ಕಪೂರ್ಬಾ ಕಾಂದಾನ್ ನ ರಣ ಬೀರ್ ಕಪೂರ್ ಗೆ ಹುಡುಗಿಯ ಮಧ್ಯೆ ಎಲ್ಲಿಲ್ಲದ ಬೇಡಿಕೆಯಿದೆ. ಬಾಲಿವುಡ್ ಬೆಡಗಿಯರು ಕೂಡಾ ರಣ್ ಬೀರ್ ಹಿಂದೆ ಬಿಂದಿದ್ದಾರೆ. ದೀಪಿಕಾ, ಕತ್ರಿನಾ ನಂತರ ಇದೀಗ ಮತ್ತೊಬ್ಬ ಚೆಲುವೆ ರಣ್ ಬೀರ್ ನನ್ನು ಮದುವೆಯಾಗಲು ಸಿದ್ಧ ಎಂದು ಖುಲ್ಲಂಖುಲ್ಲಾ ಘೋಷಿಸಿದ್ದಾಳೆ. ರಣಬೀರ್ ಅಂದರೆ ನನಗೆ ಸಿಕ್ಕಾಪಟ್ಟೆ ಇಷ್ಟ. ಆತನ ಬಗ್ಗೆ ವಿಶೇಷ ಪ್ರೀತಿ ನನಗೆ. ಆತ ಒಪ್ಪಿದರೆ ಮದುವೆ ಆಗಲು ತಾನು ಸಿದ್ಧ ಎನ್ನುವ ಮಾತನ್ನು ನಟಿ ಅಲಿಯ ಭಟ್ ಹೇಳಿದ್ದಾಳೆ. ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಅವರ ಪ್ರಸಿದ್ಧ ಕಾರ್ಯಕ್ರಮ ಕಾಫಿ ವಿತ್ ಕರಣ್ ನಲ್ಲಿ ತನ್ನ ಮನದ ಮಾತನ್ನು ಆಕೆ ಜಗತ್ತಿಗೆ ತಿಳಿಸಿದ್ದಾಳೆ.
ಕಾರ್ಯಕ್ರಮದಲ್ಲಿ ನಿಮಗೆ ಯಾವ ಬಾಲಿವುಡ್ ನಟನ ಜೊತೆ ಡೇಟಿಂಗ್ ನಡೆಸಲು ಇಷ್ಟ ಎಂದು ಕೇಳಿದಾಗ ತಕ್ಷಣ ಆಲಿಯಾ ಬಾಯಲ್ಲಿ ರಣ್ ಬೀರ್ ಹೆಸರು ಬಂತು. ತನ್ನ ಮಾತನ್ನು ಮುಂದುವರಿಸಿದ ಆಕೆ ರಣ್ ಬೀರ್ ಒಪ್ಪುವುದಾದರೆ ನಾನಾತನನ್ನು ಮದುವೆಯಾಗಲೂ ಸಿದ್ಧ ಎಂದು ಹೇಳಿದಳು. ಈ ಮಾತಿಗೆ ರಣ್ ಬೀರ್ ಯಾವ ಪ್ರತಿಕ್ರಿಯೆಯನ್ನೂ ನೀಡುವ ಗೋಜಿಗೆ ಹೋಗಿಲ್ಲ. ಆದರೆ ಒಳಗೊಳಗೆ ತನ್ನ ಬಗ್ಗೆಯೇ ಹೆಮ್ಮೆ ಪಟ್ಟುಕೊಳ್ಳುತ್ತಿರಬಹುದು ಅಥವಾ ಆಲಿಯಾಳನ್ನು ಒಂದು ರೌಂಡು ಡೇಟಿಂಗ್ ಗೆ ಸುತ್ತಾಡುವ ಯೋಚನೆ ಮಾಡುತ್ತಿರಬಹುದು.

