ಮುಂಬಯಿ, ಆ.28: ಅಖಿಲ ಭಾರತ ತುಳು ಒಕ್ಕೂಟ (ರಿ.) ಪ್ರಾಯೋಜಕತ್ವದಲ್ಲಿ ದಕ್ಷಿಣ ಕನ್ನಡ ಯಕ್ಷತುಳು ಪರ್ಬ ಸಮಿತಿಯು ಸೆ.01 ರಿಂದ 07 ತನಕ ಮುಂಬಯಿ ಮತ್ತು ನವಿ ಮುಂಬಯಿ ನಗರದಾದ್ಯಂತ ಮುಂಬಯಿಯಲ್ಲಿ ತುಳು ಯಕ್ಷಗಾನ ಹಬ್ಬ(ಮುಂಬಾಯಿಡ್ ತುಳು ಯಕ್ಷಗಾನ ಪರ್ಬ) ಕಾರ್ಯಕ್ರಮ ಆಯೋಜಿಸಿದೆ. ಸೆ.01ನೇ ಮಂಗಳವಾರ ಸಂಜೆ 5.00 ಗಂಟೆಯಿಂದ ಡಾ| ಎಂ.ವಿಶ್ವೇಶ್ವರಯ್ಯ ಸಭಾಂಗಣ, ಕರ್ನಾಟಕ ಸಂಘ ಮುಂಬಯಿ, ಮಾಟುಂಗ ಇಲ್ಲಿ `ಕೋಟಿ ಚೆನ್ನಯ’ ಪ್ರಸಂಗದೊಂದಿಗೆ ತುಳು ಯಕ್ಷಗಾನ ಹಬ್ಬ
ಆರಂಭಗೊಳ್ಳಲಿದೆ.
ಸೆ.02 ಬುಧವಾರ ಸಂಜೆ 5.00 ಗಂಟೆಯಿಂದ ಶ್ರೀ ಮೂಕಾಂಬಿಕಾ ದೇವಸ್ಥಾನ ಘನ್ಸೋಲಿ ಇಲ್ಲಿ ಡಿ.ಮನೋಹರ ಕುಮಾರ್ ವಿರಚಿತ `ಶ್ರೀಪತಿ ಶ್ರೀಮತಿ’ ಯಕ್ಷಗಾನ, ಸೆ.03 ಗುರುವಾರ ಸಂಜೆ 5.00 ಗಂಟೆಯಿಂದ ದೇವಾಡಿಗ ಭವನ, ನೆರೋಳ್ ಗಾಂವ್ದೇವ್ ಇಲ್ಲಿ ಸರಪಾಡಿ ಅಶೋಕ ಶೆಟ್ಟಿ ಅವರ ಲಿಖಿತ `ಸರಪಾಡಿದ ಸರ್ಪ ‘ ಯಕ್ಷಗಾನ, ಸೆ.04 ಶುಕ್ರವಾರ ಸಂಜೆ 5.00 ಗಂಟೆಯಿಂದ ಬಿಲ್ಲವರಭವನ,
ಸಾಂತ್ರಾಕ್ರೂಜ್ ಮುಂಬಯಿ ಇಲ್ಲಿ ಡಿ.ಮನೋಹರ ಕುಮಾರ್ ವಿರಚಿತ `ಗೆಜ್ಜೆದ ಪೂಜೆ’ ಯಕ್ಷಗಾನ, ಸೆ.05 ಶನಿವಾರ ಸಂಜೆ 5.00 ಗಂಟೆಯಿಂದ ಹೆಗಡೆ ಸೇವಾ ಸಂಘ ಐರೋಳಿ, ನವಿಮುಂಬಯಿ ಇಲ್ಲಿ ಡಿ.ಮನೋಹರ ಕುಮಾರ್ ವಿರಚಿತ `ಗೆಜ್ಜೆದ ಪೂಜೆ’ ಯಕ್ಷಗಾನ, ಸೆ.06 ರವಿವಾರ ಸಂಜೆ 5.00 ಗಂಟೆಯಿಂದ ಶ್ರೀ ಅಯ್ಯಪ್ಪ ದೇವಸ್ಥಾನ, ಸೆಕ್ಟರ್ 2, ಮೀರಾರೋಡ್ ಇಲ್ಲಿದಿ| ಶೇಖರ ವಿ.ಶೆಟ್ಟಿ ಬೆಳ್ಮಣ್
ಲಿಖಿತ `ಬಂಗಾರ್ದ ತೊಟ್ಟಿಲ್’ ಯಕ್ಷಗಾನ, ಸೆ.06ನೇ ಸೋಮವಾರ ಸಂಜೆ 5.00 ಗಂಟೆಯಿಂದ ಸಾವಿತ್ರಿ ಬಾಯಿ ಪುಲೆ, ಕಲಾಮಂದಿರ, ಡೊಂಬಿವಿಲಿ ಇಲ್ಲಿ ಡಿ.ಮನೋಹರ ಕುಮಾರ್ ವಿರಚಿತ `ಗೆಜ್ಜೆದ ಪೂಜೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಪುತ್ತಿಗೆ ರಘುರಾಮ ಹೊಳ್ಳ, ಕಡಬ ರಾಮಚಂದ್ರ ರೈ, ಸುಜಯಯ ಹೆಗ್ಡೆ ಕುತ್ಲೂರು ಮತ್ತು ಚಂದ್ರಶೇಖರ ಗುರುವಾಯನಕೆರೆ ಹಿಮ್ಮೇಳದಲ್ಲಿ ಪಾಲ್ಗೊಳ್ಳಲಿದ್ದು ನಾಡೆನ ಹೆಸರಾಂತ ಯಕ್ಷಗಾನ ಕಲಾವಿದರು ವಿವಿಧ ಪಾತ್ರಗಳ ಮೂಲಕ ಕಲಾಬಿಮಾನಿಗಳ ಮನ ರಂಜಿಸಲಿದ್ದಾರೆಎಂದು ಯಕ್ಷ ತುಳು ಪರ್ಬ ಸಮಿತಿ ಅಧ್ಯಕ್ಷರಡಿ.ಮನೋಹರ ಕುಮಾರ್ ಹಾಗೂ ಕಾರ್ಯದರ್ಶಿ ಸರಪಾಡಿ ಅಶೋಕ್ ಶೆಟ್ಟಿತಿಳಿಸಿದ್ದಾರೆ.
ಮಹಾನಗರದ ಸರ್ವ ಯಕ್ಷಗಾನ ಪ್ರೇಮಿಗಳು, ಕಲಾಭಿಮಾನಿಗಳು ಸರ್ವ ಪ್ರಸಂಗ ಪ್ರದರ್ಶನಗಳಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಈ ಮೂಲಕ ವಿನಂತಿಸಿದ್ದಾರೆ


