್ತೈದಕ್ಕೂ ಮಿಕ್ಕಿದ ಸದಸ್ಯರರನ್ನು ಹೊಂದಿರುವ ಭಜನಾ ಮಂಡಳಿ, ತಿರುಪತಿ ತಿರುಮಲೆ ದಾಸ ಸಾಹಿತ್ಯ ಯೋಜನೆಯಲ್ಲಿ ನೋಂದಣಿ ಆದ ನಂತರ ಜನವರಿ 2012 ರಿಂದ ಮನೆಮನೆಗಳಲ್ಲಿ, ಸಾರ್ವಜನಿಕ ಉತ್ಸವಗಳಲ್ಲಿ ಹಾಗೂ ಮಠ, ಮಂದಿರಗಳಲ್ಲಿ ಭಜನಾ ಕಾರ್ಯಕ್ರಮವನ್ನು ನೆರವೇರಿಸಿಕೊಂಡು ಬಂದು ಇದೀಗ ತನ್ನ 100ನೇ ಕಾರ್ಯಕ್ರಮವನ್ನು ಕಳೆದ ಮಂಗಳವಾರ ಉಪನಗರ ಥಾಣೆ ಅಲ್ಲಿನ ಶ್ರೀಮತಿ ಕುಸುಮ ಶ್ರೀನಿವಾಸ್ ನಿವಾಸದಲ್ಲಿ ಸಂಭ್ರಮದಿಂದ ಆಚರಿಸಿತು.

By Suddi9

Leave a Reply

Your email address will not be published. Required fields are marked *