Published On: Fri, Aug 17th, 2018

ಯಶಸ್ವಿಯಾಗಿ 1 ವರ್ಷ ಪೂರೈಸಿದ ಸಂಭ್ರಮದಲ್ಲಿ ‘ಡೌರಿ ಫ಼್ರೀ ನಿಖಾಹ್’ ಮಹಿಳೆಯರ ವಿಭಾಗ.

ಹೌದು ಹಲವಾರು ಜನರ ಒತ್ತಾಯದ ಮೇರೆಗೆ ‘ಡೌರಿ ಫ಼್ರೀ ನಿಖಾಹ್’ ಮಹಿಳೆಯರ ವಿಭಾಗವನ್ನು ಪಾದಾರ್ಪಣೆ ಮಾಡಿದೆವು. ಕೆಲವು ಮನೆಗಳಲ್ಲಿ ವಾಟ್ಸಪ್ ಉಪಯೋಗಿಸದ ಪುರುಷರಿದ್ದು ಅವರಿಗೆ ನಮ್ಮ ಪ್ರಪೋಸಲ್ ಅಪ್ಡೇಟ್ ತಲುಪುತ್ತಿರಲಿಲ್ಲ ನಮ್ಮ ಮನೆಯ ಮೊಬೈಲ್ ನಲ್ಲಿ ವಾಟ್ಸಪ್ ಇದೆ ನಮ್ಮ ಬಳಿ ಇಲ್ಲ ಅದಕ್ಕಾಗಿ ಒಂದು ಪರಿಹಾರ ಹುಡುಕಿ ಎಂದು ವಿನಂತಿಗಳು ಬರಲು ಶುರುವಾದಾಗ ನಾವು ಮಹಿಳೆಯರ ವಿಭಾಗವನ್ನು ಅಸ್ತಿತ್ವಕ್ಕೆ ತಂದೆವು.

WhatsApp Image 2018-08-16 at 9.45.48 AM
ಈಗಾಗಲೆ ವಾಟ್ಸಪ್ ಗ್ರೂಪ್ ವಿಭಾಗದಲ್ಲಿ 2 ಗ್ರೂಪ್ ಗಳು ಕಾರ್ಯಾಚರಿಸುತ್ತಿದ್ದು ಸುಮಾರು 400 ಕ್ಕು ಹೆಚ್ಚು ಸದಸ್ಯರಿದ್ದಾರೆ ಅಲ್ಲದೆ ಪುರುಷರ ವಿಭಾಗದ ಹಸ್ತಕ್ಷೇಪವಿಲ್ಲದೆ ಇದರ ನಿರ್ವಹಣೆಯನ್ನು ಮಹಿಳೆಯರೇ ಕುದ್ದಾಗಿ ನಿರ್ವಹಿಸುತ್ತಿರುವುದು ಮಹಿಳೆಯರ ವಿಭಾಗದ ಗೌಪ್ಯತೆ ಕಾಪಾಡುವಲ್ಲಿ ನಾವು ತೆಗೆದುಕೊಂದ ಮಹತ್ವದ ನಿರ್ದಾರ.
ಇದರ ಆಡಳಿತ ವಿಭಾಗದಲ್ಲಿ ನುರೈದಾ ಆವಿನಹಳ್ಳಿ ಸೌದಿ ಅರೇಬಿಯಾದಲ್ಲಿರುವ ತಸ್ಮಿಯಾ ಮತ್ತು ನೂರ್ಜಹಾನ್ ಆವಿನಹಳ್ಳಿ ಯವರನ್ನು ನೇಮಿಸಲಾಗಿದೆ.
ಮಹಿಳಾ ವಿಭಾಗವನ್ನು ಅಸ್ಥಿತ್ವಕ್ಕೆ ತರಲು ಪ್ರಮುಖ ಕಾರಣಗಳು.
1. ಪ್ರಮುಖವಾಗಿ ಮದುವೆ ಸಂದರ್ಭದಲ್ಲಿ ಹುಡುಗ ಮತ್ತು ಹುಡುಗಿಯನ್ನು ಅಯ್ಕೆ ಮಾಡುವುದು ಮಹಿಳೆಯರೇ ಆಗಿದ್ದಾರೆ, ಮತ್ತು ಹೆಚ್ಚಾಗಿ ಪ್ರತ್ಯೆಕ್ಷವಾಗಿಯೂ ಪರೋಕ್ಷವಾಗಿಯೂ ವರದಕ್ಷಿಣೆಗೆ ಪ್ರಚೋದಿಸುವುದು ಕಂಡು ಬಂದಿದ್ದರಿಂದ ಮೊದಲು ಮಹಿಳೆಯರನ್ನು ಜಾಗ್ರತರನ್ನಾಗಿಸಬೇಕು ಎಂಬುದಾಗಿದೆ.
2. ಇನ್ನು ಕೆಲವರು ಸಮುದಾಯದ ರಕ್ಷಣೆ ಪುರುಷರಿಂದ ಸಾಧ್ಯವಿಲ್ಲವೇ? ಎಂದು ಕೇಳಬಹುದು ಸಾಧ್ಯ ಆದರೆ ಸಂಪೂರ್ಣವಾಗಿ ಸಾಧ್ಯವಿಲ್ಲ, ಇಲ್ಲಿ ವರದಕ್ಷಿಣೆಯ ವಿಷಯಕ್ಕೆ ಬಂದರೆ ಕೆಲವು ಪುರುಷರೇ ವರದಕ್ಷಿಣೆಗಾಗಿ ಹೆಂಡತಿಗೆ, ಸೊಸೆಗೆ ಚಿತ್ರಹಿಂಸೆ ನೀಡಿರುವುದನ್ನು ನಾವು ಕೇಳಿದ್ದೇವೆ ಮತ್ತು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಮಹಿಳೆಯರ ಮೂಲಕವೆ ಜಾಗ್ರತಿ ಮೂಡಿಸಿದರೆ ಮುಂದೊಂದು ದಿನ ಮಹಿಳೆಯರೆಲ್ಲರು ಒಂದಾಗಿ ನಿಂತರೆ ವರದಕ್ಷಿಣೆ ಎಂಬ ಆಲದಮರವನ್ನು ಬೇರು ಸಹಿತ ಕಿತ್ತೊಗೆಯುವುದು ಸುಲಬದ ವಿಷಯ.
3. ಇನ್ನು ನಮ್ಮ ಮಹಿಳಾ ವಿಭಾಗವು ಇಸ್ಮಾಮಿನ ಚೌಕಟ್ಟಿನಿಂದ ಹೊರಬರಲು ಅವಕಾಷವೇ ಇಲ್ಲ ಕಾರಣ ಇದು ಬರೇ ವಾಟ್ಸಪ್ ಮುಖಾಂತರ ಕಾರ್ಯಾಚರಿಸುತ್ತಾ ಇರುವುದರಿಂದ ಮಹಿಳೆಯರಿಗೆ ಪ್ರಪೋಸಲ್ ಗಳ ಅಪ್ಡೇಟ್ ಮತ್ತು ವರದಕ್ಷಿಣೆಯ ಆಗು ಹೋಗುಗಳ ಬಗ್ಗೆ ಲೇಖನಗಳ ಮೂಲಕ ಅರಿವು ಮೋಡಿಸುತ್ತಿರುವುದಾಗಿದೆ. ಶೈತಾನನಿಗೆ ಕೆಲಸ ಕಡಿಮೆ ಮಾಡಿರುವ ಸ್ಮಾರ್ಟ್ ಫ಼ೋನ್ ಯುಗದಲ್ಲಿ ಅದೇ ಸ್ಮಾರ್ಟ್ ಫ಼ೋನ್ ಮೂಲಕ ಮಹಿಳೆಯರಿಗೆ ಅರಿವು ಮೂಡಿಸುವ ಚಿಕ್ಕ ಪ್ರಯತ್ನ ನಮ್ಮದಾಗಿದೆ.
4. ನಾವು ಋಣಾತ್ಮಕ ಚಿಂತನೆಯಿಂದ ಹೊರಬಂದು ಧನಾತ್ಮದವಾಗಿ ಮುಂದುವರೆಯ ಬೇಕಾಗುತ್ತದೆ. ನಮ್ಮ ಸಮುದಾಯದ ಮಹಿಳೆಯರು ಈಗ ಧಾರ್ಮಿಕ ಮತ್ತು ಲೌಖಿಕ ವಿಧಾಬ್ಯಾಸವನ್ನು ಪಡೆದು ಪ್ರಬುದ್ದರಾಗಿದ್ದಾರೆ ಅವರಲ್ಲಿ ಇರುವ ಉತ್ತಮ ಗುಣಗಳನ್ನು ಬಡಿದೆಬ್ಬಿಸಿ, ಮಹಿಳೆಗೆ ಮಹಿಳೆಯೆ ಶತ್ರು ಎಂಬ ಮಾತನ್ನು ಸುಳ್ಳಾಗಿಸಿ, ಅವರಲ್ಲಿ ಒಗ್ಗಟ್ಟನ್ನು ಮೂಡಿಸಿ, ವರದಕ್ಷಿಣೆ ಎಂಬ ಪಿಡುಗನ್ನು ಹೋಗಲಾಡಿಸಲು ನಮಗೆ ಮಹಿಳೆಯರ ಸಹಾಕಾರ ಅತ್ಯಗತ್ಯ.
5. ಮಹಿಳೆಯರನ್ನು ಮನೆಯಿಂದ ಹೊರಬಂದು ಹೋರಾಡಿ ಎಂದು ನಾವು ಕರೆಯುತ್ತಿಲ್ಲ. ಬದಲಿಗೆ ಅವರಲ್ಲಿ ಜಾಗ್ರತೆ ಮೂಡಿಸಿ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ವರದಕ್ಷಿಣೆಯ ಪಿಡುಗಿನಿಂದ ಕಾಪಾಡಿಕೊಳ್ಳುವುದು ಹೇಗೆ ಮತ್ತು ಅದರಿಂದ ಆಗುವ ಆಗು ಹೋಗುಗಳ ಬಗ್ಗೆ ನಾವು ಜಾಗ್ರತೆ ಮೂಡಿಸುತ್ತಿದ್ದೇವೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter