ಸುದ್ದಿ9 ಬಜ್ಪೆ: ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಸರ ಎಳೆದು ಪರಾರಿಯಾದ ಆರೋಪಿಯನ್ನು ಬಜ್ಪೆ ಪೊಲೀಸರು ಕಟೀಲು ಸಮೀಪದ ಅಜರ್ ನಗರ ಎಂಬಲ್ಲಿ ಬಂಧಿಸಿದ್ದು ಆರೋಪಿಯಲ್ಲಿದ್ದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕಟೀಲು ಸಮೀಪದ ಅಜರ್ ನಗರ ನಿವಾಸಿ ಲಾನ್ಸಿ ಮೊರಾಸ್ ಎಂದು ಗುರುತಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಬಜಪೆ ಕೊಳಂಬೆ ಸಮೀಪದ ಮುರ ಸೌಹಾರ್ದ ನಗರ ಎಂಬಲ್ಲಿನ ನಿವಾಸಿ ಜಾನಕಿ (65) ಎಂಬವರ ಮನೆಗೆ ಬೈಕ್ ನಲ್ಲಿ ಬಂದ ಆರೋಪಿ ತಮಗೆ ನೀರು ಕೊಡುವಂತೆ ಕೇಳಿದ್ದ.

ಆದರೆ ಮಹಿಳೆ ಮನೆಯಲ್ಲಿ ಒಂಟಿಯಾಗಿರುವುದನ್ನು ಮನಗಂಡ ಆರೋಪಿ ತುಳುವಲ್ಲಿ ನಾರಾಯಣ ಶೆಟ್ಟಿಯವರ ಮನೆ ಎಲ್ಲಿ ಎಂದು ಕೇಳಿದ್ದಕ್ಕೆ ಮಹಿಳೆ ಗೊತ್ತಿಲ್ಲ ಎಂದು ಉತ್ತರಿಸಿದ್ದರು. ಆಗ ವ್ಯಕ್ತಿ ಮಹಿಳೆಯಲ್ಲಿ ನೀರು ಕೇಳಿದ್ದ. ಜಾನಕಿ ನೀರು ತರಲೆಂದು ಮನೆಯೊಳಗಡೆ ಹೋದಾಗ ಹಿಂದಿನಿಂದ ಬಂದ ಆರೋಪಿ ಅವರ ಕುತ್ತಿಗೆಯಲ್ಲಿದ್ದ 3 ಪವನ್ ಚಿನ್ನದ ಸರ ಕಸಿದು ಪರಾರಿಯಾಗಿದ್ದ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿ ಅಜರ್ ನಗರದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಆತನನ್ನು ಬೈಕ್ ಸಮೇತ ಬಂಧಿಸಿ ಚಿನ್ನದ ಸರವನ್ನು ವಶಪಡಿಸಿದ್ದಾರೆ. ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಾರ್ಯಚರಣೆಯಲ್ಲಿ ಎಸಿಪಿ ಮದನ್ ಗಾವ್ಂಕರ್, ಎಸ್ಐ ರಮೇಶ್, ಇನ್ಸ್ಪೆಕ್ಟರ್ ಲೋಕೇಶ್,ಎ ಎಸ್ ಐ ಸುಕುಮಾರ್, ಬಜಪೆ ಠಾಣಾ ಸಿಬಂದಿಗಳಾದ ರಾಮಚಂದ್ರ, ಚಂದ್ರ ಮೋಹನ್, ಜಯಾನಂದ, ಭರತ್, ಶಶಿಧರ್, ಪೊರುಷೋತ್ತಮ್, ಮುಹಮ್ಮದ್ ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *