ಪೊಳಲಿ: ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ ಹಾಗೂ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಹಕಾರದೊಂದಿಗೆ ಭಜನಾ ಸಪ್ತಾಹ ಇಂದು ಜು.8ರಂದು ಬೆಳಗ್ಗೆ 8.30ಗೆ ದಕ್ಷಿಣ ಕ್ಷೇತ್ರಿಯ ಕಾರ್ಯಕಾರಿಣಿ ಪ್ರಮುಖ್ ಕಲಡ್ಕ ಪ್ರಭಾಕರ್ ಭಟ್ ಅವರು ದೀಪ ಪ್ರಜ್ವಲನೆಗೊಳಿಸಿದರು ಪೊಳಲಿ ದೇವಳದ ಪ್ರಧಾನ ಅರ್ಚಕರಾದ ಮಾಧವ್‍ಭಟ್ ,ನಾರಾಯಣ್ ಭಟ್ , ರಾಮ್ ಭಟ್ ಸಹಕರಿಸಿದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ , ಆಡಳಿತ ಮೊಕ್ತೇಸರಾದ ತಾರಾನಾಥ ಆಳ್ವ ಚೇರ ಸೂರ್ಯನಾರಾಯಣರಾವ್ ಮತ್ತು ಆಡಳಿತ ಕಾರ್ಯನಿರ್ವಹಣಾಧಿಕಾರಿ ಹರೀಶ್, ದಕ್ಷಿಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕುರ ಹಾಗೂ ರಾಜೇಶ್ ನಾಯಕ್ ಉಳಿಪಾಡಿ ಗುತ್ತು, ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಕೋಡ್ಮಾಣ್ ಕಾಂತಪ್ಪ ಶೆಟ್ಟಿ, ನಂದ್ಯ ಸುಂದರ್ ಬೆಳ್ಚಡ, ಭದ್ರಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ಬೆಂಜನ ಪದವು ಉಪಸ್ಥಿತರಿದ್ದರು. ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯವರಿಂದ ಭಜನೆ ಪ್ರಾರಂಭದೊಂದಿಗೆ ನಿರಂತರ 168ಗಂಟೆಗಳ ಕಾಲ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಿಂದ ವಿವಿಧ ಭಜನಾ ತಂಡಗಳು ಶ್ರೀ ದೇವಿ ಸನ್ನಿಧಿಯಲ್ಲಿ ಭಜನಾ ಸಂಕೀರ್ತಣೆಯನ್ನು ಹಾಡಲಿದ್ದಾರೆ.














