ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ದೇವಸ್ಯ ಮಠದಲ್ಲಿ 12 ಬ್ರಹ್ಮ ಕಮಲ ಅರಳಿದೆ ಇದಕ್ಕೆ ರಾತ್ರಿ ರಾಣಿ ಎಂತಲೂ ಕರೆಯುತ್ತಾರೆ. ದಾರ್ಮಿಕ ನಂಬಿಕ ಪ್ರಕಾರ ಕಮಲನಾಭನಾದ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರಚಾಚಿದಾಗ ಅದರ ಮೇಲೆ , ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ ಎನ್ನುವ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ ಬ್ರಹ್ಮ ಕಮಲ ಎನ್ನುವ ಹೆಸರು ಬಂದಿದೆ ಎಂಬ ನಂಬಿಕೆ ಇದೆ, ಕಿನ್ನಿಗೋಳಿ ಸಮೀಪದ ಕೊಡೆತ್ತೂರು ದೆವಸ್ಯ ಮಠದಲ್ಲಿ, ಒಟ್ಟು 12 ಬ್ರಹ್ಮ ಕಮಲಗಳು ಒಂದೇ ದಿನದಲ್ಲಿ ಅರಳಿ ಸ್ಥಳಿಯರಿಗೆ ಆಕರ್ಷಿತವಾಗಿದೆ, ವೇದವ್ಯಾಸ ಉಡುಪರು ಮಠದ ಶ್ರೀನಿವಾಸ ದೇವರ ಮುಂದೆ ಕುಂಡದಲ್ಲಿ ಈ ಗಿಡವನ್ನು ಬೆಳೆಸಿದ್ದು, ದಿನವೂ ದೇವರ ತೀರ್ಥವನ್ನು ಹಾಕಿ ಸಲಹುತ್ತಿದ್ದು, ಗಿಡವು ಹುಲುಸಾಗಿ ಬೆಳೆದಿದೆ. ವಿಶೇಷವೆಂದರೆ ಜೂನ್ ಅಥವಾ ಜುಲೈ ತಿಂಗಳಲ್ಲಿ ಹೆಚ್ಚಾಗಿ ಅರಳುವ ಈ ಹೂವು ಅತ್ಯಂತ ಆಕರ್ಷಣೀಯವಾಗಿದೆ, ರಾತ್ರಿ ಸುಮಾರು 8 ಗಂಟೆಯ ನಂತರ ಅರಳಿ ಬೆಳ್ಳಗ್ಗೆ ಬಾಡಿ ಹೋಗುತ್ತದೆ, ಆದರೆ ಯಾವುದೇ ಸುವಾಸನೆಯನ್ನು ಬೀರುದಿಲ್ಲ.


ಚಿಕ್ಕ ಚಿಕ್ಕ ಹೂ ಕುಂಡದಲ್ಲಿ ಬೆಳೆಸಬಹುದಾದ ಈ ಗಿಡದ ಎಲೆಯೇ ಕಾಂಡ, ಇದನ್ನು ನೇರವಾಗಿ ಮಣ್ಣಲ್ಲಿ ನೆಟ್ಟರೆ, ಎಲೆಯ ಮೆಲೇಯೇ ಮತ್ತೋಂದು ಎಲೆ ಬೆಳೆದು ಸುಮಾರು ಒಂದು ವರ್ಷದಲ್ಲಿ ಹೂವನ್ನು ಬಿಡುತ್ತದೆ , ಹಿಮಾಲಯದ ಸುತ್ತ ಮುತ್ತ ಈ ಗಿಡ ಹೆಚ್ಚಾಗಿ ಬೆಳೆಯುತ್ತದೆ. ಇದು ಬೆಳೆಯುತ್ತಾ ಎತ್ತರಕ್ಕೆ ಹೋದಂತೆ ಕಾಂಡ ಕೂಡ ದಪ್ಪದಾಗುತ್ತಾ ಹೋಗುತ್ತದೆ. ಮಹಿಳೆಯರಿಗೆ ಈ ಹೂವು ಪೂಜ್ಯನೀಯ. ಉತ್ತರ ಕರ್ನಾಟಕ ಬಾಗದಲ್ಲಿ ಈ ಹೂವು ಅರಳಿದ ತಕ್ಷಣ ಇದಕ್ಕೆ ಮಹಿಳೆಯರು ವಿಶೇಷವಾದ ಪೂಜೆಯನ್ನು ಸಲ್ಲಿಸುತ್ತಾರೆ, ಮಾತ್ರವಲ್ಲದೆ ಬ್ರಹ್ಮಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ ಆ ಮನೆಯ ಒಡೆಯರು ಸಂಪದ್ಭರಿತರಾಗುತ್ತಾರೆ ಎನ್ನುವ ನಂಬಿಕೆಯೂ ಇದೆ. ಒಟ್ಟಿನಲ್ಲಿ ದಾರ್ಮಿಕ ನಂಬಿಕೆಯನ್ನು ಹೊಂದಿದ ಈ ಹೂವು ನೋಡ ಸಿಗುದೇ ಬಹಳ ಅಪರೂಪವಾಗಿದೆ ನಿಶಾಂತ್ ಕಿಲೆಂಜೂರು

