Seemanth Spl Program Hand BillSeemanth Spl Program Hand Bill
Seemanth Spl Program Hand Bill
Seemanth Spl Program Hand Bill

ಮಂಗಳೂರು; ಸೀಮಂತ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಅಭಿಯಾನ
ರಾಷ್ಟ್ರದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಜಾಗೃತಿಗಾಗಿ ಚುನಾವಣಾ ಆಯೋಗವು ಈಗಾಗಲೇ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಮತದಾರರನ್ನು ಚುನಾವಣಾ ಕೇಂದ್ರಕ್ಕೆ ತೆರಳಲು ವಿವಿಧ ರೀತಿಯಲ್ಲಿ ಸಮಾಜದಲ್ಲಿ ಕಾಯರ್ೋನ್ಮುಖವಾಗಿದೆ. ಇದೇ ಪರಿಕಲ್ಪನೆಯಲ್ಲಿ ಮೂಲ್ಕಿಯ ಪತ್ರಕರ್ತರೋರ್ವರು ತಮ್ಮ ಖಾಸಗಿ ಕಾರ್ಯಕ್ರಮದಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಸಂಯೋಜಿಸಿಕೊಂಡಿದ್ದಾರೆ.
ಮೂಲ್ಕಿಯ ಪತ್ರಕರ್ತ ಹಾಗೂ ರಂಗಭೂಮಿ ನಟ ನರೇಂದ್ರ ಕೆರೆಕಾಡುರವರು ತಮ್ಮ ಪತ್ನಿ ಉಷಾರವರ ಸೀಮಂತ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಏಪ್ರಿಲ್ 14ರಂದು ಬೆಳಿಗ್ಗೆ 11ಕ್ಕೆ ಕೆರೆಕಾಡಿನ “ನಮ್ಮನೆ” ನಿವಾಸದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಅಂತಾರಾಷ್ಟ್ರೀಯ ವಾಸ್ತುತಜ್ಞರಾದ ಖ್ಯಾತ ಜ್ಯೋತಿಷಿ ಬೆಂಗಳೂರಿನ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಈ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸುವ ಆತ್ಮೀಯರು ಮತದಾನದ ಹಕ್ಕುಳ್ಳವರು ಏಪ್ರಿಲ್ 17ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಮಾಡುವ ಬಗ್ಗೆ ವಿವಿಧ ಮಾಹಿತಿಯುಳ್ಳ ಘೋಷಣಾ ಪತ್ರ ಸಹಿತ ಇನ್ನಿತರ ಜಾಗೃತಿ ಕಾರ್ಯಕ್ರಮವು ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ನರೇಂದ್ರ ಕೆರೆಕಾಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮ್ಮ ವಿಶ್ವಾಸಿ
ನರೇಂದ್ರ ಕೆರೆಕಾಡು
“ನಮ್ಮನೆ” ಅಂಚೆ;ಕೆಂಚನಕೆರೆ, ಮೂಲ್ಕಿ-574154, ಮಂಗಳೂರು
ಸಂಪರ್ಕ; 9663393374

By suddi9

Leave a Reply

Your email address will not be published. Required fields are marked *