ಮುಂಬಯಿ, ಜು.26: ತುಳುನಾಡ ಸಂಸ್ಕೃತಿ ವೈಶಿಷ್ಟ್ಯಪೂರ್ಣವಾದದ್ದು, ಇಂತಹ ಪುಣ್ಯಾಧಿ ಸಂಸ್ಕೃತಿಯ ಸಂಸ್ಕಾರ ಮಕ್ಕಳಲ್ಲಿ ರೂಪಿಸಿದರೆ ಮಾತ್ರ ಬದುಕು ಹಸನಾಗುವುದು. ಜೀವನ ಸಾರ್ಥಕತೆಯೊಂದಿಗೆ ದೇಶದ ಪ್ರಗತಿಯನ್ನೂ ಯುವ ಜನತೆ ಚಿಂತಿಸಬೇಕು. ಧ್ಯಾನದಿಂದ ಸಮಾಧಾನ ಜೀವನ ಸಾಧ್ಯವಾಗಿದ್ದು ಅದಕ್ಕಾಗಿ ಪ್ರತೀಯೋರ್ವರೂ ಅಧ್ಯಾತ್ಮಿಕತೆಯಲ್ಲಿ ಬಲಯುತರಾಗಿ ಸಂಸ್ಕಾರಯುತ ಬದುಕನ್ನು ಮೈಗೂಡಿಸಬೇಕು. ನಾವು ಸ್ವಚ್ಚತಾ ಚಿಂತನೆಗೆ ಪ್ರಧಾನ ಆದ್ಯತೆ ನೀಡುತ್ತಿದ್ದು ಮಕ್ಕಳಲ್ಲಿ ಇಂತಹ ಚಿಂತನೆಯನ್ನು ಬೆಳೆಸುವಲ್ಲಿ ಶ್ರಮಿಸುತ್ತಿದ್ದೇವೆ. ನಮ್ಮಲ್ಲಿನ ಹದಮೀರಿ ಬೆಳೆದ ವೈಯಕ್ತಿಕತೆ ಮತ್ತು ಸ್ವಕೀಯತಾ ಪ್ರವೃತ್ತಿ ನಮ್ಮ ಸಮಾಜಕ್ಕೆ ಕಂಠಕವನ್ನುಂಟು ಮಾಡುತ್ತಿದೆ. ಇವುಗಳೆಲ್ಲವುಗಳಿಂದ ಮುಕ್ತರಾಗಿ ರಾಷ್ಟ್ರಪ್ರೇಮಕ್ಕೆ ಆದ್ಯತೆ ನೀಡಿ ಸಾಮರಸ್ಯದ ಬಾಳಿಗೆ ಪ್ರೇರಕರಾಗಬೇಕು ಎಂದು ಮಂಗಳೂರು ತಾಲೂಕು ಮೂಡಬಿದ್ರೆ ಕರಿಂಜೆ ಗ್ರಾಮದಲ್ಲಿನ ಶ್ರೀ ವೀರಾಂಜನೇ ಯ ಸ್ವಾಮಿ ದೇವಸ್ಥಾನದ ಶ್ರೀ ಮುಕ್ತಾನಂದ ಸ್ವಾಮೀಜಿ ತಿಳಿಸಿದರು.
ಇಂದಿಲ್ಲಿ ರವಿವಾರ ಸಂಜೆ ಮಲಾಡ್ ಪಶ್ಚಿಮದ ಲಿಂಕ್ರಸ್ತೆಯಲ್ಲಿನ ಸಬ್ಕುಛ್ ಕಾಂಪ್ಲೆಕ್ಸ್ನಲ್ಲಿ ಭೇಟಿಯನ್ನಿತ್ತ ಭಕ್ತರನ್ನುದ್ದೇಶಿಸಿ ಸದ್ಭಕ್ತರಿಗೆ ಪ್ರಸಾದ ವಿತರಿಸಿ ಕರಿಂಜೆಶ್ರೀ ಮಾತನಾಡಿದರು. ಭಕ್ತರು ಸ್ವಾಮೀಜಿ ಅವರಿಗೆ ಪುಷ್ಪಹಾರವನ್ನಿತ್ತು ಗೌರವಿಸಿದರು. ಈ ಸಂದರ್ಭದಲ್ಲಿ ಸುಧಾಕರ್ ಪಿ., ರಾಜೇಶ್ ಅಳಿಯೂರು, ಗೋಪಾಲ ಹೊಸಬೆಟ್ಟು, ಪ್ರದೀಪ್ ಅಳಿಯೂರು ಸೇರಿದಂತೆ ಅನೇಕ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಪರಶುರಾಮ ಸೃಷ್ಟಿತೆಂದು ಪ್ರಸಿದ್ಧಿ ಪಡೆದಿರುವ ಈ ತುಳುನಾಡಿನಲ್ಲಿ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಹಾಗೂ ಕಷ್ಟ ಕಾರ್ಪಣ್ಯಗಳನ್ನು ದೂರಿಕರಿಸುವ ಕ್ಷೇತ್ರವಾಗಿ ಜನಾನುರಾಗಿಯಾಗಿ ಪ್ರಸಿದ್ಧಿಯನ್ನು ಪಡೆದಿದ್ದು, ಈ ಕ್ಷೇತ್ರದಲ್ಲಿ ಹಿಂದೆ ವಿಷ್ಣು ಸಾನಿಧ್ಯವಿತ್ತು. ಅದು ಭೂಗರ್ಭ ಸೇರಿದೆ ಎಂಬುದನ್ನು ಸ್ಥಳ ಪ್ರಶ್ನೆ ಆಧಾರದಲ್ಲಿ ಕಂಡು ಬಂದಿರುತ್ತದೆ. ಈ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮೀಸತ್ಯನಾರಾಯಣ, ಶ್ರೀ ವೀರಾಂಜನೆಯ ಸ್ವಾಮೀ, ಶ್ರೀ ಗಣಪತಿ ದೇವರು, ಶ್ರೀ ದುಗರ್ಾಪರಮೇಶ್ವರಿ, ನಾಗಬ್ರಹ್ಮ, ವ್ಯಾಘ್ರಚಾಮುಂಡಿ ಹಾಗೂ ಪರಿವಾರ ದೈವಗಳು ನೆಲೆನಿಂತು ಭಕ್ತರನ್ನೂ ಸಲಹುತ್ತಾ ಬರುತ್ತಿದ್ದಾರೆ. ನಾವು ಈ ಕ್ಷೇತ್ರದಲ್ಲಿ ದೇವಸ್ಥಾನದ ಮತ್ತು ಮಠದ ಪುನಃರ್ ನಿಮರ್ಾಣದ ಮುಖಾಂತರ ಬರುವ ಭಕ್ತಾದಿಗಳ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದನೆ ನೀಡುತ್ತಾ ಬರುತ್ತಿದ್ದು, ಕ್ಷೇತ್ರದಲ್ಲಿ ಭಕ್ತರು ತಮ್ಮ ಹರಿಕೆಗಳನ್ನು ಹೊತ್ತಾಗ ಅವರ ಸಂಕಷ್ಟಗಳು ಪರಿಹಾರವಾಗಿ ಭಕ್ತರಿಗೆ ಮಾಂಗಲ್ಯ ಭಾಗ್ಯ, ಆರೋಗ್ಯ, ಸಂತನ ಭಾಗ್ಯ ಹೀಗೇರೇ ಹಲವಾರು ಹರಿಕೆಗಳನ್ನು ಹೊತ್ತಾಗ ಅವರ ಬೇಡಿಕೆಗಳು ಈಡೇರಿರುತ್ತದೆ. ಈ ಕ್ಷೇತ್ರದಲ್ಲಿ ಅನ್ನದಾನ, ವಸ್ತ್ರದಾನ, ವಿದ್ಯಾದಾನಗಳು ನಿರಂತರ ನಡೆಯುತ್ತಿದೆ ಎಂದು ಮುಕ್ತಾನಂದ ಸ್ವಾಮೀಜಿ ತಿಳಿಸಿದರು.
ಈ ಕ್ಷೇತ್ರದಲ್ಲಿ ಇನ್ನಷ್ಟು ಸಮಗ್ರವಾಗಿ ಅಭಿವೃದ್ಧಿಪಡಿಸುವ ಸಂಕಲ್ಪವನ್ನು ಹೊಂದಿದ್ದು, ದೇವಸ್ಥಾನದಲ್ಲಿ ಜೀಣರ್ೊದ್ಧಾರಗೊಳ್ಳುತ್ತಿರುವ ಪ್ರಧಾನ ಶಿಲಾಮಯ ಗರ್ಭಗುಡಿ, ಶ್ರೀ ಮಹಾಗಣಪತಿ ಗುಡಿ, ಶ್ರೀ ದುಗರ್ಾಪರಮೇಶ್ವರಿ ಗುಡಿ, ತೀರ್ಥ ಮಂಟಪ, ಸುತ್ತುಪೌಳಿ, ನಾಗದೇವರ ಸನ್ನಿಧಿ, ರಾಜಗೋಪುರ ಹಾಗೆಯೇ ಶ್ರೀ ರಾಘವೇಂದ್ರ ಗುರುಗಳ ಗುಡಿ ಮತ್ತು ಶ್ರೀ ಮಾಜಿದೇವರ ಗುಡಿ ನಿಮರ್ಾಣ ಮತ್ತು ಅನ್ನಛತ್ರದ ನಿಮರ್ಾಣದ ಸಂಕಲ್ಪವನ್ನು ಹೊಂದಿರುತ್ತದೆ. ದೇವಸ್ಥಾನದ ಜೀಣರ್ೊದ್ಧಾರಕ್ಕಾಗಿ ಈಗಾಗಲೇ ಸುಮಾರು ಮೂರು ಕೋಟಿ ರೂಪಾಯಿ ಅಂದಾಜು ವೆಚ್ಚಪಟ್ಟಿ ತಯಾರಿಸಲಾಗಿದ್ದು, ಪವಿತ್ರವಾದ ಈ ಕ್ಷೇತ್ರದ ಜೀಣರ್ೊದ್ಧಾರ ಕಾರ್ಯದಲ್ಲಿ ಸನಾತನ ಸಂಸ್ಕೃತಿಯ ರಕ್ಷಕರಾದ ಹಾಗೂ ಕೊಡುಗೈ ದಾನಿಗಳು ಮತ್ತು ಗುರು ಭಕ್ತಿಯುಳ್ಳ ಸದ್ಭಕ್ತರ ಅವಶ್ಯವಿದೆ. ಅಂತೆಯೇ ನಾವೂ ಒಂದು ಗ್ರಾಮದ ಉದ್ಧಾರವನ್ನು ಬಯಸಿ ಧಾಮರ್ಿಕವಾಗಿ, ಸಾಮಾಜಿಕವಾಗಿ ಸೇವಾ ನಿರತರಾಗಿದ್ದೇವೆ. ಸಹಕಾರ ಮನೋಭಾವನೆಯಿಂದ ಇದು ಪರಿಪೂರ್ಣವಾಗಲು ಸಾಧ್ಯ ಎಂದೂ ಕರಿಂಜೆಶ್ರೀ ತಿಳಿಸಿದರು.






