ಬೆಂಗಳೂರು: ಹಿಂದಿಯಲ್ಲಿ ಯಶಸ್ವಿಯಾದ ನಂತರ ಕನ್ನಡಕ್ಕೂ ಕಾಲಿಟ್ಟ ಬಿಗ್ ಬಾಸ್ ಟಿವಿ ರಿಯಾಲಿಟಿ ಶೋ ಬಹಳ ಜನಪ್ರಿಯತೆ ಪಡೆದಿತ್ತು. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳ ಹೊಡೆದಾಟ, ಬಡಿದಾಟ, ಪ್ರೀತಿ, ಪ್ರಣಯ ಎಲ್ಲವೂ ಜನರನ್ನು ಆಕರ್ಷಿಸಿತ್ತು. ಜೊತೆಗೆ ಇ ಶೋನ ನಿರೂಪಕನಾಗಿದ್ದ ಕಿಚ್ಚ ಸುದೀಪ್ ಕೂಡಾ ಜನರಿಗೆ ಪ್ರಮುಖವಾಗಿ ಮಹಿಳೆಯರಿಗೆ ಬಹಳ ಹತ್ತಿರವಾಗಿದ್ದರು. ಶೋನಲ್ಲಿ ಸ್ಪರ್ಧಿಗಳು ಜಗಳವಾಡುವುದನ್ನು ಕಂಡುಕಂಡು ಬೇಸತ್ತಿದ್ದ ಕಿಚ್ಚ ಇನ್ನುಮುಂದೆ ಈ ಕಾರ್ಯಕ್ರಮದ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದರು.

sudeep-ks-ravikumar

ಆದರೆ ಸದ್ಯ ಸೋರಿಕೆಯಾಗಿರುವ ಸುದ್ದಿ ಪ್ರಕಾರ ಬಿಗ್ ಬಾಸ್ ಸದ್ಯದಲ್ಲೇ ಎರಡನೇ ಅವತರಣಕೆಯಲ್ಲಿ ಬರಲಿದ್ದು ಇದನ್ನು ಕೂಡಾ ಸುದೀಪ್ ಹೋಸ್ಟ್ ಮಾಡಲಿದ್ದಾರೆ. ಜಗಳ, ಬೈಗುಳ ಇವೆಲ್ಲವೂ ಈ ಶೋನ ಅವಿಭಾಜ್ಯ ಅಂಗ ಅದಿದ್ದರೆ ಮಾತ್ರ ಜನರು ಕೂಡಾ ಕಣ್ಣಿಗೆ ಎಣ್ಣೆ ಬಿಟ್ಟು ಕಾರ್ಯಕ್ರಮ ವೀಕ್ಷಿಸುವುದು ಎಂದು ಶೋನ ಆಯೋಜಕರು ಕಿಚ್ಚನಿಗೆ ಮನದಟ್ಟು ಮಾಡಿದಂತಿದೆ. ಮತ್ತೊಂದೆಡೆ ವಾರದ ಕೊನೆಯ ಒಂದೆರಡು ದಿನದ ಕಾಲ್ ಶೀಟ್ ಗೆ ಕೋಟಿ ಲೆಕ್ಕದಲ್ಲಿ ಹಣ ಸಿಗುವಾಗ ಯಾವ ದಡ್ ನನ್ ಮಗ ಶೋ ಬಿಡುತ್ತಾನೆ ಎಂದು ಕೆಲವು ಮೂಲಗಳು ತಿಳಿಸಿವೆ.

By suddi9

Leave a Reply

Your email address will not be published. Required fields are marked *