ಬಜ್ಪೆ: ವಿಪರೀತ ಬಡ್ಡಿ ಸುಲಿದು, ಹಣಕ್ಕಾಗಿ ಜೀವಬೆದರಿಕೆಯೊಡ್ಡುತ್ತಿದ್ದ ಇಬ್ಬರ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಡುಪೆರಾರ ಗ್ರಾಮದ ಈಶ್ವರಕಟ್ಟೆ ನಿವಾಸಿಗಳಾದ ಅಶೋಕ್ ಭಂಡಾರಿ ಹಾಗೂ ಆತನ ತಮ್ಮ ದಿನೇಶ್ ಭಂಡಾರಿ ಪ್ರಕರಣದ ಆರೋಪಿಗಳಾಗಿದ್ದಾರೆ.
ಜಯ ಪೂಜಾರಿ ಎಂಬವರು ಆರೋಪಿಗಳಿಂದ ಬಡ್ಡಿಗೆ ಕೈಸಾಲ ಪಡೆದಿದ್ದು ಭದ್ರತೆಗಾಗಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ನ ಖಾಲಿ ಚೆಕ್ಗಳನ್ನು ನೀಡಿದ್ದಲ್ಲದೆ ಖಾಲಿ ಛಾಪಾ ಕಾಗದಕ್ಕೆ ಸಹಿ ನೀಡಿದ್ದರು. ಜಯ ಪೂಜಾರಿಯವರು ತಾನು ಪಡೆದ ಹಣವನ್ನು ಬಡ್ಡಿ ಸಮೇತ ತೀರಿಸಿದ್ದರೂ ಸಹ ಆರೋಪಿಗಳು ತಾನು ಪಡೆದ ಚೆಕ್ಬುಕ್ಗಳನ್ನು ವಾಪಸ್ ಕೊಡದೆ ಕಿರುಕುಳ ನೀಡಿದ್ದಲ್ಲದೆ, ಇನ್ನೂ ಬಡ್ಡಿ ಬಾಕಿ ಇದೆ ಎಂದು ಹೇಳಿ ಕಿರುಕುಳ ನೀಡಿದ್ದಾರೆ.
ವಿಪರೀತ ಹಣ ವಸೂಲಿ ಮಾಡಿಕೊಂಡು ಚೆಕ್ಕನ್ನು ವಾಪಾಸ್ ನೀಡದೆ ಮೋಸ ಮಾಡಿ ಜೀವಬೆದರಿಕೆಯೊಡ್ಡಿದ್ದಾರೆಂದು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *