ಮುಂಬೈ: ತನ್ನ ರೂಪ ಲಾವಣ್ಯ, ಅದ್ಬುತ ನಟನೆಯ ಮೂಲಕವೇ ಬಾಲಿವುಡ್`ನಲ್ಲಿ ಹೆಸರು ಮಾಡಿದ್ದ ನಟಿ ಮನಿಶಾ ಕೊಯಿರಾಲ ಕ್ಯಾನ್ಸರ್`ಗೆ ತುತ್ತಾಗಿ ಕೆಲ ವರ್ಷಗಳಿಂದ ಅಜ್ಞಾತ ವಾಸ ಅನುಭವಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಕ್ಯಾನ್ಸರ್`ನಿಂದ ಚೇತರಿಸಿಕೊಂಡಿರುವ ಮನಿಶಾ ಕೊಯಿರಾಲ ಮತ್ತೆ ಸಿನಿಮಾದಲ್ಲಿ ನಟಿಸಲು ಇಚ್ಛಿಸುತ್ತಿದ್ದಾರೆ.

mani

ನಾನು ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಬೇಕು. ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಬೇಕು. ನನಗೆ ಹಲವು ಆಫರ್`ಗಳೂ ಬರುತ್ತಿವೆ. ಕೇವಲ ಎರಡು-ಮೂರು ದೃಶ್ಯಗಳಲ್ಲಿ ಬಂದುಹೋಗುವ ಪಾತ್ರದ ಆಫರ್`ಗಳು ಸಿಕ್ಕಿವೆ. ಆದರೆ, ಉತ್ತಮ ಪಾತ್ರಕ್ಕಾಗಿ, ಒಳ್ಳೆಯ ನಿರ್ದೇಶಕರಿಗಾಗಿ ಕಾಯುತ್ತಿದ್ದೇನೆ’ ಎಂದಿದ್ದಾರೆ ನೇಪಾಳಿ ಬೆಡಗಿ. 2012ರಲ್ಲಿ ಮನಿಶಾ ಕ್ಯಾನ್ಸರ್`ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. ಬಳಿಕ 1 ವರ್ಷ ವಿದೇಶದಲ್ಲಿ ಚಿಕಿತ್ಸೆ ಪಡೆದು ಬಂದ 43 ವರ್ಷದ ಮನಿಶಾ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಸೌದಾಗರ್ ಚಿತ್ರದ ಮೂಲಕ ಬಾಲಿವುಡ್`ಗೆ ಎಂಟ್ರಿಕೊಟ್ಟ ಈ ಮೋಹಕ ಬೆಡಗಿ ತನ್ನ ಅಪೂರ್ವ ಸೌಂದರ್ಯದ ಮೂಲಕ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ.

By suddi9

Leave a Reply

Your email address will not be published. Required fields are marked *