ಮುಂಬಯಿ : ಗತ ಒಂದೂವರೆ ಶತಮಾನದಲ್ಲಿ ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬಯಿ ಮಹಾನಗರದಲ್ಲಿನ ಕನ್ನಡ ಪತ್ರಿಕೋದ್ಯಮ ಇಟ್ಟ ಹೆಜ್ಜೆ ತೊಟ್ಟ ರೂಪದ ಸಮಗ್ರ ದಾಖಲಾತಿ, ವಾಣಿಜ್ಯ ನಗರಿಯಲ್ಲಿ ಕನ್ನಡ ಪತ್ರಿಕೋದ್ಯಮ ಬೆಳೆದು ಬಂದ ಬಗೆಯನ್ನು ಭಿನ್ನ ನೆಲೆಯಲ್ಲಿ ಅಧ್ಯಯನ ಮಾಡಿ ಮುಂಬಯಿಯಲ್ಲಿ ಪತ್ರಿಕೋದ್ಯಮ ಕನ್ನಡ, ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಬಲವರ್ಧನೆಗೆ ಕೊಟ್ಟ ಕೊಡುಗೆಯ ಅವಲೋಕನ ವಿಶ್ಲೇಷಣೆಯೊಂದಿಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ| ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಲ್ಲಿಉದಯವಾಣಿ ಮುಂಬಯಿ ಆವೃತ್ತಿಯ ಹಿರಿಯ ಉಪಸಂಪಾದಕ ದಿನೇಶ್ ಶೆಟ್ಟಿ ರೆಂಜಾಳ ಅವರು ಬರೆದು ಸಲ್ಲಿಸಿದ `ಮುಂಬಯಿ ಕನ್ನಡ ಪತ್ರಿಕೋದ್ಯಮ ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯ ಪಿಹೆಚ್. ಡಿ ಪದವಿ ನೀಡಿ ಗೌರವಿಸಿದೆ.

Dr.Dinesh Renjala-6

B-044 Dinesh Shetty Renjala

Dr.Dinesh Renjala-2

Dr.Dinesh Renjala-5ಮುಂಬಯಿ ಈ ಮಹಾಪ್ರಬಂಧವನ್ನು ರಚಿಸಿರುವುದು ವರ್ತಮಾನದ ತುರ್ತೇ ಆಗಿದ್ದು, ಈ ಮಹಾ ಪ್ರಬಂಧದ ಹೆಚ್ಚುಗಾರಿಕೆ. ಪ್ರಸ್ತುತ ಮಹಾಪ್ರಬಂಧದಲ್ಲಿ ಸೊಗಸಾಗಿ ಅನಾವರಣಗೊಂಡಿದೆ ಎಂದು ಮೌಲ್ಯಮಾಪಕರು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಬುಧವಾರ ದಿನೇಶ್ ಶೆಟ್ಟಿ ರೆಂಜಾಳ ತಮ್ಮ ಸಂಶೋಧನಾ `ಮುಂಬಯಿ ಪತ್ರಿಕೋದ್ಯಮ ಒಂದು ಸಾಂಸ್ಕೃತಿಕ ಅಧ್ಯಾಯನ’ಪ್ರಬಂಧ ಮಂಡಿಸಿ ಅದರ ದಾಖಲಾಧಾರಿತ ವಿಷಯಗಳ ಮೌಕಿಕ ಮೌಲ್ಯಮಾಪಣ ನಡೆಸಿದ್ದು, ಉಡುಪಿ ಎಂಜಿಎಂ ಕಾಲೇಜಿನ ಪ್ರಾಧ್ಯಾಪಕ, ನಾಡಿನ ಹೆಸರಾಂತ ಜಾನಪದ ಸಂಶೋಧಕ ಡಾ|ಅಶೋಕ್ ಆಳ್ವಉಪಸ್ಥಿತರಿದ್ದು, ಡಾ| ಜಿ.ಎನ್ ಉಪಾಧ್ಯ ಅವರನ್ನೊಳಗೊಂಡು ಅವರಿಗೆ `ಡಾಕ್ಟರೇಟ್ ಸನದು’ ಪ್ರದಾನಿಸಿದರು. ದಿನೇಶ್ ಶೆಟ್ಟಿ ಅವರು ಮುಂಬಯಿ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪ್ರಥಮ ರ್ಯಾಂಕ್  ಹಾಗೂ ವರದರಾಜ ಆದ್ಯ ಚಿನ್ನದ ಪದಕದೊಂದಿಗೆ ಪಡೆದು, ಬಳಿಕ ಡಾ| ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಲ್ಲಿ `ಬಿ.ಎಸ್.ಕುರ್ಕಾಲರ ಬದುಕು ಬರಹ’ದ ಕುರಿತಾದ ಅಧ್ಯಯನವನ್ನು ನಡೆಸಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಕಳೆದ 7 ವರ್ಷಗಳಿಂದ ಉದಯವಾಣಿ ಮುಂಬಯಿ ಆವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನೇಶ್ ಶೆಟ್ಟಿ ಅವರು ಆ ಮೊದಲು ಕರ್ನಾಟಕ ಮಲ್ಲ ದೈನಿಕದಲ್ಲಿಕಾರ್ಯ ನಿರ್ವಾಹಿಸಿದ್ದರು. ಗಿರಿಕುಂಜರ (ಎಂ.ಫಿಲ್ ಸಂಪ್ರಬಂಧ), ದೀಪದ ಬುಡ ಕತ್ತಲು (ಅಂಕಣ ಬರಹ), ಚಿನ್ನದ ಚೆಂಡು (ಶಿಶುಗೀತೆ) ಅವರ ಪ್ರಕಟಿತ ಕೃತಿಗಳು. ಇವರ ಹಲವಾರು ಸಕಾಲಿಕ ಲೇಖನಗಳು ದೈನಿಕ, ಇನ್ನಿತರ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಹಳೆ ವಿದ್ಯಾಥಿರ್s ಆಗಿರುವ ದಿನೇಶ್ ಮೂಲತಃ ಕಾರ್ಕಳ ರೆಂಜಾಳದ ನಾರಾಯಣ ಶೆಟ್ಟಿ ಹಾಗೂ ಶಾರದಾ ಎನ್.ಶೆಟ್ಟಿ ದಂಪತಿ ಸುಪುತ್ರ. ಇತ್ತೀಚೆಗೆ ವರ್ಷ ಶೆಟ್ಟಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ದಿನೇಶ್ ಶೆಟ್ಟಿ ದಂಪತಿಗೆ ನಾಡಿನ ನೂರಾರು ಗಣ್ಯರು ಶುಭಾರೈಸಿದ್ದಾರೆ.

By Suddi9

Leave a Reply

Your email address will not be published. Required fields are marked *