ಬೆಂಗಳೂರು: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಂಸತ್ ಸದಸ್ಯೆ ರಮ್ಯಾ ತಂದೆ ಎಂದು ಹೇಳಿಕೊಂಡಿರುವ ಬಿ.ಸಿ. ವೆಂಕಟೇಶ್ ಬಾಬು ತಮ್ಮನ್ನು ರಮ್ಯಾ ತಂದೆಯೆಂದು ಘೋಷಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು ವೆಂಕಟೇಶ ಬಾಬು ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ರಮ್ಯಾ ನನ್ನ ಮಗಳು ಎಂದು ಘೋಷಿಸಬೇಕೆಂದು ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ರಮ್ಯಾ ತಮ್ಮನ್ನು ತಂದೆಯಾಗಿ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿರುವ ಅವರು, ರಮ್ಯಾ ತಾಯಿ ರಂಜಿತಾ ತಮ್ಮ ಪತ್ನಿ ಎಂದು ತೋರಿಸುವ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. 

ramya

ರಮ್ಯಾಗೆ ಹಲವಾರು ಬಾರಿ ಎಸ್‌ಎಂಎಸ್ ಮಾಡಿ ತಂದೆಯೆಂದು ಒಪ್ಪಿಕೊಳ್ಳುವಂತೆ ಸೂಚಿಸಿದ್ದೇನೆ. ಆದರೆ ಅವಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಾಬು ತಿಳಿಸಿದರು. ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಈ ವಿಷಯವನ್ನು ಕೆದಕುತ್ತಿರುವ ಔಚಿತ್ಯವೇನು ಎಂಬ ಪ್ರಶ್ನೆ ಈಗ ಎದುರಾಗಿದ್ದು, ಜನರು ಅದನ್ನು ಕೇಳುತ್ತಿದ್ದಾರೆ. ರಮ್ಯಾ ಮಾತ್ರ ತನಗೂ, ಇದಕ್ಕೂ ಸಂಬಂಧವಿಲ್ಲದಂತೆ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ.

By Suddi9

Leave a Reply

Your email address will not be published. Required fields are marked *