ಬೂಮ್ ಎಂಬ ಚಿತ್ರದಲ್ಲಿ ಬಿಚ್ಚಮ್ಮನ ಪಾತ್ರ ಮಾಡಿ ನಂತರ ಸತತ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಕೆಲವು ತಿಂಗಳ ಹಿಂದೆ ಧೂಮ್ ಮಚಾಲೆ ಎಂದು ಹಾಡಿ ಕುಣಿದಾಡಿದ ಕತ್ರಿನಾ ಕೈಫ್ ಗೆ ಆಕೆ ಇಷ್ಟರವರೆಗೆ ಮಾಡಿರುವ ಪಾತ್ರಗಳೆಲ್ಲಾ ಬರೀ ವೇಸ್ಟ್ ಎಂದನಿಸುತ್ತಿದೆಯಂತೆ. ಅದಕ್ಕೆ ಕಾರಣ ಕಂಗನಾ ರಾನೌತ್ ನಟಿಸಿರುವ ಕ್ವೀನ್ ಸಿನಿಮಾ.
ಆ ಚಿತ್ರದಲ್ಲಿ ಕಂಗನಾ ಪಾತ್ರವನ್ನು ಕಂಡು ಫಿದಾ ಆಗಿದ್ದಾಳೆ ಕತ್ರೀನಾ. ಸ್ಟಾರ್ ಗಳು ಎಷ್ಟು ಡ್ಯಾನ್ಸ್ ಮಾಡಿದರೂ ಅದು ಪ್ರೇಕ್ಷಕರ ಮನದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ.ನನಗೆ ಕಂಗನಾ ನಟನೆ ನೋಡಿದ ಬಳಿಕ ಇಂತಹ ಒಂದು ಪಾತ್ರ ಸಿಗಲಿಲ್ಲವಲ್ಲ ಅಂತ ಬೇಸರ ಆಗಿದೆ. ಈ ರೀತಿಯ ಅಭಿನಯ ಚಿರಸ್ಥಾಯಿ ಆಗಿರುತ್ತದೆ ಎನ್ನುವ ಮಾತನ್ನು ಎಲ್ಲರ ಮುಂದೆ ಹೇಳಿಕೊಂಡಿದ್ದಾಳೆ ಆಕೆ. ಜೊತೆಗೆ ಕಂಗನಾ ರಾನೌತ್ ಳ ಅಭಿನಯಕ್ಕೆ ಫುಲ್ ಮಾರ್ಕ್ ನೀಡಿದ್ದಾಳೆ ಈ ನೀಳಕಾಯದ ಚೆಲುವೆ.

