ಸುದ್ದಿ9 ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ವಿಜಯ್ ಗೋಪಾಲ್ ಸುವರ್ಣ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದೇವೇಂದ್ರ ಆಯ್ಕೆಯಾಗಿದ್ದರೆ.

ಜೂ.6 ಸೋಮವಾರರಂದು ನಡೆದ ಪ್ರತಿ ಸ್ಪರ್ಧಿ ಶರ್ಮಿಳ ಅವರು ನಾಮಪತ್ರವನ್ನು ಹಿಂತೆಗೆದುಕೊಂಡರು. ಉಪಾಧ್ಯಕ್ಷರಾಗಿ ಕಾಂಗ್ರಸ್ನ ಇಬ್ಬರು ಬೆಂಬಲಿತ ಸದಸ್ಯರ ನಡುವೆ ಪೈಪೋಟಿ ದೇವೇಂದ್ರ ಮತ್ತು ಶಿವಶಂಕರ್ ಬಾರಿ ಜಿದ್ದಾ ಜಿಡ್ಡಿ ಪೈಪೋಟಿ ನಡೆಯಿತು. ದೇವೇಂದ್ರ 14 ಮತ ಗಳಿಸಿದರೆ ಶಿವ ಶಂಕರ್ 13 ಮತ ಗಳಿಸಿ ಉಪಾದ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ವಿಜಯ್ ಗೋಪಾಲ್ ಸುವರ್ಣ ಅವರು ಕಂದಾವರ ಗ್ರಾಮ ಪಂಚಾಯತ್ನ ಎರಡು ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ನಿಂತು ಎರಡು ಕಡೆಯಲ್ಲೂ ಭರ್ಜರಿ ಗೆಲುವನ್ನು ಸಾಧಿಸಿ ಒಂದು ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಮಂಗಳೂರು ಗ್ರಾಮಂತರ ಶಿಶು ಅಭಿವೃದ್ಧಿ ಇಲಾಖೆಯ ಕೆ.ಶ್ಯಾಮಲ ಚುನಾವಣೆ ಅಧಿಕಾರಿ ಯಾಗಿದ್ದರು ಪ್ರಭಾರ ಪಿ.ಡಿ.ಒ ಅಶೋಕ್ ಉಪಸ್ಥತರಿದ್ದರು
