ಮುಂಬಯಿ, ಆ.27: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಗೋರೆಗಾಂ ಸ್ಥಳೀಯ ಸಮಿತಿಯ ನೂತನ ಕಛೇರಿಯನ್ನು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

Billawar Assn Goregaon Office-1

Billawar Assn Goregaon Office-2

Billawar Assn Goregaon Office-3

Billawar Assn Goregaon Office-4

Billawar Assn Goregaon Office-6

Billawar Assn Goregaon Office-8

Billawar Assn Goregaon Office-12
ಗೋರೆಗಾಂವ್ ಪಶ್ಚಿಮ ರೈಲ್ವೇ ಠಾಣೆಯ ಸನಿಹದ ರಾಜೇಂದ್ರ ಪಾರ್ಕ್ನ 4ನೇ ಮಹಡಿಯಲ್ಲಿ ಅಸೋಸಿಯೇಶನ್ನ ಗೋರೆಗಾಂವ್ ಸ್ಥಳೀಯ ಸಮಿತಿಯು ನಿರ್ಮಿ ಸಿದ ನೂತನ ಕಛೇರಿಯನ್ನು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅವರು ದೀಪ ಬೆಳಗಿಸಿ ವಿಧ್ಯುಕ್ತವಾಗಿ ಸೇವಾರ್ಪಣೆಗೈದರು. ಕಾರ್ಯಕ್ರಮದ ಅಂಗವಾಗಿ ಉಳ್ಳೂರು ಧನಂಜಯ್ ಶಾಂತಿ ಶ್ರೀ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂ
ಜೆ ಇತ್ಯಾಧಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಕಾರ್ಯಾಧ್ಯಕ್ಷ ಸಚೀಂದ್ರ ಕೆ.ಕೋಟ್ಯಾನ್ ಮತ್ತು ಸುಜತಾ ಸಚೀಂದ್ರದಂಪತಿ ಪೂಜಾಧಿಗಳಯಜಮಾನತ್ವ ವಹಿಸಿದ್ದರು. ಲಲಿತ್ ಹೊಟೇಲ್ ಕ್ರಿಸ್ಟಲ್ ಸಭಾಗೃಹದಲ್ಲಿ ಅಸೋಸಿಯೇಶನ್ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಜೈನ ಶ್ವೇತಾಂಬರ ತೆರಪಂಥ್ ಸಭಾ ಮುಂಬಯಿ ಇದರ ಉಪಾಧ್ಯಕ್ಷ ಬಾಬುರಾವ್ ರಾಥೋಡ್, ಗೌರವ ಅತಿಥಿಗಳಾಗಿ ಭಾರತ ಸರ್ಕಾರದ ನೋಟರಿ ವಕೀಲ ನ್ಯಾಯವಾದಿ ಶಶಿಧರ್ ಯು.ಕಾಪು, ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದು ಶುಭಾರೈಸಿದರು. ಸಮಾರಂಭದಲ್ಲಿ ಅಸೋಸಿಯೇಶನ್ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಗೌ| ಜೊತೆ ಕಾರ್ಯದರ್ಶಿ ಪ್ರೇಮನಾಥ ಪಿ.ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾ ಧ್ಯಕ್ಷೆ ಶ್ರೀಮತಿ ಶಕುಂತಳಾ ಕೆ.ಕೋಟ್ಯಾನ್, ವಿಭಾಗದಕಾರ್ಯಾಧ್ಯಕ್ಷ ನೀಲೇಶ್ ಬಿ.ಪೂಜಾರಿ, ಎಲ್.ವಿ ಅಮೀನ್, ಎನ್.ಎಂ ಸನೀಲ್, ಆರ್.ಡಿ ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಜಗನ್ನಾಥ ವಿ.ಕೋಟ್ಯಾನ್, ಉಪ ಕಾರ್ಯಾಧ್ಯಕ್ಷರಮೇಶ್ ಎಸ್. ಸುವರ್ಣ ಗೌ| ಕಾರ್ಯದರ್ಶಿ ಶಶಿಧರ್ ಆರ್.ಬಂಗೇರಾ, ಗೌ| ಕೋಶಾಧಿಕಾರಿ ಮೋಹನ್ ಬಿ.ಅಮೀನ್, ತುಷಾಂತ್ ಕೋಟ್ಯಾನ್ ಮತ್ತಿತರ ಪದಾಧಿಕಾರಿಗಳು ಸೇರಿದಂತೆ ಅನೇಕಗಣ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಸಮಿತಿಯ ಯುವ ವಿಭಾಗವು ವೈವಿಧ್ಯಮಯ ಕಾರ್ಯಕ್ರಮ ಪ್ರದರ್ಶಿಸಿತು

ಚಿತ್ರ ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *