ಮುಂಬಯಿ, ಆಗಸ್ಟ್.24: ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ನ ವಿಲೇಪಾರ್ಲೆ ಪಶ್ಚಿಮ ಶಾಖೆಯಲ್ಲಿ 38ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮಿಸಲಾಯಿತು. ವಿಶೇಷ ಪೂಜೆ ನೆರವೇರಿಸಿ ಗ್ರಾಹಕರಿಗೆ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಶಾಖೆಯ ಮುಖ್ಯಸ್ಥ ಸಂಪತ್ ಎ.ಪೂಜಾರಿ, ಸಹಾಯಕ ಪ್ರಬಂಧಕ ಸರೋಜಾ ವಿ.ಸುವರ್ಣ, ಅಧಿಕಾರಿಗಳಾದ ಲತಿಕ ತೋನ್ಸೆ, ಉಮಾ ಕಾಮತ್, ಶ್ರದ್ಧಾ ಲವಂಢೆ, ಸುಧಾಕರ್ ಪೂಜಾರಿ ಮತ್ತು ರಾಕೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

