ಬಜ್ಪೆ: `ಮಳೆ ಜೋರಾಗಿ ಸುರೀತಿರೋ ಕಾರಣ ಸೇತುವೆ ಕಾಮಗಾರಿ ನಡೆಸಲು ಆಗುತ್ತಿಲ್ಲ, ಹೀಗಾಗಿ ಕಾಮಗಾರಿ ಮುಂದಿನ ಆಗಸ್ಟ್ 15ರೊಳಗೆ ಮುಗಿಸಿ ಜನರ ಸಂಚಾರಕ್ಕೆ ಲಭ್ಯವಾಗುತ್ತದೆ. ಬಜ್ಪೆ-ಕಟೀಲು ರಾಜ್ಯ ಹೆದ್ದಾರಿಯಾಗಿರುವ ಕಾರಣ ವಾಹನ ಸವಾರರು, ಜನಸಾಮಾನ್ಯರಿಗೆ ಇದರಿಂದ ಅನನುಕೂಲವಾಗಿದೆ. ಈ ಬಗ್ಗೆ ಜನರಲ್ಲಿ ನಾನು ಕ್ಷಮೆ ಯಾಚಿಸ್ತೀನಿ. ಬಜ್ಪೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಯಲಿದೆ’ ಹೀಗೆಂದು ಹೇಳಿದವರು ರಾಜ್ಯ ಮೀನುಗಾರಿಕಾ ಮತ್ತು ಕ್ರೀಡಾ ಸಚಿವರಾದ ಅಭಯಚಂದ್ರ ಜೈನ್ ಅವರು. ಸೋಮವಾರ ಬಜ್ಪೆ ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತಾಡಿದ ಅವರು ಹೀಗೆ ಹೇಳಿದರು.
DSC_0348

DSC_0355

1
`ಬಜ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹತ್ತಾರು ಯೋಜನೆಗಳು ಕಾರ್ಯಗತವಾಗಿವೆ. ಇಲ್ಲಿನ ಗ್ರಾಮ ಪಂಚಾಯತ್ ಜನರ ಆಶೋತ್ತರಗಳಿಗೆ ಜಾತಿ-ಧರ್ಮ ಮರೆತು ಸ್ಪಂದಿಸುತ್ತಿದೆ. ಹೀಗಾಗಿ ಜನರು ಮತ್ತೆ ಐದು ವರ್ಷಗಳ ಅಧಿಕಾರವನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ನೀಡಿದ್ದಾರೆ’ ಎಂದು ಅಭಯಚಂದ್ರ ಜೈನ್ ಹೇಳಿದರು. ಬಜ್ಪೆ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಿಸುವ ಸಮಸ್ಯೆಯಿದ್ದು ಅದಕ್ಕೆ ಶೀಘ್ರವೇ ಪರಿಹಾರ ಕಂಡುಕೊಳ್ಳುವುದಾಗಿ ಸಚಿವರು ತಿಳಿಸಿದರು.

ಬಜ್ಪೆ ಏರ್ಪೋರ್ಟ್ ರಸ್ತೆ ತೀರಾ ಹದಗೆಟ್ಟಿದ್ದು ಇದನ್ನು ಮೇಲ್ದರ್ಜೆಗೇರಿಸಲಾಗುವುದು ಎಂದ ಸಚಿವರು ನಾಗರಿಕರು ತಾಳ್ಮೆಯಿಂದ ನಮ್ಮನ್ನು ಬೆಂಬಲಿಸಿದಲ್ಲಿ ಬಜ್ಪೆಯನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಶ್ರಮಿಸುವುದಾಗಿ ಸಚಿವರು ಹೇಳಿದರು. ಇದೇ ಸಂದರ್ಭ ಬಜ್ಪೆ ಪಂಚಾಯತ್ ಪಕ್ಕದಲ್ಲಿ ನಡೆಯುತ್ತಿರುವ ಸಮಾಜ ಭವನ ಕಾಮಗಾರಿಯನ್ನು ವೀಕ್ಷಿಸಿದ ಸಚಿವರು ಅಲ್ಲಿ ಕ್ರೀಡಾಸಕ್ತರಿಗೆ ಟೇಬಲ್ ಟೆನ್ನಿಸ್ನಂಥ ಕ್ರೀಡೆಗೆ ಬೇಕಾದ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಈ ವೇಳೆ ಪಂಚಾಯತ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್ ಉಪಸ್ಥಿತರಿದ್ದರು.

ಗುರುವಾರ ಪ್ರತಿಭಟನೆ:
ಬಜ್ಪೆಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿ ವಿಳಂಬವಾಗಿದ್ದು ಈ ವಿರುದ್ಧ ನಾಗರಿಕ ಸಮತಿ ಬಜ್ಪೆ ಹಾಗೂ ಡಿವೈಎಫ್ಐ ಸಂಘಟನೆ ಹಮ್ಮಿಕೊಂಡಿರುವ ಪ್ರತಿಭಟನೆ ಜುಲೈ 30ರಂದು ನಡೆಯಲಿದೆ ಎಂದು ಸಂಘಟನೆ ಹೇಳಿಕೊಂಡಿದೆ. ಸೋಮವಾರ ನಡೆಯಬೇಕಿದ್ದ ಪ್ರತಿಭಟನೆಯನ್ನು ಕಾರಣಾಂತರದಿಂದ ಮುಂದೂಡಲಾಗಿದ್ದು ಗುರುವಾರ ಮುಂಜಾನೆ ಬಜ್ಪೆ ಪೆಟ್ರೋಲ್ ಪಂಪ್ ಸಮೀಪ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟಿಸುವ ಮೂಲಕ ಇಲಾಖೆಗಳಿಗೆ ಬಿಸಿ ಮುಟ್ಟಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

By Suddi9

Leave a Reply

Your email address will not be published. Required fields are marked *