Published On: Fri, Apr 4th, 2014

ಏರ್‌‌ಟೆಲ್‌ ಡಿಜಿಟಲ್‌‌ ನಿಂದ ಪಾಕೆಟ್‌ ಟಿವಿ ಪ್ರಾರಂಭ

Webdunia

ಡಿಟಿಎಚ್‌ ಅಪರೆಟರ್‌‌‌ ಎರ್‌ಟೆಲ್‌ ಡಿಜಿಟಲ್‌ ಟಿವಿ ಈಗ ಪಾಕೆಟ್ ಟಿವಿ ಸೇವೆ ಪ್ರಾರಂಭ ಮಾಡಿದೆ. ಈ ಸೇವೆ ಆಂಡ್ರೈಡ್‌ ಡಿವೈಸ್‌‌‌ನಲ್ಲಿ ಮಾತ್ರ ಲಭ್ಯ.  ಗೂಗಲ್‌ ಪ್ಲೇ ಮೂಲಕ ನೀವು ಪಾಕೆಟ್‌ ಟಿವಿ ಅಪ್ಲಿಕೇಶನ್ ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿದೆ. ಇದಕ್ಕಾಗಿ ಗ್ರಾಹಕರು ಪ್ರತಿ ತಿಂಗಳಿಗೆ 60 ರೂಪಾಯಿ ಶುಲ್ಕ ನೀಡಬೇಕಾಗುತ್ತದೆ ಎಂದು ಕಂಪೆನಿ ತಿಳಿಸಿದೆ.  ಈ ಮೂಲಕ ಬಳಕೆದಾರರು 150 ಕ್ಕಿಂತ ಹೆಚ್ಚಿನ ಟಿವಿ ಚ್ಯಾನೆಲ್‌ ಲೈವ್‌ ಆಗಿ ನೋಡಬಹುದಾಗಿದೆ. ಹಳೆಯ ಕಾರ್ಯಕ್ರಮಗಳನ್ನು ಕೂಡ ನೊಡುವ ಸೌಲಭ್ಯ ಇದರಲ್ಲಿದೆ. 
ಇದರ ಜೊತೆಗೆ 10 ಸಾವಿರಕ್ಕಿಂತ ಹೆಚ್ಚಿನ ವಿಡಿಯೋವರೆಗೂ ಎಕ್ಸೆಸ್ , ಚಾನಲ್ ಮತ್ತು ವಿಡಿಯೋ ಫಿಲ್ಟರ್‌ ಸೌಲಭ್ಯ , ಅಡವಾನ್ಸ್‌‌ ಇಲೆಕ್ಟ್ರಾನಿಕ್‌ ಪ್ರೋಗ್ರಾಂ ಗೈಡ್ , ಫೇವರೇಟ್‌‌‌ ಚಾನೆಲ್ ಸೆಟ್‌‌ ಮಾರುವ ಸೌಲಭ್ಯ , ಸೋಷಿಯಲ್ ಮಿಡಿಯಾ ಇಂಟಿಗ್ರೇಶನ್ , ಪ್ರೋಗ್ರಾಂ ರಿಮಾಯಿಂಡರ್ ಸೆಟ್‌ ಮಾಡುವ ಸೌಲಭ್ಯ ಇದರಲ್ಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter