ಮುಂಬಯಿ: ಜೋರ್ಡನ್‍ಲ್ಲಿ ಉದ್ಯೋಗ ನಿರತರಾಗಿದ್ದು ಅಲ್ಲಿನ ಲಿಫ್ಟ್ (ಎಲೆವ್ಹೇಟರ್) ಅಪಘಾತಕ್ಕೆ ಬಂಟ್ವಾಳ-ಪಚ್ಚಿನಡ್ಕ ವಿರಾಜೆ ಮೂಲದ ಯುವಕ ನೋಯೆಲ್ ಫ್ರೆಡ್ ಕ್ರಾಸ್ಟ (26.) ಕಳೆದ ಬುಧವಾರ
ಮೃತ್ಯುವಶರಾಗಿದ್ದಾರೆ. ಕಳ್ಳಿಗೆ ಗ್ರಾಮದ ಪಚ್ಚಿನಡ್ಕ ವಿರಾಜೆ ನಿವಾಸಿಗಳಾದ ಫ್ರಾನ್ಸಿಸ್ ಕ್ರಾಸ್ಟ ಮತ್ತು ತೆರೇಜಾ ಕ್ರಾಸ್ಟ ದಂಪತಿ ಪುತ್ರನಾದ ನೋಯೆಲ್ ವೃತ್ತಿಯನ್ನು ಹರಸಿ ದುಬಾಯಿಯಲ್ಲಿ ಕಾರ್ಯನಿರತರಾಗಿದ್ದರು.
ದುಬಾಯಿಯ ದನ್‍ವೇ ಫುಸಿಯಾ ಗ್ಲಾಸಸ್ (ದನ್‍ವೇ ಎಲ್‍ಎಲ್‍ಸಿ) ಸಂಸ್ಥೆಯಲ್ಲಿ ಇಂಡಸ್ಟ್ರೀಯಲ್ ವೈಯರಿಂಗ್ ಎಲೆಕ್ಟ್ರೀಶನ್ ಉದ್ಯೋಗಿಯಾಗಿ ಸೇವೆಸಲ್ಲಿಸುತ್ತಿದ್ದು, 2015ರ ಸಪ್ಟೆಂಬರ್ 24ರ ವರೇಗೆ ಅವರ ವ್ಹಿಸಾ ಇದ್ದು ಅವರನ್ನು ದುಬಾಯಿ ಸಂಸ್ಥೆಯು ಕೆಲಸಕ್ಕೆಂದು ತಮ್ಮ ಜೋರ್ಡನ್‍ನ ಸೈಟ್‍ಗೆ ಕಳುಹಿಸಿದ್ದರು ಎನ್ನಲಾಗಿದೆ. ಕೆಲಸ ನಿರ್ವಾಹಿಸುತ್ತಿದ್ದಂ ತೆಯೇ ತಾವು ಇದ್ದ ಎಲೆವ್ಹೇಟರ್ ಸುಮಾರು 25 ಮಹಡಿಗಳಿಂದ ಕುಸಿದು ಬಿದ್ದು ನೋಯೆಲ್ ಮತ್ತು ಜೋರ್ಡನ್ ನಿವಾಸಿ ಉದ್ಯೋಗಿ ಸೇರಿದಂತೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವುದನ್ನು ನೋಯೆಲ್ ತಾಯಿಗೆ ಸಂಸ್ಥೆಯ ಹೆಚ್‍ಆರ್ ವ್ಯವಸ್ಥಾಪಕ ಮಾವ್ರ್ಹೀಸ್ ಅವರು ದೂರವಾಣಿ ಕರೆಯ
ಮೂಲಕ ತಿಳಿಸಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. ನೋಯೆಲ್ ಕುಟುಂಬಸ್ಥರು ಇದೀಗಲೇ ಮಂಗಳೂರುನ ಎಸ್‍ಪಿ ಕಛೇರಿ, ಗೃಹ ಇಲಾಖೆಗೆ ಸಂಪರ್ಕಿಸಿದ್ದು ಅಲ್ಲಿನ ಅಧಿಕೃತ ದಾಖಲೆ, ಮಾಹಿತಿಗಳಿಲ್ಲದೆ ದೂರು ದಾಖಲಿಸಲಸಾಧ್ಯವಾಗಿದ್ದಾರೆ. ಜೋರ್ಡನ್‍ನ ಭಾರತೀಯ ರಾಯಭಾರಿಯನ್ನು ಸಂಪರ್ಕಿಸಲೆತ್ನಿಸಿದ್ದು ಘಟನೆಯ ಅಧಿಕ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

