ಮುಂಬಯಿ : ಕನ್ನಡ ವೆಲ್ಫೇರ್ ಸೊಸೈಟಿ (ರಿ.) ತನ್ನ 36ನೇ ವಾರ್ಷಿಕೋತ್ಸವವನ್ನು ಕಳೆದ ಭಾನುವಾರ ಸಂಜೆ ಘಾಟ್ಕೋಪರ್ ಪಶ್ಚಿಮದಲ್ಲಿನ ನ್ಯೂ ಎಸ್‍ಎನ್‍ಡಿಟಿ ಸಭಾಗೃಹದ ಭುರಿಬೇನ್ ಲಕ್ಷ್ಮೀಚಂದ್ ಗೋಲ್‍ವಾಲ
ವೇದಿಕೆಯಲ್ಲಿ ನೇರವೇರಿತು. ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ವಿದ್ಯಾನಂದ ರೈ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ಸಮಾರಂಭದಲ್ಲಿಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅಜಿತ್ ಸುವರ್ಣ, ಮಹಾರಾಷ್ಟ್ರ ಸರಕಾರದಿಂದ ರಾಷ್ಟ್ರೀಯ ತನಿಖಾ ಕರ್ತೃತ್ವ ಸಂಸ್ಥೆಯ ವಿಶೇಷ ವ್ಯಾಜ್ಯದಾರನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಚೆಂಬೂರು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ ಬೋಳಾರ್, ಬಂಟ್ಸ್ ಸಂಘ ಮುಂಬಯಿ ಇದರ ಪೆÇವಾಯಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಿತ್ಯಾನಂದ ಹೆಗ್ಡೆ ನಡಿಬೆಟ್ಟು, ಬಂಟರ ಸಂಘ ಮುಂಬಯಿ ಇದರ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರ ಭಂಡಾರಿ, ಬಂಟರ ಸಂಘ ಮುಂಬಯಿ ಇದರ ನವಿ ಮುಂಬಯಿ ಪ್ರಾದೇಶಿಕ ವಿಭಾಗೀಯ ಸಮಿತಿ ಕಾರ್ಯಧ್ಯಕ್ಷ
ಭಾಸ್ಕರ ಶೆಟ್ಟಿ ಖಾಂದೇಶ್, ಕುರ್ಲಾ ಭಾಂಡೂಪ್ ಪ್ರಾದೇಶಿಕ ವಿಭಾಗೀಯ ಸಮಿತಿ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಎಣ್ಣೆಹೊಳೆ, ಕಾರ್ಯದರ್ಶಿ ಸಿಎ| ವಿಶ್ವನಾಥ ಶೆಟ್ಟಿ, ಶಿವಾನಂದ ಡಿ.ಶೆಟ್ಟಿ, ಬಾಬು ಶೆಟ್ಟಿ ಪೆರಾರ, ಕುಶಲಾ ಶೆಟ್ಟಿ ಮತ್ತಿತರರು ಅತಿಥಿಗಣ್ಯರುಗಳಾಗಿ ಉಪಸ್ಥಿತರಿದ್ದು, ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆಯನ್ನಿತ್ತರು.


ಸಮಾರಂಭದಲ್ಲಿ ಸಾಧಕರಾದ ಬೈಲೂರು ಬಾಲಚಂದ್ರ ರಾವ್, ನ್ಯಾಯವಾದಿ ಸುಧಾಕರ ಹೆಚ್.ಕೆ., ಅಜಯ್ ಬಗಾಲ್ ಅವರಿಗೆ ಸನ್ಮಾನಿಸಿದ್ದು, ಎಂ.ಜಿ ಶೆಟ್ಟಿ, ರಮೇಶ್ ಎನ್.ಸುವರ್ಣ ದಂಪತಿಗೆ ಸಾಧಕ ಪುರಸ್ಕಾರ ನೀಡಿ ಗೌರವಿಸಿ ಅಭಿನಂದಿಸಿದರು. ಸನ್ಮನಿತರು ಗೌರವಕ್ಕೆ ಉತ್ತರಿಸಿ ಮಾತನಾಡಿ ಸಂಘದ ಅಭಿಮಾನಕ್ಕೆ ಅಭಿವಂದಿಸಿದ ರು. ಕನ್ನಡ ವೆಲ್ಘೇರ್ ಸೊಸೈಟಿಯ ಹಿರಿಯ ಸದಸ್ಯರುಗಳಾಗಿದ್ದು ಅಸ್ತಂಗತದಿ| ಎ.ಆರ್ ಫುರ್ಟಾಡೊ ಮತ್ತು ದಿ| ಬಾಲಕೃಷ್ಣ ಎಂ.ರೈ ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಇದನ್ನು ಸ್ಟೀವನ್ ಫುರ್ಟಾಡೊ ಮತ್ತು ಲೀಲಾನಂದ ರೈ ಕ್ರಮವಾಗಿ ಸ್ವೀಕರಿಸಿದರು. ಬಳಿಕ ಎಸ್‍ಎಸ್‍ಸಿ, ಹೆಚ್‍ಎಸ್‍ಸಿ ವಿಭಾಗದಲ್ಲಿ ಉತ್ಕೃಷ್ಟಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರತಿಭಾನ್ವಿತ ವಿದ್ಯಾಥಿರ್sಗಳಿಗೆ ವಿಶೇಷ ಬಹುಮಾನವನ್ನೂ ನೀಡಿ ಪುರಸ್ಕರಿಸಿದರು.
ಅಜಿತ್ ಸುವರ್ಣ ಮಾತನಾಡಿ ಈ ಸಂಘವು ಶಿಕ್ಷಣ ಕ್ಷೇತ್ರಕ್ಕೆ ನೀಡುವ ಸೇವೆ ಪ್ರಶಂಸನೀಯ. ವಿದ್ಯಾರ್ಜನೆಯು ಬದುಕು ಸೃಷ್ಠಿಸುತ್ತದೆ. ವಿದ್ಯೆಯಿಂದಲೇ ಸಂಸ್ಕಾರಯುತ ಬದುಕು ಹಸನಾಗುವುದು. ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವೂ ಇದಾಗಿದೆ. ವಿದ್ಯೆ ಕಲ್ಪಿಸಿ ಸುಂದರ ಸಮಾಜ ನಿರ್ಮಾಣ ಮತ್ತು ಸಾಹಿತ್ಯಾಭಿಮಾನಿಗಳನ್ನು ಪ್ರೋತ್ಸಾಹಿಸುತ್ತಿರುವ ನಾವು ಸ್ವಸ್ಥ ಬದುಕು ನಿರ್ವಹಣೆಗೆ ಬದ್ಧರಾಗಿ ಸಂಸ್ಥೆಗಳನ್ನು ಮುನ್ನಡೆಸಿದಾಗಲೇ ಸಂಘಸಂಸ್ಥೆಗಳ ಉದ್ದೇಶಗಳು ಫಲಪ್ರದವಾಗುವುದು ಎಂದರು.
ಸಂಘದ 36ರ ವರ್ಷಗಳ ನಿರಂತರೆತೆ ಸಂಸ್ಥೆಯ ಯಶಸ್ಸನ್ನು ಸಾರುತ್ತದೆ ವಿದ್ಯಾರ್ಜನೆಯ ಮಹತ್ವ ಮತ್ತು ಸಾಧಕರ ಗುರುತಿಸುವಿಕೆಪ್ರಶಂಸನೀಯ. ಸಂಸ್ಥೆಯ ಸೇವೆಯು ತುಳುಕನ್ನಡದ ತೇರನ್ನೆಳೆದು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ನಿತ್ಯಾನಂದ ಹೆಗ್ಡೆ ಅಭಿಪ್ರಾಯಪಟ್ಟರು. ನ್ಯಾ| ಪ್ರಕಾಶ್ ಶೆಟ್ಟಿಮಾತನಾಡಿ ಈ ಸಂಸ್ಥೆಯ ಬಹುತೇಕರು ನನ್ನ ಪರಿಚಯಸ್ಥರೇ ಆಗಿದ್ದಾರೆ. ಆದುದರಿಂದ ಸಂಘದ ಕಾರ್ಯಚಟುವಟಿಕೆಗಳನ್ನು ಸಾಮೀಪದಿಂದ ಗಮನಿಸಿ ಸಂಸ್ಥೆಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೇನೆ. ಸಂಘವು ಪ್ರಸ್ತುತ ಸೇವೆಯಲ್ಲಿ ತೊಡಗಿರುವವರನ್ನೇ ಗುರುತಿಸದೆ ಸೇವಾನಿರತರಾಗಿ ಮರೆಯಾದ ಸದಸ್ಯರನ್ನೂ ಗುರುತಿಸುತ್ತಿರುವುದು ಸ್ತುತ್ಯರ್ಹ. ಪ್ರಸ್ತುತ ಇದೊಂದು ಅಪರೂಪದ ಕೆಲಸವಾಗಿದ್ದು ಇಂತಹ ಉದಾರತ್ವದ ಮನೋಭಾವವುಳ್ಳ ಈ ಸಂಸ್ಥೆ ಸಮಾಜಪರ ಸೇವೆಯೊಂದಿಗೆ ಗಮನಾರ್ಹ ಸೇವೆ ಸಲ್ಲಿಸಿ ಯಶಕಾಣಲಿ ಎಂದು ಹಾರೈಸಿದರು. ಜ್ಯೋತಿ ರೈ ಮತ್ತು ಹರಿಣಿ ಎಂ.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಸೊಸೈಟಿಯ ಉಪಾಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಜಯರಾಜ್ ಜೈನ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಅತಿಥಿಗಳನ್ನು ಪರಿಚಯಿಸಿದರು. ಜೊತೆ ಕೋಶಾಧಿಕಾರಿ ಸುಧಾಕರ ಎಲ್ಲೂರು ಮತ್ತು ನಾರಾಯಣ ಶೆಟ್ಟಿ ನಂದಳಿಕೆ ಕಾರ್ಯಕ್ರಮ ನಿರೂಪಿಸಿ, ಸನ್ಮಾನಿತರನ್ನು ಪರಿಚಯಿಸಿದರು. ಗೌ| ಕೋಶಾಧಿಕಾರಿ ಹರೀಶ್ ಪೂಜಾರಿ ಮತ್ತು ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಜೊತೆ ಕಾರ್ಯದರ್ಶಿ ರಾಧಾಕೃಷ್ಣ ಎನ್.ಶೆಟ್ಟಿವಂದನಾರ್ಪಣೆ ಗೈದರು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ವೀರಜ್ ನಂದಿಕೂರು ನಿರ್ಮಿತ ಮನೋಹರ ಶೆಟ್ಟಿ ನಂದಳಿಕೆ ನಿರ್ದೇಶನದಲ್ಲಿ ಆಯಿನ ಆಂಡ್ ಬುಡ್ದುಬುಡ್ಲೆ ತುಳು ನಾಟಕವನ್ನು ನಿರೆಕರೆ ಕಲಾವಿದರು ಪ್ರದರ್ಶಿಸಿದರು.


