ಬಂಟರ ಸ್ವಂತಿಕೆಯ ಬ್ಯಾಂಕ್ ಸ್ಥಾಪನೆಯೇ ನಮ್ಮ ಗುರಿ: ರತ್ನಾಕರ್ ಮುಂಡ್ಕೂರು
ಮುಂಬಯಿ : ಬಂಟರ ಸಂಘ ಮುಂಬಯಿ ಸಂಯೋಜಕತ್ವದ ಮಾತೃಭೂಮಿ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಇದರಇಪ್ಪತ್ತೇಳನೇ ವಾರ್ಷಿಕ ಮಹಾಸಭೆಯು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರದ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಅವರ ಅಧ್ಯಕ್ಷತೆಯಲ್ಲಿ ನೇರವೇರಿತು. ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ದೀಪ ಬೆಳಗಿಸಿ ಸಭೆಗೆ ಚಾಲನೆಯನ್ನಿತ್ತರು. ನಿರ್ದೇಶಕರುಗಳಾದ ನಗ್ರಿಗುತ್ತು ವಿವೇಕ್ ಶೆಟ್ಟಿ (ವ್ಯವಹಾರ ಅಭಿವೃದ್ಧಿ ಉಪ ಸಮಿತಿ ಕಾರ್ಯಧ್ಯಕ್ಷ), ಡಾ|ಪ್ರಭಾಕರ ಶೆಟ್ಟಿ (ಸಾಲ ಮರುಪಾವತಿ ಉಪ ಸಮಿತಿ ಕಾರ್ಯಧ್ಯಕ್ಷ), ಮಹೇಶ್ ಎಸ್.ಶೆಟ್ಟಿ, ರತ್ನಾಕರ ಜಿ.ಶೆಟ್ಟಿ, ಕರುಣಾಕರ ಎಂ. ಶೆಟ್ಟಿ, ಮುಂಡಪ್ಪ ಎಸ್.ಪಯ್ಯಡೆ, ಕಿಶೋರ್‍ಕುಮಾರ್ ಎಂ.ಶೆಟ್ಟಿ, ಸಿಎ| ರಮೇಶ್ ಶೆಟ್ಟಿ ಮತ್ತು ಸಂತೋಷ ಎಂ.ಜಾವದ್ದಾಲೆ ವೇದಿಕೆಯಲ್ಲಿ ಆಸೀನರಾಗಿದ್ದರು. ಸೊಸೈಟಿಯ ಸದ್ಯದ ಬೆಳವಣಿಗೆಗೆ ಬಂಟರ ಸಂಘ ಮುಂಬಯಿ ಹಾಗೂ ಇದರ ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರ ಪಾತ್ರ, ಯೋಗದಾನ ಮಹತ್ತರದ್ದಾಗಿದೆ.

Matrubhoomi Society 27-AGM-5

Matrubhoomi Society 27-AGM-4

Matrubhoomi Society 27-AGM-3

Matrubhoomi Society 27-AGM-1

Matrubhoomi Society 27-AGM-BB

 

Matrubhoomi Society 27-AGM-11

Matrubhoomi Society 27-AGM-14

Matrubhoomi Society 27-AGM-9ಅವರೆಲ್ಲರ ಅವಿರತ ಶ್ರಮವೇ ಸೊಸೈಟಿಯ ಏಳಿಗೆಗೆ ಕಾರಣ. ಅವರೆಲ್ಲರ ಅನನ್ಯ ಸೇವೆಯನ್ನು ಕೊಂಡಾಡಿ ಅಭಿವಂದಿಸಲು ಬೇರೊಂದು ವೇದಿಕೆ ಸಿಗದು. ಪ್ರಸ್ತುತ ಸ್ವಂತಿಕೆಯ ಬ್ಯಾಂಕ್ ಸ್ಥಾಪನೆಯೇ ನಮ್ಮ ಸದ್ಯದ ಪ್ರಮುಖ ಗುರಿ ಆಗಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ರತ್ನಾಕರ್ ಮುಂಡ್ಕೂರು ತಿಳಿಸಿದರು. ಮಹಾನಗರದಲ್ಲಿನ ಸಮಸ್ತ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿಗಳಲ್ಲೇ ಮಾತೃಭೂಮಿ ಸೊಸೈಟಿ ಶಿಖರದಲ್ಲಿದೆ ಎನ್ನಲು ಅಭಿಮಾನವೆಣಿಸುತ್ತದೆ. ಉತ್ತಮ ವ್ಯವಹಾರ ಸಾಧಿಸಿ ವಿಶೇಷವಾಗಿ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿರುವುದು ಸ್ತುತ್ಯರ್ಹ. ಸೊಸೈಟಿಯ ನಿರ್ದೇಶಕ ಮಂಡಳಿಯು15 ವರ್ಷಗಳ ಹಿಂದೆ ಬ್ಯಾಂಕ್ ಸ್ಥಾಪಿಸುವ ನಿಟ್ಟಿನಲ್ಲಿ ಆಳವಾಗಿ ಚಿಂತಿಸಿ ಕಾರ್ಯನಿರತವಾಗುತ್ತಿದ್ದರೆಇಂದು ನಮಗೂ ಸ್ವಂತದ ಬ್ಯಾಂಕ್‍ವೊಂದು ಇರುತ್ತಿತ್ತು. ಅನೇಕ ದಶಕಗಳ ಹಿಂದೆ ಭೂಮಸೂದೆ ಕಾನೂನುನಿಂದಾಗಿ ಬಂಟರು ಅಸಹಾಯಕರಾದಾಗ ನಮ್ಮ ಆರ್ಥಿಕ ಸ್ಥಿತಿಗತಿಯ ದೂರದೃಷ್ಠಿಯನ್ನು ಪರಿಗಣಿಸಿದ ಸುಂದರಾಮ ಶೆಟ್ಟಿ ಅವರು ವಿಜಯಾ ಬ್ಯಾಂಕ್ ಸ್ಥಾಪಿಸಿ ಬಂಟರ ಪಾಲಿಗೆ ಧೀಶಕ್ತಿ ಆಗಿದ್ದರು. ಅವರಂತಹ ಧನಾತ್ಮಕ ಚಿಂತನೆಯನ್ನು ನಾವೂ ಮೈಗೂಡಿಸಬೇಕು. ಋಣಾತ್ಮಕ ಸಲಹೆಗಳಿಂದ ಉತ್ಸಾಹ ಕುಗ್ಗಿಸುವ ಪ್ರಯತ್ನದಿಂದ ಏನೂ ಸಾಧಿಸಲಸಾಧ್ಯ. ನಾವೆಲ್ಲರೂ ಏಕತೆಯಿಂದ ಮುನ್ನಡೆದು ಬ್ಯಾಂಕ್‍ನ್ನು ಸ್ಥಾಪಿಸಿ ಸಾಲಕ್ಕಾಗಿಯೇ ಬ್ಯಾಂಕನ್ನು ಬಳಸದೆ ಸಮುದಾಯದ ಸಾವಿರಾರು ನೌಕರಿಗಾಗಿ ಬ್ಯಾಂಕನ್ನು ನಿರ್ಮಿಸಿ ಆರ್ಥಿಕ ಬಲಶಾಲಿಗಳಾಗಿ ಮುನ್ನಡೆಯೋಣ ಕರ್ನಿರೆ ವಿಶ್ವನಾಥ ಶೆಟ್ಟಿಕರೆಯಿತ್ತರು. ಇದೇ ಸಂದರ್ಭದಲ್ಲಿ ಕಳೆದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ28ನೇ ರ್ಯಾಂಕ್ ಪಡೆದು ಉತ್ತೀರ್ಣರಾದ ಮಾತೃಭೂಮಿ ಸೊಸೈಟಿ ಉಪಾಧ್ಯಕ್ಷ ಉಳ್ತೂರುಗುತ್ತು ಮೋಹನದಾಸ ಶೆಟ್ಟಿ ಅವರ ಸುಪುತ್ರ ಸಿಎ| ಸಚಿನ್ ಎಂ.ಶೆಟ್ಟಿಅವರನ್ನು ಸನ್ಮಾನಿಸಲಾಯಿತು. ಹಾಗೂ ಪಿಗ್ಮಿಸಂಗ್ರಹಣಾ ಪ್ರತಿನಿಧಿಗಳ ಮಕ್ಕಳಾದ ಕು| ಶಿವಾನಿ ಡಿ.ಮಲ್ಲಿ (ಹೆಚ್‍ಎಸ್‍ಸಿ) ಹಾಗೂ ಮಾ| ಮಾನಸ್ ಶೆಟ್ಟಿ (ಎಸ್‍ಎಸ್‍ಸಿ) ಅವರಿಗೂ ಪ್ರತಿಭಾಪುರಸ್ಕಾರವನ್ನಿತ್ತು ಸೊಸೈಟಿಯ ವತಿಯಿಂದ ಸತ್ಕಾರಿಸಿ ಗೌರವಿಸಲಾಯಿತು. ಸೊಸೈಟಿಯ ಉಪಾಧ್ಯಕ್ಷ ಉಳ್ತೂರುಗುತ್ತು ಮೋಹನದಾಸ ಶೆಟ್ಟಿ ಸ್ವಾಗತಿಸಿದರು. ಗೌ| ಕಾರ್ಯದರ್ಶಿ ಜಯರಾಮ ಎ.ಶೆಟ್ಟಿ ಅವರು ಸಭಾ ಕಲಾಪಗಳನ್ನು ನಡೆಸಿ ಪಥಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಸಭೆಯ ಮುಂದಿಟ್ಟರು. ಗೌ| ಕೋಶಾಧಿಕಾರಿ ಸಿಎ| ರಮೇಶ್ ಬಿ.ಶೆಟ್ಟಿ ಅವರು ವಾರ್ಷಿಕ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು. ಸಭೆಯಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ|ಐ.ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‍ಕುಮಾರ್ ಶೆಟ್ಟಿ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಲತಾ ಜಯರಾಮ ಶೆಟ್ಟಿ, ಮಾತೃಭೂಮಿ ಸೊಸೈಟಿಯ ಮಾಜಿ ಕಾರ್ಯಾಧ್ಯಕ್ಷಶಿವರಾಮ ಜಿ.ಶೆಟ್ಟಿ, ಕೆ.ಡಿ ಶೆಟ್ಟಿ, ಎಂ.ಡಿ ಶೆಟ್ಟಿ, ಚಂದ್ರಶೇಖರ ಪಾಲೆತ್ತಾಡಿ, ಸುಧಾಕರ ಎಸ್.ಹೆಗ್ಡೆ, ಬಿ.ವಿವೇಕ್ ಶೆಟ್ಟಿ, ಪದ್ಮನಾಭ ಎಸ್.ಪಯ್ಯಡೆ, ಜಯರಾಮ ಎನ್.ಶೆಟ್ಟಿ, ಆರ್.ಸಿ ಶೆಟ್ಟಿ, ಕೃಷ್ಣ ವೈ.ಶೆಟ್ಟಿ, ಡಾ| ಸುನೀತ ಎಂ.ಶೆಟ್ಟಿ, ಬಿ.ಶಾಂತರಾಮ ಶೆಟ್ಟಿ, ಕೆ.ಚಂದ್ರಹಾಸ ಶೆಟ್ಟಿ ಸೇರಿದಂತೆ ಅನೇಕ ಮಹಾನೀಯರು ಹಾಜರಿದ್ದು, ತಮ್ಮ ಅಭಿಪ್ರಾಯ-ಅಭಿಮತಗಳನ್ನು ತಿಳಿಸಿ ಸಲಹೆ-ಸೂಚನೆಗಳನ್ನಿತ್ತು ಸೊಸೈಟಿ ಹಮ್ಮಿಕೊಂಡಿರುವ ಸರ್ವ ಯೋಜನೆಗಳು ಸಫಲತೆ ಸಾಧಿಸಲಿ ಎಂದು ಶುಭಾರೈಸಿದರು. ಸೊಸೈಟಿಯ ಹಿರಿಯ ವ್ಯವಸ್ಥಾಪಕಿ ಶ್ರೀಮತಿ ಮಲ್ಲಿಕಾ ಪಿ.ಶೆಟ್ಟಿ, ಪ್ರಬಂಧಕಿ ಶ್ರೀಮತಿ ಶಶಿಕಲಾ ಎಸ್.ಶೆಟ್ಟಿ, ವ್ಯವಸ್ಥಾಪಕರುಗಳಾದ ಕಿಶೋರ್ ಎಂ.ಪಾಟೀಲ್ ಮತ್ತು ಶಂಕರ್ ಬಿ.ಶೆಟ್ಟಿ ಸೇರಿದಂತೆ ದೈನಂದಿನ ಪಿಗ್ಮಿಸಂಗ್ರಹಣಾ ಪ್ರತಿನಿಧಿಗಳು ಉಪಸ್ಥಿತರಿದ್ದು, ಜಯರಾಮ ಎ.ಶೆಟ್ಟಿವಂದಿಸಿದರು.

By Suddi9

Leave a Reply

Your email address will not be published. Required fields are marked *