ಕಟೀಲು: ಶ್ರೀ ಕ್ಷೇತ್ರ ಕಟೀಲಿನಲ್ಲಿ ಆ.28 ಶುಕ್ರವಾರ, 29 ಶನಿವಾರ ಮತ್ತು 30 ಆದಿತ್ಯವಾರದಂದು ನಡೆಯಲಿರುವ ಕನ್ನಡ ನಾಡು-ನುಡಿ ಸಾಂಸ್ಕೃತಿಕ ಉತ್ಸವ 20ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರೌಢ-ಪ್ರತಿಭಾನ್ವಿತ ಕಲಾವಿದರಿಗೆ, ಉದಯೋನ್ಮುಖ ಕಲಾ ಪ್ರತಿಭೆಗಳಗೆ ಭರತನಾಟ್ಯ, ಶಾಸ್ತ್ರೀಯ ಸಂಗೀತ, ವಚನ, ಸುಗಮ ಸಂಗೀತ, ಭಾವಗೀತೆ, ಗಮಕ ವಾಚನ, ಕಾವ್ಯ ವಾಚನ, ಚಿತ್ರಕಲೆ, ದಾಸ ಸಂಕೀರ್ತನೆ, ಯಕ್ಷಗಾನ ತಾಳಮದ್ದಳೆ, ಜನಪದ ಪ್ರಕಾರಗಳು, ವಾದ್ಯ ಸಂಗೀತವಾದನಗಳು, ಹರಿಕಥೆ, ನಾಟಕ, ಅಣಕು ಪ್ರದರ್ಶನ (ಮಿಮಿಕ್ರಿ) ಏಕಪಾತ್ರಾಭಿನಯ ಈ ಸಾಂಸ್ಕ್ರತಿಕ ಆಯಾಮಗಳಿಗೆ ಅವಕಾಶ ಕಲ್ಪಿಸಲಾಗಿದ್ದು ಅಪೇಕ್ಷಿತ ತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರತಿಭೆಗನುಗುಣವಾಗಿ ಏಕವ್ಯಕ್ತಿಗಳಿಗೆ 5 ರಿಂದ 15 ನಿಮಿಷ, ತಂಡಗಳಿಗೆ ಸುಮಾರು 15 ನಿಮಿಷ ದಿಂದ ಒಂದೂವರೆ ಗಂಟೆ ಕಾಲ ಆಯ್ಕೆ ಸಮಿತಿಯ ನಿರ್ಣಯದಂತೆ ಅವಕಾಶ ಕಲ್ಪಿಸಲಾಗುವುದು.
ಜಿಲ್ಲೆಯಾದ್ಯಂತದಿಂದ ಭಾಗವಹಿಸಲು ಅಪೇಕ್ಷಿಸುವ ತಂಡಗಳು ಮತ್ತು ವ್ಯಕ್ತಿಗಳು ತಮ್ಮ ಪೂರ್ಣ ಮಾಹಿತಿ ಸ್ವ-ವಿವರಗಳನ್ನೊಳಗೊಂಡಂತೆ ಗೌರವ ಕಾರ್ಯದರ್ಶಿಗಳು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, `ಶ್ರೀಕೃಷ್ಣ ಸಂಕೀರ್ಣ’, ಕೊಡಿಯಾಲ್ಬೈಲ್, ಮಂಗಳೂರು-3 ಫೋನ್: 2492239 ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.
ಗುಣಮಟ್ಟದ ಆಧಾರದಲ್ಲಿ ಆಯ್ಕೆ ಸಮಿತಿಯಿಂದ ಆಯ್ಕೆಗೊಂಡ ತಂಡಗಳಿಗೆ ಸಾಂಕೇತಿಕ ಗೌರವ ಸಂಭಾವನೆ, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ನೀಡಿ 3 ದಿನಗಳಲ್ಲಿ ಯಾವುದಾದರೊಂದು ದಿನ ಅವಕಾಶ ಕಲ್ಪಿಸಲಾಗುವುದು ಎಂದು ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
