ಸುದ್ದಿ9 ಕೈಕಂಬ: ಎಡಪದವು ಜುಲೈ 7ರಂದು ಮುಂಜಾನೆ ದನದ   ಕೊಟ್ಟಿಗೆಗೆ ಬೆಂಕಿ ತಗುಲಿ 5 ಹಸುಗಳು ದಾರುಣವಾಗಿ ಮೃತಪಟ್ಟ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ತೆಂಕ ಎಡಪದವು ಇಲ್ಲಿನ ಐಡಿಯಲ್ ಶಾಲಾ ಸಮೀಪದ ಕೃಷ್ಣಪ್ಪ ಗೌಡ ಕಣ್ಣೂರಿ ಎಂಬವರ ಮನೆಯಲ್ಲಿ ನಡೆದಿದೆ. ಇದರಿಂದ ಅವರಿಗೆ ಬರೋಬ್ಬರಿ 5 ಲಕ್ಷಕ್ಕೂ  ಅಧಿಕ ನಷ್ಟ ಸಂಭವಿಸಿರ ಬಹುದು ಎನ್ನಲಾಗಿದೆ.
IMG-20150707-WA0002

IMG-20150707-WA0003

IMG-20150707-WA0004
ಮನೆಯವರ ಮೇಲಿನ ಹಗೆ ಸಾಧಿಸಲು ಅಥವಾ ಗೋಕಳ್ಳರು ಬೆಂಕಿ ಇಟ್ಟು ಹಸುಗಳನ್ನು ಕೊಂದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಕೃಷ್ಣಪ್ಪ ಗೌಡ ಅವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.

ಘಟನೆಯ ವಿವರ:

ಕೃಷ್ಣಪ್ಪ ಗೌಡ ಹಾಗೂ ಅವರ ಮನೆಮನೆಂದಿ ಮಲಗಿದ್ದರು. ಈ ವೇಳೆ ಕೃಷ್ಣಪ್ಪ ಅವರ ಪತ್ನಿಗೆ ಹಸುಗಳು ಕೂಗುವುದು ಕೇಳಿಸಿದ್ದು ತಕ್ಷಣ ಎದ್ದು ನೋಡಿದಾಗ ಕೊಟ್ಟಿಗೆಗೆ ಬೆಂಕಿ ತಗುಲಿ ಧಗಧಗ ಉರಿಯುತ್ತಿರುವುದು ಕಂಡುಬಂದಿದೆ.
ತಕ್ಷಣ ಬಾಗಿಲು ತೆಗೆದು ನೋಡಿದಾಗ 7 ಹಸುಗಳ ಪೈಕಿ ಐದು ಹಸುಗಳು ಮನೆಯವರ ಮುಂದೆಯೇ

ಪ್ರಾಣವೇದನೆಯಿಂದ ಆರ್ತನಾದಗೈಯ್ಯುತ್ತಾ ಮೃತಪಟ್ಟಿವೆ. ಇನ್ನೆರಡು ಹಸುಗಳ ಹಗ್ಗ ತುಂಡಾದ ಕಾರಣ ಹಟ್ಟಿಯಿಂದ ಓಡಿ ತಪ್ಪಿಸಿಕೊಂಡಿದೆ. ಇನ್ನೊಂದು ಕರುವನ್ನು ಮನೆಯೊಳಗಡೆ ಕಟ್ಟಿಹಾಕಿರುವುದರಿಂದ ಬಚಾವ್ ಆಗಿದೆ.
ಆರಂಭದಲ್ಲಿ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ತಗುಲಿ ಹಸುಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದ್ದರೂ, ಮನೆಮಂದಿ ಹಾಗೂ ಸ್ಥಳೀಯರು ಕೂಲಂಕುಷ ವಿಚಾರಣೆ ನಡೆಸಿದಾಗ ದುಷ್ಕರ್ಮಿಗಳು ಬೇಕೆಂದೇ ಬೆಂಕಿ ಇಟ್ಟು ಹಸುಗಳನ್ನು ಕೊಂದಿರಬಹುದೆಂದು ಮನೆಮಂದಿ ಶಂಕೆ ವ್ಯಕ್ತಪಡಿಸಿದ್ದಾರೆ.

ಹಟ್ಟಿ ಟೆರೇಸ್ನಿಂದ ನಿರ್ಮಿಸಲ್ಪಟ್ಟಿದ್ದು ಬೆಂಕಿ ಹೇಗೆ ಹಚ್ಚಿರಲು ಸಾಧ್ಯ ಎಂದು ಮನೆ ಮಂದಿಯ ಶಂಕೆಗೆ ಕಾರಣವಾಗಿದೆ. ಅಲ್ಲದೆ ಹಟ್ಟಿಯ ಸಮೀಪ ಒಲೆ ನಿರ್ಮಿಸಿದ್ದು ಅಲ್ಲಿಂದ ಬೆಂಕಿ ತಗುಲಿರುವ ಕುರುಹುಗಳು ಕಾಣಿಸುತ್ತಿಲ್ಲ. ಅದೇರೀತಿ ಒಲೆಯ ಮೇಲೆ ತೆಂಗಿನ ಗರಿ, ತೆಂಗಿನ ಚಿಪ್ಪು-ಗೆರಟೆ ಇದ್ದು ಅದಕ್ಕೆ ಯಾವುದೇ ರೀತಿಯಲ್ಲಿ ಬೆಂಕಿ ತಗುಲಿಲ್ಲ.
ಆದರೆ ಹಸುವಿರುವ ಸ್ಥಳದಲ್ಲಿರುವ ಒಟ್ಟು 14 ಕಟ್ಟ ಸೌದೆ ಇದ್ದು ದುಷ್ಕರ್ಮಿಗಳು ನೇರವಾಗಿ ಅದಕ್ಕೆ ಬೆಂಕಿ ಇಟ್ಟಿರಬಹುದೆಂದು ಮನೆಮಂದಿ ಶಂಕೆ ವ್ಯಕ್ತಪಡಿಸಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಕಟ್ಟಿಗೆ ಹಾಗೂ ಅದರ ಪಕ್ಕದಲ್ಲಿಟ್ಟ ಸೊತ್ತುಗಳು ಸಂಪೂರ್ಣವಾಗಿ ಸುಟ್ಟುಕರಕಲಾಗಿದ್ದು, ಅಲ್ಲಿಂದ ವ್ಯಾಪಿಸಿದ ಬೆಂಕಿ ನೇರವಾಗಿ ಹಸುಗಳಿಗೆ ತಗುಲಿದ ಕಾರಣ ಅವುಗಳು ಬೆಂಕಿಗೆ ಸುಟ್ಟಿವೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಎಸಿಪಿ ಸೇರಿದಂತೆ ಬಜ್ಪೆ ಪೊಲೀಸರು ದೌಢಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಗೋವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಲ್ಲದೆ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮನೆಸಮೀಪ ಹೂಳು ತೋಡಿ ಹಸುಗಳ ಮೃತದೇಹವನ್ನು ಹೂಳಲಾಗಿದೆ.
ಮೆಸ್ಕಾಂ ಅಧಿಕಾರಿಗಳ ಪ್ರಕಾರ ಶಾರ್ಟ್  ಸರ್ಕ್ಯುಟ್ನಿಂದ ಬೆಂಕಿ ತಗುಲಿರುವ ಯಾವುದೇ ಕುರುಹು ಕಾಣಿಸುತ್ತಿಲ್ಲ. ವಿದ್ಯುತ್ ತಂತಿಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಅಲ್ಲದೆ ಹಟ್ಟಿಯ ಒಳಗಿದ್ದಿದ್ದು ಒಂದೇ ಬಲ್ಬ್ ಇದೆ. ಉಳಿದಂತೆ ಯಾವುದೇ ಹಾನಿ ಸಂಭವಿಸಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಮಾಜಿ ಶಾಸಕ ಕೃಷ್ಣ ಜೆ . ಪಾಲೆಮಾರ್ ಭೇಟಿ ನೀಡಿ ಮನೆಮಂದಿಗೆ ಸಾಂತ್ವಾನ ನುಡಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹಸುಕಳೆದುಕೊಂಡ ಮನೆಯವರ ಸಂಬಂಧಿ ಎಡಪದವು ಪಂಚಾಯತ್ ಸದಸ್ಯೆ ಮಾಲತಿಯವರು ಮಹಿತಿ ನೀಡಿ, ಮನೆಯಿಂದ ಹಟ್ಟಿಗೆ ಸಂಪರ್ಕ ಕೊಟ್ಟ ತಂತಿಯನ್ನು ತುಂಡರಿಸುವುದು ಕಂಡುಬಂದಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವುದು ಸ್ಪಷ್ಟವಾಗಿದೆ. ತಂತಿ ತುಂಡರಿಸದೇ ಇದ್ದಿದ್ದರೆ ಮನೆಗೂ ಬೆಂಕಿ ತಗುಲುವ ಸಾಧ್ಯತೆ ಇತ್ತು ಎಂದಿದ್ದಾರೆ. ಪಂಚಾಯತ್ನಿಂದ ಪರಿಹಾರ ದೊರಕಿಸುವ ಬಗ್ಗೆ ಪ್ರಯತ್ನಿಸುತ್ತೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಜರಂಗ ದಳ ಖಂಡನೆ:
ಹಟ್ಟಿಗೆ ಬೆಂಕಿ ಇಟ್ಟಿರುವುದಕ್ಕೆ ಬಜರಂಗ ದಳ ಖಂಡನೆ ವ್ಯಕ್ತಪಡಿಸಿದೆ. ಬಜರಂಗದಳದ ಸ್ಥಳೀಯ ಮುಖಂಡ ಭುಜಂಗ ಕುಲಾಲ್ ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಗೋಮಾತೆಗೆ ಬೆಂಕಿ ಇಟ್ಟು ಕೊಂದಿರುವ ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರಿಗೆ ಘೋರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ವಿಶ್ವಹಿಂದೂ ಪರಿಷತ್, ಬಜರಂಗದಳದ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್ ಹಾಗೂ ಬಜರಂಗದಳದ ಜಿಲ್ಲಾ ಗೋರಕ್ಷ ಪ್ರಮುಖ್ ಉಮೇಶ್ ಜಪ್ಪಿನಮೊಗರು ಆಗ್ರಹಿಸಿದ್ದಾರೆ.

By Suddi9

Leave a Reply

Your email address will not be published. Required fields are marked *