ಉಮೇಶ ರಾವ್ ಎಕ್ಕಾರು ಎಂಬ ಹೆಸರು ಕೇಳದವರಿಲ್ಲ , ಅದರಲ್ಲೂ ಪತ್ರಿಕಾ ಪ್ರೇಮಿಗಳಿಗೆ ಇವರೇ ಗುರುಗಳು ಯಾಕೆಂದರೆ ಬಜಪೆ ಸಮೀಪದ ಎಕ್ಕಾರು ಎಂಬ ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿ ಬೆಳೆದ ಉಮೇಶ್ ರಾವ್ ಎಕ್ಕಾರು ಮುಖ್ಯವಾಗಿ ಪತ್ರಿಕೆಗಳ ಸಂಗ್ರಹದ ಹವ್ಯಾಸವನ್ನು ಬೆಳೆಸುತ್ತ ಬಂದವರು, ಮೂವತ್ತೈದು ವರ್ಷ ಕಟೀಲು ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಉಪಪ್ರಾಂಶುಪಾಲರಾಗಿ ನಿವೃತ್ತಿಹೊಂದಿದ ಉಮೇಶರಾಯರು ಸಣ್ಣವಯಸ್ಸಿನಿಂದಲೂ ಪತ್ರಿಕೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದವರು.
ಕನ್ನಡದ ಪತ್ರಿಕೆಗಳಿಗೆ ಅಂಕಣಕಾರರಾಗಿ ಲೇಖಕರಾಗಿ ದುಡಿದ ಇವರು ಇದುವರೆಗೆ ಬರೆದ ಲೇಖನಗಳು ೨೦೦೦ಕ್ಕಿಂತಲೂ ಹೆಚ್ಚು. ಕಳೆದ ಹಲವು ದಶಕಗಳಿಂದ ಪತ್ರಿಕೆಗಳೊಂದಿಗೆ ಜೀವನ ಸಾಗಿಸುತ್ತ ಬಂದ ಇವರು ಬೇರೆ ಬೇರೆ ದೇಶಗಳ ಬೇರೆ ಬೇರೆ ಬಾಷೆಯ ಸುಮಾರು ೩ ಸಾವಿರಕ್ಕೂ ಹೆಚ್ಚಿನ ಪತ್ರಿಕೆಗಳ ಅಭೂತಪೂರ್ವ ಸಂಗ್ರಹ ರಾಯರ ಬಳಿ ಇದೆ. ಸಾಮಾನ್ಯ ಜನರಿಗೆ ಹಳೆಯ ಪತ್ರಿಕೆಗಳೆಂದರೆ ಅದು ರದ್ದಿ ಆದರೆ ರಾಯರಿಗೆ ಅದೊಂದು ಅಮೂಲ್ಯ ವಸ್ತು, ಹೆಚಿನ ಎಲ್ಲ ಪತ್ರಿಕೆಗಳ ಪ್ರಥಮ ಪ್ರತಿಯನ್ನು ಕಾಪಾಡಿಕೊಂಡು ಬಂದ ರಾಯರ ಹವ್ಯಾಸ, ಅದೊಂದು ತಪಸ್ಸು ಎನ್ನಬಹುದು.

ನಮ್ಮ ದೇಶದ ಹಳೆಯ ಪತ್ರಿಕೆಗಳ ಸಂಗ್ರಹ ನಮ್ಮಲ್ಲಿ ಇಲ್ಲ ಆದರೆ ಲಂಡನ್ ನಂತಹ ಹೊರ ದೇಶದ ಸಂಗ್ರಹಾಲಯದಲ್ಲಿ ನೋಡಸಿಗುತ್ತದೆ, ನಮ್ಮಲ್ಲಿಯೂ ಅಂಥ ವ್ಯವಸ್ಥೆ ಆಗ ಬೇಕು ಎನ್ನುತ್ತಾರೆ ರಾಯರು. ಇವರ ಬಳಿ, ೧೮೮೪ರ ಕ್ರೈಸ್ತ ಸಭಾ ಪತ್ರ ಬಳಿಯಿರುವ ಅತ್ಯಂತ ಹಳೆಯ ಸಂಗ್ರಹ, ಮತ್ರವಲ್ಲದೆ ಎರಡು ಆಣೆ ಬೆಲೆಯ ೧೯೧೧ ಸುಪಂಥ ೧೯೨೨ರ ಆತ್ಮಾಹ್ಲಾದಿನೀ ಮಾಸಿಕ, ೧೯೨೭ ಸುವಾಸಿನಿ, ೧೯೩೨ರ ಸದ್ಬೋಧ ಚಂದ್ರಿಕೆ, ೧೯೩೪ರ ಮಕ್ಕಳ ಪುಸ್ತಕ, ೧೯೪೮ ಮದ್ರಾಸು ಸಮಾಚಾರ ೧೯೫೧ ಜಯಕರ್ನಾಟಕ, ೧೯೬೫ರ ಕಡೆಂಗೋಡ್ಲು ಶಂಕರಭಟ್ಟ ಸಂಪಾದನೆಯ ರಾಷ್ಟ್ರಮತ, ೧೯೬೬ರಲ್ಲಿ ದಿ| ಎಂ. ವ್ಯಾಸ ಅವರು ಸಂಪಾದಿಸುತ್ತಿದ್ದ ಅಜಂತ, ೧೯೬೬ರ ಗೋಕುಲ, ಮಾತ್ರವಲ್ಲದೆ ತುಳುನಾಡು, ತುಳುರಾಜ್ಯ, ಉರಲ್, ಸುಯಿಲ್, ಮದಿಪು, ತೂಟೆ, ತುಳುಬೊಳ್ಳಿ, ತುಳುವರ್ತಮಾನ, ತೆಂಬರೆ, ಎಂಕ್ಲೆನ ಚಾವಡಿ, ತುಳುವೆರೆ ಕೇದಗೆ, ತುಳುವೆರೆ ತುಡರ್, ತುಳುಸಿರಿ, ಪತ್ತಾಯ, ಪೊಸಕುರಲ್ ಮುಂತಾದ ತುಳು ಪತ್ರಿಕೆಗಳು ಕಲಾಕಿರಣ್, ಮಿತ್ರ್, ಜೀವಿತ್, ದಿರ್ವೆನಂತಹ ಕೊಂಕಣಿ ಪತ್ರಿಕೆಗಳು, ದೇವನಾಗರಿ ಲಿಪಿಯಲ್ಲಿರುವ ಕನ್ನಡ ಪತ್ರಿಕೆ, ದಿ ಇಲ್ಲಸ್ಟ್ರೇಟೆಡ್ ವೀಕ್ಲಿ, ಲಂಕೇಶ್ ಪತ್ರಿಕೆ, ಉದಯವಾಣಿ, ಸುಧಾಗಳಂತಹ ಪತ್ರಿಕೆಗಳ ಮೊತ್ತಮೊದಲ ಸಂಚಿಕೆಗಳು, ಕಡತೋಕಾ ಮಂಜುನಾಥ ಭಾಗವತರು ಸಂಪಾದಿಸುತ್ತಿದ್ದ ಯಕ್ಷಗಾನ, ಬಾಲಗಂಗಾಧರ ತಿಲಕ್ರ ಕೇಸರಿ, ಅಮೆರಿಕಾ, ಮಲೇಶಿಯಾ ಕಾಶ್ಮೀರ, ಅಂಡಮಾನ್ ನಿಕೋಬಾರ್, , ಚೀನಾ, ಆಸ್ಟ್ರೇಲಿಯಾ, ಮೊದಲಾದ ದೇಶಗಳ ಪ್ರಖ್ಯಾತ ಪತ್ರಿಕೆಗಳು ಪತ್ರಿಕಾ ಪ್ರಿಯರನ್ನು ದಂಗುಬಡಿಸುತ್ತಿದೆ ಉಮೇಶ್ ರಾಯರಿಗೆ ಹಲವಾರು ಸಂಘ ಸಂಸ್ಥೆಯಿಂದ ಸನ್ಮಾನಗಳು ಸಂದಿದ್ದು ಮಾತ್ರವಲ್ಲದೆ, ಅನೇಕ ಪತ್ರಿಕಾ ಪ್ರದರ್ಶನವನ್ನು ಏರ್ಪಡಿಸಿದ್ದಾರೆ ಅಂತಹ ರಾಯರ ಬಳಿ ಇರುವ ಈ ಸಂಗ್ರಹಕ್ಕೆ ಬೆಲೆ ಕಟ್ಟಲು ಸಾದ್ಯವಿಲ್ಲ, ಹಂಪಿ ವಿಶ್ವ ವಿದ್ಯಾನಿಲಯದಂತ ಅನೇಕ ಸಂಸ್ಥೆಗಳು ತಮ್ಮ ಸಂಗ್ರಹದಲ್ಲಿನ ಪತ್ರಿಕೆಗಳನ್ನು ಕೇಳಿದರೂ ಅದನ್ನು ಕೊಡಲು ತಯಾರಿರದ ರಾಯರು ಕಟೀಲು ಶ್ರೀ ದುರ್ಗಾಪಮೆಶ್ವರೀ ದೇವಸ್ಥನದಿಂದ ಸಂಗ್ರಹಾಲಯ ಮಾಡುದಾದರೆ ಉಚಿತವಾಗಿ ನೀಡಲು ತಯಾರಿದ್ದೇನೆ ಎನ್ನುತ್ತಾರೆ, ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಈ ತೆರೆ ಮರೆಯ ಸಾಹಸಿಯ ಸಾಹಸವನ್ನು ಮೆಚ್ಚಲೇ ಬೇಕು
ನಿಶಾಂತ್ ಕಿಲೆಂಜೂರು


