ಉಡುಪಿ: ಕರ್ನಾಟಕ ರಾಜ್ಯದ ಮಾಜಿ ಸಚಿವರಾಗಿ, ಕಾಪು ಕ್ಷೇತ್ರದಿಂದ ಐದು ಭಾರಿ ಶಾಸಕರಾಗಿ
ಸಕ್ರೀಯ ಸಮಾಜ ಸೇವಕರಾಗಿದ್ದ ವಸಂತ್ ವಿ.ಸಾಲ್ಯಾನ್ ಇಂದಿಲ್ಲಿಸಂಜೆ ಉಡುಪಿ ಅಂಬಲಪಾಡಿ ಅಲ್ಲಿನ
ಹೈಟೆಕ್ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೆ ನಿಧನರಾದರು.
Vasanth V.Salian-1
ಕಾಂಗ್ರೇಸ್ (ಐ) ಪಕ್ಷದಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿ ಕರ್ನಾಟಕ ರಾಜ್ಯದ ಸಚಿವರಾಗಿಯೂ ಸೇವೆ
ಸಲ್ಲಿಸಿದ್ದರು. ಕ್ರಮೇಣ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಸದ್ಯ ಬಿಜೆಪಿ ಪಕ್ಷದಲ್ಲಿ ಸೇವಾ ನಿರತರಾಗಿದ್ದರು.
ವಸಂತ್ ಸಾಲ್ಯಾನ್ ನಿಧನಕ್ಕೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂತಾಪ ಮುಂಬಯಿ ತೀವ್ರ
ಸಂತಾಪ ವ್ಯಕ್ತ ಪಡಿಸಿದೆ. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌರವಾಧ್ಯಕ್ಷರೂ, ರಾಷ್ಟ್ರೀಯ
ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷರಾದ ಜಯ ಸಿ.ಸುವರ್ಣ
ಅಸೋಸಿಯೇಶನ್ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಸಂತಾಪ ಸೂಚಿಸಿದ್ದಾರೆ.
ಅಸೋಸಿಯೇಶನ್ನ ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್, ಭಾಸ್ಕರ ವಿ.ಬಂಗೇರ, ಶಂಕರ
ಡಿ.ಪೂಜಾರಿ ಮತ್ತು ಡಾ| ಯು.ಧನಂಜಯ ಕುಮಾರ್, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ
ಜಿ.ಆಂಚನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ
ಶಕುಂತಳಾ ಕೆ.ಕೋಟ್ಯಾನ್ ಹಾಗೂ ಸೇವಾದಳದ ಮುಖ್ಯಸ್ಥ ಗಣೇಶ್ ಕೆ.ಪೂಜಾರಿ, ಮಾಜಿ ಅಧ್ಯಕ್ಷ ಎಲ್.ವಿ
ಅಮೀನ್, ಭಾರತ್ ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಉಪ ಕಾರ್ಯಧ್ಯಕ್ಷೆ
ನ್ಯಾ| ರೋಹಿಣಿ ಜೆ.ಸಾಲ್ಯಾನ್, ಆಡಳಿತ ನಿರ್ದೇಶಕ ಸಿ.ಆರ್.ಮೂಲ್ಕಿ, ಚಲನಚಿತ್ರ ನಟ, ನಿರ್ಮಾಪಕ
ರಾಜಶೇಖರ ಕೋಟ್ಯಾನ್ ಮುದರಂಗಡಿ, ಉದ್ಯಮಿಗಳಾದ ಸುರೇಂದ್ರ ಪೂಜಾರಿ, ಹರೀಶ್ ಜಿ.ಅಮೀನ್
ಗಂಗಾಧರ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ

By suddi9

Leave a Reply

Your email address will not be published. Required fields are marked *