Kinnigoli AngaraguddeKinnigoli Angaragudde

ಸುದ್ಕಿದಿ 9ನ್ನಿಗೋಳಿ; ಎ.10.ಭಜನಾ ಮಂದಿರಗಳು ಧರ್ಮ ಸಂಸ್ಕಾರ ಸಂಸ್ಕ್ರತಿಯ ಕೇಂದ್ರವಾಗಬೇಕು. ಸಮಾಜದ ಅಭಿವೃದ್ಧಿಗೆ ಹಾಗೂ ಆಥರ್ಿಕ ದುರ್ಬಲರಿಗೆ ಸಹಾಯ ಹಸ್ತ ನೀಡುವಲ್ಲಿ ಶ್ರಮಿಸಬೇಕು ಎಂದು ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಉಮನಾಥ ಕೋಟ್ಯಾನ್ ಹೇಳಿದರು.
ಬುಧವಾರ ಕೆಂಚನಕೆರೆ ಸಮೀಪ ಅಂಗರಗುಡ್ಡೆ ರಾಮನಗರದಲ್ಲಿ ಶ್ರೀ ರಾಮ ಭಜನಾ ಮಂಡಳಿಯ 29ನೇ ವಾರ್ಷಿಕೋತ್ಸವದ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಪಠೇಲ್ ವಾಸುದೇವ ರಾವ್ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕೊಲೆಕಾಡಿ ವಾದಿರಾಜ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೃಷ್ಣ ಶೆಟ್ಟಿಗಾರ್, ಜೀವನ್ ಶೆಟ್ಟಿ, ಮೋಹನ್ ಕುಮಾರ್, ಕುಮಾರಿ ಅಕ್ಷಿತಾ ಅವರನ್ನು ಮಂದಿರದ ವತಿಯಿಂದ ಸನ್ಮಾನಿಸಲಾಯಿತು.

Kinnigoli Angaragudde
Kinnigoli Angaragudde

ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಮೀನಾಕ್ಷಿ ದೇವಾಡಿಗ ಅಂಗರಗುಡ್ಡೆ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮಹಿಳಾ ಮಂಡಲದ ಅಧ್ಯಕ್ಷೆ ಕಮಲಾಕ್ಷಿ ದೇವಾಡಿಗ, ಶರತ್ ಶೆಟ್ಟಿ ಕಿನ್ನಿಗೋಳಿ, ವಿಕ್ಟರ್ ಸೆರಾವೊ, ರಾಜೇಶ್ ಕೆಂಚನಕೆರೆ, ಶ್ರೀಕಾಂತ್ ಶೆಟ್ಟಿ, ವಿಜಯಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸತೀಶ್ ಹಾಗೂ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *