ಮುಂಬಯಿ : ಮಹಾನಗರ ಮುಂಬಯಿಯಲ್ಲಿನ ಉದ್ಯಮಿ, ಸಮಾಜ ಸೇವಕ, ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಚೆಲ್ಲಡ್ಕ ಕುಸುಮೋದರ ಶೆಟ್ಟಿ(ಕೆ.ಡಿ.ಶೆಟ್ಟಿ) ಅವರು ಸಾಮಾಜಿಕ ಸೇವೆಗಾಗಿ ಸ್ಥಾಪಿಸಿರುವ ತನ್ನ ಮಾತೃಶ್ರೀ ದಿ| ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ಷಷ್ಠ್ಯಬ್ದ ಸ್ಮರಣಾರ್ಥ ಸ್ಥಾಪಿಸಿದ ಭವಾನಿ ಫೌಂಡೇಶನ್ (ರಿ.) ಮುಂಬಯಿ ಸಂಸ್ಥೆಯು ಟಾಟಾ ಮೆಮೋರಿಯಲ್ ಆಸ್ಪತ್ರೆಪರೇಲ್ ಮುಂಬಯಿ ಇವರ ಸಹಯೋಗದೊಂದಿಗೆ ಕಳೆದ ಶನಿವಾರ ಪೂರ್ವಾಹ್ನ ನವಿಮುಂಬಯಿ ಅಲ್ಲಿನ ಸಿಬಿಡಿ ಬೇಲಾಪುರದ ವಿ.ಟೈಮ್‍ಸ್ಕ್ವೇರ್‍ನ ಸಭಾಗೃಹದಲ್ಲಿ ಪ್ರಥಮವಾಗಿ ರಕ್ತದಾನ ಶಿಬಿರ ಆಯೋಜಿಸಿತು. ಭವಾನಿ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ-ಕಾರ್ಯಾಧ್ಯಕ್ಷ ದಡ್ದಂಗಡಿ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ ಅಧ್ಯಕ್ಷತೆಯಲ್ಲಿನಡೆಸಲ್ಪಟ್ಟ ರಕ್ತದಾನ ಶಿಬಿರವನ್ನು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
Bhavani Blod Donation Camp-2

 

Bhavani Blod Donation Camp-4

Bhavani Blod Donation Camp-5

Bhavani Blod Donation Camp-6

Bhavani Blod Donation Camp-8

Bhavani Blod Donation Camp-9

Bhavani Blod Donation Camp-10

Bhavani Blod Donation Camp-11

Bhavani Blod Donation Camp-12

Bhavani Blod Donation Camp-13

Bhavani Blod Donation Camp-14

Bhavani Blod Donation Camp-B

Bhavani Blod Donation Camp-Cಉದ್ಯಮಿಗಳಾದ ಸಂಜೀವ ಎನ್.ಶೆಟ್ಟಿ, ಸಿಬಿಡಿ ಭಾಸ್ಕರ ಶೆಟ್ಟಿ, ಭಾಸ್ಕರ್ ಶೆಟ್ಟಿ ಖಾಂದೇಶ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಣ್ಣಿ ಶೆಟ್ಟಿಮಾತನಾಡಿ ಜನನದಾತೆ ಮತ್ತು ಸಮಾಜವನ್ನು ಪ್ರೀತಿ, ಗೌರವದಿಂದ ನೋಡುತ್ತಾ ಅದನ್ನು ಪಾಲಿಸಿಕೊಂಡು ಬಂದವರು ಬದುಕಿನಲ್ಲಿ ಯಶಸ್ವಿಯಾಗುತ್ತಾರೆ. ಶಿಕ್ಷಣ, ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಶೆಟ್ಟಿ ಅವರಿಂದ ಸಮಾಜಕ್ಕೆ ಇನ್ನಷ್ಟು ಕೊಡುಗೆ ಸಲ್ಲಲಿ ಎಂದರು. ಕೆ.ಡಿ ಶೆಟ್ಟಿ ಮಾತನಾಡಿ, ಸದಾ ಸಮಾಜ ಚಿಂತಕನಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ತಾನು ಇಂದು ತಾಯಿಯ ಸ್ಮೃತಿಗಾಗಿ ಅವರ ಹೆಸರಿನಲ್ಲಿ ಭವಾನಿ ಫೌಂಡೇಶನ್ ಎಂಬ ಸಾರ್ವಜನಿಕ ಸಾಮಾಜಿಕ ಸಂಸ್ಥೆಯನ್ನು ಸ್ಥಾಪಿಸಿದ್ದೇನೆ. ಇಂದಿನ ರಕ್ತದಾನ ಶಿಬಿರ ಆರಂಭಿಕ ಹಂತವಾಗಿದ್ದು ಬೃಹತ್ ವೈದ್ಯಕೀಯ ಶಿಬಿರವನ್ನು ಇದೇ ಆಗಸ್ಟ್.22ರಂದು ನನ್ನ ಹುಟ್ಟೂರು ಆದ ವಿಟ್ಲ ಚೆಲ್ಲಡ್ಕದ ಕುದ್ದುಪದವು ಶಾಲೆಯಲ್ಲಿ ಆಯೋಜಿಸಿದ್ದೇವೆ. ಎ.ಜೆ.ಶೆಟ್ಟಿ ಆಸ್ಪತ್ರೆಮಂಗಳೂರು ಇವರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಸಾಮಾನ್ಯ ಪರೀಕ್ಷೆ, ಹೃದಯ ಸಂಬಂಧಿ ಕಾಯಿಲೆ ಇತ್ಯಾದಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದರು. ಫೌಂಡೇಶನ್‍ನ ವಿಶ್ವಸ್ಥಸದಸ್ಯ, ಸಮಾಜ ಸೇವಕ ನ್ಯಾಯವಾದಿ ಬಿ.ಮೋಹಿದ್ದೀನ್ ಮುಂಡ್ಕೂರು ಮಾತನಾಡಿ, ಕೆ.ಡಿ ಶೆಟ್ಟಿ ಸಮಾಜ ಸೇವಕರಾಗಿ ಹೆಸರು ಗಳಿಸಿದವರು. ಅವರ ಸಮಾಜ ಸೇವೆಯ ವಿಸ್ತಾರ ಭವಾನಿ ಫೌಂಡೇಶನ್‍ನ ಮೂಲಕ ಇನ್ನಷ್ಟು ವಿಶಾಲವಾಗಲೆಂದು ಹಾರೈಸಿದರು. ಫೌಂಡೇಶನ್‍ನ ಮತ್ತೋರ್ವ ವಿಶ್ವಸ್ಥಸದಸ್ಯ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ಮಾತನಾಡಿ ಸ್ವಸ್ಥ ಸಮಾಜದ ದೂರದೃಷ್ಠಿವುಳ್ಳ ಕೆ.ಡಿ ಶೆಟ್ಟಿ ಅವರ ಸಮಾಜ ಸೇವೆ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಸ್ಥಾನೀಯ ಅನೇಕ ಸಂಸ್ಥೆಗಳಪದಾಧಿಕಾರಿಗಳು, ಭವಾನಿ ಶಿಪ್ಪಿಂಗ್ ಸರ್ವಿಸಸ್ ಸಂಸ್ಥೆಯ ಕಚೇರಿಯ ಸಿಬ್ಬಂದಿ, ಅವರ ಬಂಧು-ಮಿತ್ರರು, ಕೆ.ಡಿ.ಶೆಟ್ಟಿ ಅವರ ಹಿತಚಿಂತಕರು ಶಿಬಿರದಲ್ಲಿ ಪಾಲ್ಗೊಂಡು ಸುಮಾರು 300 ಮಂದಿ ರಕ್ತದಾನಗೈದಿದ್ದು, 97 ಯೂನಿಟ್ ಗಳಷ್ಟು ರಕ್ತ ಶೇಖರಿಸಲಾಗಿದೆ ಎಂದು ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದರು. ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ನಿಲಂ ವಂದಾರ್ಕರ್ ಅವರು ಸಂಸ್ಥೆಯ ಪದಾಧಿಕಾರಿಗಳನ್ನು ಅಭಿನಂದಿಸಿದರು. ಡಾ| ಜೋಸೆಫ್ ಸನಾಲ್, ಡಾ| ಪ್ರಮೀಳಾ, ಅರ್ಚನಾ ಕಾನ್ಗೋರ್ಡೆ, ರಾಜೇಂದ್ರ ಕೋಪ್ಡೆ, ಮಂದಾರ್ ಗಾವ್ಡೆ,
ದಿವ್ಯೇಶ್ ರಾಥೋಡ್, ಸಾಗರ್ ವಾಲ್ಮೀಕಿ, ದಿನೇಶ್ ಸಿರ್‍ಸೋಟ್, ಅವಿಜಿತ್ ಕುರಾನೆ ಮತ್ತಿತರರು ಉಪಸ್ಥಿತರಿದ್ದು, ಫೌಂಡೇಶನ್‍ನಜೊತೆ ಕಾರ್ಯದರ್ಶಿ ಶಿಖಾ ಕೆ.ಶೆಟ್ಟಿ ವಂದಿಸಿದರು.

By Suddi9

Leave a Reply

Your email address will not be published. Required fields are marked *