ಬೆಂಗಳೂರು: ಮೋದಿ ಪ್ರಧಾನಿಯಾದ್ರೆ ಈ ರಾಜ್ಯದಲ್ಲೇ ತಾವು ಇರೋದಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಶಪಥ ಮಾಡಿದ್ದಾರೆ. ಈ ಬಾರಿಯ ಚುನಾವಣೇಲಿ ಬಿಜೆಪಿ 276 ಸ್ಥಾನ ಪಡೆದರೆ ತಾವು ರಾಜಕೀಯ ನಿವೃತ್ತಿ ಪಡೀತೀನಿ. ಅನಂತಕುಮಾರ್ ಬಿಜೆಪಿಯನ್ನು ಹಾಳು ಮಾಡುತ್ತಿದ್ದು ಅದರ ಪ್ರತಿಫಲ ಅನುಭವಿಸುತ್ತಾರೆ ಎಂದು ಹೇಳಿದರು. ಹಣದ ಹೊಳೆ ಹರಿಸೋರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಶಿವಮೊಗ್ಗದಲ್ಲಿ ದೇವೇಗೌಡರು ವಾಗ್ದಾಳಿ ಮಾಡಿದರು. ಶಿವಮೊಗ್ಗಕ್ಕೆ ಆಗಮಿಸಿದ್ದ ದೇವೇಗೌಡರು ಪತ್ರಿಕಾಗೋಷ್ಠಿ ಕರೆದು ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಜೆಡಿಎಸ್ ಕೂಡ ತೃತೀಯರಂಗದಲ್ಲಿ ಕಿಂಗ್ ಮೇಕರ್ ಪಾತ್ರ ವಹಿಸಬಹುದು ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ಅನೇಕ ರಾಜ್ಯಗಳಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲ. ಆದ್ದರಿಂದ ಮೋದಿ ಹೇಗೆ ಪ್ರಧಾನಿಯಾಗ್ತಾರೆ ಎಂಬ ಪ್ರಶ್ನೆಯನ್ನು ಹಾಕಿದರು. ಜೆಡಿಎಸ್ ಪಕ್ಷದಲ್ಲಿ ಹಣದ ಕೊರತೆ ಇರುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸೋದಕ್ಕೆ ಆಗಿಲ್ಲ ಎಂದು ಹೇಳಿದರು.

