2

1

3

ಬಂಟ್ವಾಳ: : ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ `ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ ಎರಡನೇ ದಿನದ ಪಾದಾಯಾತ್ರೆಗೆ ಬುಧವಾರ ಬೆಳಿಗ್ಗೆ ಮಾರ್ನಬೈಲ್ನಲ್ಲಿ  ಚಾಲನೆ ನೀಡಲಾಯಿತು. ವಂದೆ ಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಾಯಾತ್ರೆ ಸಜೀಪಮೂಡ ಹಾಗೂ ಸಜೀಪಮುನ್ನೂರು ಗ್ರಾಮದಲ್ಲಿ ಸಂಚರಿಸಿತು.  ಎರಡನೇ ದಿನದ ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರುವಾರಿ ರಾಜೇಶ್ ನಾಕ್ ಉಳೇಪಾಡಿಗುತ್ತು, ಪಕ್ಷದ ಪ್ರಮುಖರಾದ ಜಿ.ಆನಂದ, ದೇವದಾಸ್ ಶೆಟ್ಟಿ, ರಾಮದಾಸ್ ಬಂಟ್ವಾಳ, ದಿನೇಶ್ ಅಮ್ಟೂರು, ಪರುಷ ಸಾಲ್ಯಾನ್ ನೆತ್ತರಕೆರೆ, ರೋನಾಲ್ಡ್ ಡಿಸೋಜಾ, ಚರಣ್ ಜುಮಾದಿಗುಡ್ಡೆ, ಪ್ರಥ್ವಿರಾಜ್,  ಪ್ರವೀಣ್ಗಟ್ಟಿ ಮತ್ತಿತರರು ಹಾಜರಿದ್ದರು. ಬಿಜೆಪಿ ಕಾರ್ಯಕತರು ಉತ್ಸಾಹದಿಂದ ಪಾದಾಯಾತ್ರೆಯಲ್ಲಿ  ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *