ಕಿಂಗ್ ಫಿಶರ್ ಮಾರಾಟಕ್ಕಿದೆ
ನವದೆಹಲಿ: `ಕಿಂಗ್ ಆಫ್ ಗುಡ್ ಟೈಮ್ಸ್’ ಎಂದೇ ಖ್ಯಾತವಾಗಿರುವ ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಏರ್ ಲೈನ್ಸ್ ನಷ್ಟದ ಕೂಪಕ್ಕೆ ಸಿಲುಕಿರುವುದು ಗೊತ್ತಿರುವ ಸಂಗತಿ. ಆದರೆ, ಕಿಂಗ್ ಫಿಶರ್ ಏರ್ ಲೈನ್ ಬ್ರಾಂಡ್ ಕೂಡ ವಿಜಯ್ ಮಲ್ಯ ಕೈತಪ್ಪುತ್ತಿದೆ. ಕಿಂಗ್ ಫಿಶರ್ ಏರ್ ಲೈನ್ಸ್`ಗೆ ಸಾಲ ಕೊಟ್ಟಿದ್ದವರು ಈ ಬ್ರಾಂಡ್ ಹರಾಜಿಗೆ ಮುಂದಾಗಿದ್ದಾರೆ. ಕಿಂಗ್ ಫಿಶರ್, ಫ್ಲೈ ದಿ ಗುಡ್ ಟೈಮ್ಸ್ ಮತ್ತು ಫ್ಲೈಯಿಂಗ್ ಮಾಡಲ್ಸ್ ಬ್ರಾಂಡ್`ಗಳನ್ನು ಹರಾಜಿಗಿಡಲಾಗಿದೆ.
ಆದರೆ, ಕಿಂಗ್ ಫಿಶರ್ ಹೆಸರಿನಲ್ಲೇ ನಡೆಯುತ್ತಿರುವ ಮಲ್ಯ ಅವರ ಕಿಂಗ್ ಫಿಶರ್ ಬಿಯರ್ ಬ್ರಾಂಡ್`ಗೆ ನೇರವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಏರ್ ಲೈನ್ಸ್ ಮತ್ತು ಬಿಯರ್ ಬ್ರಾಂಡ್`ಗಳು ಬೇರೆ ಬೇರೆ ಕ್ಯಾಟಗರಿಗಳಲ್ಲಿ ನೋಂದಣಿಯಾಗಿವೆ. ಎಸ್`ಬಿಐ ಕ್ಯಾಪ್ ಟ್ರಸ್ಟಿ ಕೋ ಲಿಮಿಟೇಡ್ ಕಿಂಗ್ ಫಿಶರ್ ಏರ್ ಲೈನ್ ಬ್ರಾಂಡ್ ಮಾರಾಟಕ್ಕೆ ಮುಂದಾಗಿದೆ. ಮಲ್ಯ ತಲೆಯ ಮೇಲೆ ಏಳು ಸಾವಿರ ಕೋಟಿ ಸಾಲಯಿದೆಯೆಂದು ಅಂದಾಜಿಸಲಾಗಿದೆ.