Arvind-Kejriwalನವದೆಹಲಿ: ದೆಹಲಿಯಲ್ಲಿ  ನಾಲ್ವರು ಕಾಮುಕರು ಡೆನ್ಮಾಕರ್್ ಮಹಿಳೆಯೊಬ್ಬಳನ್ನು ಸಾಮೂಹಿಹ ಅತ್ಯಾಚಾರಗೊಳಿಸಿ ಆಕೆಯ ನಗನಗದನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಎಡಬಿಡಂಗಿ ರೀತಿಯಲ್ಲಿ ಉತ್ತರ ನೀಡಿದ್ದಾರೆ.
ಇದರ ಸಂಪೂರ್ಣ ಹೊಣೆಯನ್ನು ದೆಹಲಿಯ ಪೊಲೀಸರ ತಲೆಗೆ ಕಟ್ಟಿದ್ದು ಜವಾಬ್ದಾರಿಯಿಂದ ನುಣುಚಲು ಯತ್ನಿಸಿದ್ದಾರೆಂಬ ಕೂಗು ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ಮೀವು ಮಾದಕ ದ್ರವ್ಯ ಹಾಗೂ ಲೈಂಗಿಕ ಅಪರಾಧಿಗಳನ್ನು ಬಂಧಿಸದೆ ಇದ್ದರೆ ಅತ್ಯಾಚಾರದ ಪ್ರವೃತ್ತಿ ಹೆಚ್ಚಾಗುತ್ತದೆ, ಅಲ್ಲದೆ ಪೊಲೀಸರ ಕಾಯರ್ಾಚರಣೆಯೂ ನಿಧಾನವಾಗಿದೆ ಎಂದು ದೂರಿದ್ದಾರೆ.
ಆರೋಪಿಗಳ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ, ದಿಲ್ಲಿಯಲ್ಲೇ ಯಾಕೆ ಅತ್ಯಾಚಾರಗಳಾಗುತ್ತದೆ ಎಂದು ಪ್ರಶ್ನಿಸಿದ ಅವರು ದಿಲ್ಲಿಯಲ್ಲಿ ಅಪರಾಧ ನಡೆಯದಿದ್ದರೆ ಅದಕ್ಕೆ ಪೊಲೀಸರು ಕಾರಣರಲ್ಲ, ಅದು ನಡೆಯಲಿಲ್ಲ ಎಂದು ಹೇಳಬೇಕಾಗುತ್ತದಷ್ಟೆ, ಅದನ್ನು ನಡೆಯದಂತೆ ತಡೆಯಬೇಕಾಗಿರುವುದು ಪೊಲೀಸರ ಕರ್ತವ್ಯ… ಎಂದೆಲ್ಲಾ ವಿಚಿತ್ರ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
2012ರ ಡಿಸೆಂಬರ್ನಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್ ಶೀಲಾ ದೀಕ್ಷಿತ್ ಸರಕಾರ ರಾಜಧಾನಿಯಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ವಿಫಲವಾಗಿದೆ ಎಂದು ದೂರಿದ್ದರು. ಆದರೆ ರಾಜ್ಯದಲ್ಲಿ ತನ್ನದೇ ಆಡಳಿತವಿರುವಾಗ ಇಂಥದ್ದೇ ಪ್ರಕರಣ ನಡೆದಾಗ ಅದನ್ನು ಪೊಲೀಸರ ತಲೆಗೆ ಕಟ್ಟಲು ನೋಡುತ್ತಿರುವ ಕೇಜ್ರಿ ಎಡಬಿಡಂಗಿ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ

By suddi9

Leave a Reply

Your email address will not be published. Required fields are marked *