ಸಂಶೋಧನೆಯಲ್ಲಿ ಸ್ಪಷ್ಟೀಕರಣ ಅವಶ್ಯ: ಡಾ| ಅಶೋಕ್ ಆಳ್ವ
ಮುಂಬಯಿ : ವೇಗವಾಗಿ ಸಾಗುತ್ತಿರುವ ಜಾಗತೀಕರಣದ ಕಾಲದಲ್ಲೂ ಕನ್ನಡನಾಡು-ನುಡಿ,ಭಾಷಾವೈವಿಧ್ಯತೆಯನ್ನು ಮೆರೆಯುವಲ್ಲಿ ಮುಂಬಯಿಯಲ್ಲಿನ ಕನ್ನಡಿಗರ ಶ್ರಮ ಸ್ತುತ್ಯರ್ಹ. ಶೋಧನಾತ್ಮಕ ತಂತ್ರಜ್ಞಾನದ ವ್ಯವಸ್ಥೆಗಳೊಂದಿಗೆ ಭೌಗೊಳಿಕವಾಗಿ ಹೊಂದಿಕೊಳ್ಳುವ ಮಧ್ಯೆಯೂ ಕನ್ನಡಿಗರ ಭಾಷೆ, ಸಂಸ್ಕೃತಿ ಜಾಗೃತವಾಗಿಸಿ ಕನ್ನಡಿಗರ ಅಸ್ತಿತ್ವಉಳಿಸುವ ಪ್ರಯತ್ನವೂ ಅಭಿನಂದನೀಯ. ಮುಂಬಯಿಯಲ್ಲಿನ ಕನ್ನಡಿಗರು ಕನ್ನಡವನ್ನು ಕರ್ನಾಟಕದ ಒಳಗಿರಿಸದೆ ಹೊರನಾಡಿನಲ್ಲೂ ಪಸರಿಸಿ ವಿಶ್ವಮಾನ್ಯತೆಗೆ ಸಾಕ್ಷಿಯಾಗಿದ್ದಾರೆ. ಅದರಲ್ಲೂ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಕನ್ನಡದ ಸಾಂಸ್ಕೃತಿಕ ಕೊಡುಗೆಗಳನ್ನು ರೂಪಿಸಿ ಪುಟ್ಟ ಕರ್ನಾಟಕವನ್ನು ಮುಂಬಯಿಯಲ್ಲಿರಿಸಿದೆಎಂದು ನಾಡಿನ ಹೆಸರಾಂತ ಜಾನಪದ ಸಂಶೋಧಕ ಡಾ| ಅಶೋಕ್ ಆಳ್ವ ಅಭಿಪ್ರಾಯ ವ್ಯಕ್ತಪಡಿಸಿದರು. ಇಂದಿಲ್ಲಿ ಬುಧವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಡಬ್ಲ್ಯೂಆರ್‍ಐಸಿ ಭವನದಲ್ಲಿಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಆಯೋಜಿಸಿದ್ದ ಡಾ| ದಿನೇಶ್ ಶೆಟ್ಟಿ ರೆಂಜಾಳಅವರ ಸಂಶೋಧನಾ ಮೌಕಿಕ ಮೌಲ್ಯಮಾಪಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಡಾ| ಆಳ್ವ ಮಾತನಾಡಿದರು. ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಪತ್ರಕರ್ತ ದಿನೇಶ್ ಶೆಟ್ಟಿ ರೆಂಜಾಳ ತಮ್ಮ ಪಿಹೆಚ್‍ಡಿ ಸಂಶೋಧನಾ `ಮುಂಬಯಿ ಪತ್ರಿಕೋದ್ಯಮ ಒಂದು ಸಾಂಸ್ಕೃತಿಕ ಅಧ್ಯಾಯನ’ ಪ್ರಬಂಧ ಮಂಡಿಸಿ ಅದರ ದಾಖಲಾಧಾರಿತ ವಿಷಯಗಳ ಮೌಕಿಕ ಮೌಲ್ಯಮಾಪಣ
ನಡೆಸಿದರು. ಬಳಿಕ ಡಾ| ಜಿ.ಎನ್ ಉಪಾಧ್ಯ ಅವರನ್ನೊಳಗೊಂಡು ಡಾ| ಅಶೋಕ್ ಆಳ್ವರು ದಿನೇಶ್ ಶೆಟ್ಟಿ ರೆಂಜಾಳ ಅವರಿಗೆ `ಡಾಕ್ಟರೇಟ್ ಸನದು’ ಪ್ರದಾನಿಸಿ ಅಭಿನಂದಿಸಿದರು. ಪತ್ರಕರ್ತರು ಕನ್ನಡನಾಡು ಕಟ್ಟಿದ ಅಂಶ ಈ ಕೃತಿಯಲ್ಲಿ ಎದ್ದು ತೋರುತ್ತದೆ. ಆ ಮೂಲಕ ಸಮಗ್ರ ಸಮಾಜಕ್ಕೆ ಸಂಶೋಧಕರು ಕೃತಿಯನ್ನಾರಿಸಿದ್ದಾರೆ. ಸಂಶೋಧನೆಯಲ್ಲಿ ಸ್ಪಷ್ಟೀಕರಣ ಅವಶ್ಯ. ಸಂಶೋಧಕರು ತಟಸ್ಥವಾಗಿ ನಿಂತುಕೊಳ್ಳದೆ ಶಾಂತರೆಣಿಸಿ ಆಯ್ದ ವಿಚಾರದ ಅಗಾಧವಾದ ಜ್ಞಾನವ ಮೈಗೂಡಿಸುತ್ತ ಕ್ರೀಯಾಶೀಲತ್ವವನ್ನು ಸಮಾಜಕ್ಕೆ ತೋರ್ಪಡಿಸಬೇಕು.ಸದ್ಯ ಮಂಗಳೂರಿನಲ್ಲಿ ಸಂಶೋಧನೆಗೆ 10 ವಿದ್ಯಾಥಿರ್sಗಳೇ ಸಿಗುವುದು ಕಷ್ಟ. ಆದರೆ ಮುಂಬಯಿಯಲ್ಲಿ ಅದೂ ಕನ್ನಡ ವಿಭಾಗದಲ್ಲಿ 70 ವಿದ್ಯಾಥಿರ್sಗಳು ಇರುವುದು ಇಷ್ಟವಾಗಿ ನಿಮ್ಮಲ್ಲಿನ
ಕನ್ನಡಾಭಿಮಾನ ಸ್ವಷ್ಟಪಡಿಸಿ ಕೊಂಡೆನು. ಈ ಪ್ರಬಂಧಗ್ರಂಥ ಪರಮಕಾಂಕ್ಷೆಯಾಗಿದ್ದು ಕನ್ನಡ ಪತಿಕೋದ್ಯಮದ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆಯಲಿ ಎಂದು ಡಾ| ಆಳ್ವರು ಶುಭಾರೈಸಿದರು.
Dinesh Renjala Doctorate Kannada Dept-3

Dinesh Renjala Doctorate Kannada Dept-5

Dinesh Renjala Doctorate Kannada Dept-6

Dinesh Renjala Doctorate Kannada Dept-8

Dinesh Renjala Doctorate Kannada Dept-9

Dinesh Renjala Doctorate Kannada Dept-11

Dinesh Renjala Doctorate Kannada Dept-12

Dinesh Renjala Doctorate Kannada Dept-14

Dinesh Renjala Doctorate Kannada Dept-15

Dinesh Renjala Doctorate Kannada Dept-17

Dinesh Renjala Doctorate Kannada Dept-19

Dinesh Renjala Doctorate Kannada Dept-21

Dinesh Renjala Doctorate Kannada Dept-22

Dinesh Renjala Doctorate Kannada Dept-23

Dinesh Renjala Doctorate Kannada Dept-24

Dinesh Renjala Doctorate Kannada Dept-25

Dinesh Renjala Doctorate Kannada Dept-27

 

Dinesh Renjala Doctorate Kannada Dept-A7

 

 

Dinesh Renjala Doctorate Kannada Dept-B2

 

Dinesh Renjala Doctorate Kannada Dept-B5

Dinesh Renjala Doctorate Kannada Dept-C1ಡಾ| ಉಪಾಧ್ಯ ಅಧ್ಯಕ್ಷೀಯ ನುಡಿಗಳನ್ನಾಡಿ ದಿನೇಶ್ ರೆಂಜಾಳರು ಕೃತಿರೂಪದಲ್ಲಿ 400 ಪುಟದ ಮಹಾಪ್ರಬಂಧ ರಚಿಸಿದ್ದು ಅಭಿನಂದನೀಯ. ಮುಂಬಯಿ ಕನ್ನಡಿಗರ ಸಾಹಸ ಸಾಧನೆಗೆ ಅನೇಕ ದಶಕಗಳ ಇತಿಹಾಸವಿದೆ. ಅದರಲ್ಲಿ ಇಲ್ಲಿನ ಕನ್ನಡ ವಿಭಾಗವೂ ಒಂದಾಗಿದೆ. ಇಲ್ಲಿನ ಸಾಧಕರ ಅದ್ಭುತಗಳನ್ನು ಕಂಡಾಗ ಆಶ್ಚರ್ಯವಾಗುತ್ತದೆ. ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ರಾಷ್ಟ್ರದಲ್ಲೇ ಮೊದಲೆಣಿಸಿದೆ. ವಿದ್ಯಾಥಿರ್s ಮಿತ್ರರ ಸಹಯೋಗವೇ ಕಾರಣ.ವಿಶ್ವವಿದ್ಯಾಲಯಕ್ಕೆ ಈ ವಿಭಾಗ ಪರ್ಯಾಯ ಸಂಸ್ಕೃತಿ ಕಟ್ಟಿ ಕೊಡುತ್ತಿದ್ದೇವೆ. ಕನ್ನಡ ಉಳಿಸಿ ಬೆಳೆಸಲು ಕನ್ನಡ ಪತ್ರಿಕೋದ್ಯಮ, ರಾತ್ರಿ ಶಾಲೆಗಳು ಮತ್ತು ಹೊಟೇಲು ಉದ್ಯಮಗಳೇ ಇದಕ್ಕೆ ಮೂಲ ಕಾರಣವಾಗಿವೆ. ಇಲ್ಲಿನ ಪತ್ರಿಕೆಗಳಿಂದ ಕನ್ನಡಾಭಿಮಾನ ಬೆಳೆಯುತ್ತಿದೆ. ಸದ್ಯದ ಪತ್ರಿಕೋದ್ಯಮಕ್ಕೆ ರಾಜಕೀಯ, ಕ್ರೀಡೆ, ಸಿನೇಮಾಗಳೆಂಬ ಮೂರು ಮುಖಗಳೆನ್ನುತ್ತಾರೆ ಆದರೆ ನಾಲ್ಕನೇ ಮುಖವು ಸಾಂಸ್ಕೃತಿಕ ಮುಖವಾಗಿರುವುದನ್ನು ಮರೆಯಬಾರದು. ಪತ್ರಿಕೋದ್ಯಮ ಪರೋಕ್ಷವಾಗಿ ಜೀವನ ಶಿಕ್ಷಣ ನೀಡುತ್ತದೆ. ಇಂತಹದರಲ್ಲಿ ಸಂಶೋಧನೆಗಳು ಬರೇ ಮಾಹಿತಿಗಳ ಸಂಗ್ರಹವಾಗದೆಹೊಸ ವಿಷಯಗಳ ವಿಶ್ಲೇಷಣೆ ನಡೆಸಬೇಕು ಎಂದರು. ಡಾ| ದಿನೇಶ್ ಶೆಟ್ಟಿ ರೆಂಜಾಳ ಮಾತನಾಡಿ ಸುಮಾರು 150 ವರ್ಷಗಳ ಮುಂಬಯಿ ಪತ್ರಿಕೋದ್ಯಮದ ಸಿದ್ಧಿ ಸಾಧನಾ ದಾಖಲೆ ನಡೆಸಲು ಪ್ರಯತ್ನಿಸಿದ್ದು, ಮುಂಬಯಿ ಪತ್ರಿಕೋದ್ಯಮದಸಮಗ್ರ ಸಂಶೋಧನಾತ್ಮಕ ಅಧ್ಯಯನ ಇಂದಿಗೂ ನಡೆದಿಲ್ಲ. ಇದೂ ನಡೆಸಬೇಕಾಗಿದೆ. ಮುಂಬಯಿ ನಗರಿ ಕನ್ನಡಿಗರ ಭದ್ರ ಕೋಟೆಆಗಿದೆ. ಇಲ್ಲಿ ಕನ್ನಡಿಗರು ತಮ್ಮತನ ಮೆರೆದಿದ್ದು ತಮ್ಮ ತವರೂರನ್ನಾಗಿಸಿದ್ದಾರೆ. ಇವೆಲ್ಲಾ ವಿಚಾರಗಳನ್ನು ಸ್ಥೂಲವಾಗಿ ದಾಖಲಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ ಎಂದರು. ದಿನೇಶ್ ಶೆಟ್ಟಿ ರೆಂಜಾಳ ಅವರು ತನ್ನ ಸಾಧನೆಗೆ ಅನನ್ಯ ಸಹಯೋಗವಿತ್ತಡಾ| ಜಿ.ಎನ್ ಉಪಾಧ್ಯ ಅವರನ್ನು ಶಾಲು ಹೊದಿಸಿ, ಫಲ-ಪುಷ್ಪಗುಪ್ಚವನ್ನಿತ್ತು ಗುರುವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಹಿರಿಯ ಸಾಹಿತಿ ಡಾ| ಜಿ.ವಿ ಕುಲಕರ್ಣಿ, ಮೋಗವೀರ ಮಾಸಿಕದ ಸಂಪಾದಕ ಅಶೋಕ್ ಎಸ್.ಸುವರ್ಣ ಮತ್ತು ಜಯ ಎ.ಜೈನ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಡಾಕ್ಟರೇಟ್ ಗೌರವಕ್ಕೆ ಪಾತ್ರರಾದ ದಿನೇಶ್ ಶೆಟ್ಟಿಅವರಿಗೆ ಶುಭಾರೈಸಿದರು.
ಸರಸ್ವತಿ ಅಶೋಕ್ ಆಳ್ವ, ಬಿ.ಎಸ್ ಕುರ್ಕಾಲ್, ತೋನ್ಸೆ ವಿಜಯಕುಮಾರ್ ಶೆಟ್ಟಿ, ಡಾ| ಕರುಣಾಕರ ಶೆಟ್ಟಿ ಪಣಿಯೂರು, ಮನೋಹರ್ ನಾಯಕ್, ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ, ಡಾ| ಮಮತಾ ರಾವ್, ಡಾ|ಲೀಲಾವತಿ,ಸುರೇಖಾ ದೇವಾಡಿಗ, ವಿಕ್ರೋಲಿ ಬಂಟ್ಸ್ ಅಧ್ಯಕ್ಷಗಣೇಶ್ ಶೆಟ್ಟಿ, ಯುಗಾನಂದ ಶೆಟ್ಟಿ, ಉದಯ ಶೆಟ್ಟಿ, ಸತೀಶ್ ಶೆಟ್ಟಿ, ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ಪ್ರೇಮನಾಥ್ ಬಿ.ಶೆಟ್ಟಿ ಮುಂಡ್ಕೂರು, ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ, ಸದಸ್ಯರುಗಳಾದ ಸಾ.ದಯಾ, ಸುರೇಶ್ ಶೆಟ್ಟಿ ಯೆಯ್ಯಡಿ, ತೋನ್ಸೆ ಸಂಜೀವ ಪೂಜಾರಿ, ತಾಳಿಪಾಡಿಗುತ್ತು ರವೀಂದ್ರ ಶೆಟ್ಟಿ, ಸಮಾಜ ಸೇವಕರುಗಳಾದ ಎಸ್.ಕೆ ಸುಂದರ್, ರವಿ ಜಿ.ಮೆಂಡನ್ ಕುರ್ಕಾಲ್, ರಮೇಶ್ ಡಿ.ರೈ, ಪೇತ್ರಿ ವಿಶ್ವನಾಥ ಶೆಟ್ಟಿ, ಅಕ್ಷಿತ್ ಶೆಟ್ಟಿ ಬೈಲೂರು, ರಮಾ ಉಡುಪ, ಅನಿತಾ ಪೂಜಾರಿ ತಾಕೋಡೆ ಮತ್ತಿತರ ಮಹಾನೀಯರು ಉಪಸ್ಥಿತರಿದ್ದು ಡಾ| ದಿನೇಶ್ ಶೆಟ್ಟಿ ರೆಂಜಾಳ ಮತ್ತು ವರ್ಷಾ ದಿನೇಶ್ ದಂಪತಿಯನ್ನು ಅಭಿನಂದಿಸಿ ಶುಭಾರೈಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ದಿನೇಶ್ ಶೆಟ್ಟಿ ರೆಂಜಾಳ ಕೃತಜ್ಞತೆ ಅರ್ಪಿಸಿದರು.

By Suddi9

Leave a Reply

Your email address will not be published. Required fields are marked *