ಪೊಳಲಿ ಜ.15: ಭಾರತದ ಏಳಿಗೆಯಾಗಬೇಕಾದರೆ ಅದು ಆಧ್ಯಾತ್ಮದಿಂದ ಮಾತ್ರ ಸಾದ್ಯ ಎಂದು ಪೊಳಲಿ ರಾಮಕೃಷ್ಣ ತಪೋವನ ಸ್ವಾವೀ ಹೇಳಿದರು. ಅವರು ಪೊಳಲಿ ಸಮೀಪದ ಮಣಿಕಂಠಪುರ ಎಂಬಲ್ಲಿ ‘ಮನೆ ಮನೆಗೆ ರಾಮಕೃಷ್ಣ’ ಎಂಬ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ಭಾರತದಲ್ಲಿ ಆಧ್ಯಾತ್ಮದ ಕೊರತೆಯಿಂದ ಭಾರತ ಹಿಂದುಳಿಯುತ್ತಿದೆ. ಆಧ್ಯಾತ್ಮವೆಂದರೆ ಅದು ಬರಿಯ ಪೂಜೆ ಪುರಸ್ಕಾರವಲ್ಲ ತನ್ನ ಏಳ್ಗೆಯೊಂದಿಗೆ ಇತರರ ಏಳ್ಗೆಗೆ ಶ್ರಮಿಸುವುದೇ ಆಧ್ಯಾತ್ಮ ಎಂದವರು ತಿಳಿಸಿದರು ಹಾಗೆಯೇ ದೇಶದ ಉನ್ನತಿಗೆ ನಾರಿಯರ ಪಾತ್ರ ಬಹಳ ಮಹತ್ವದ್ದು ಮಕ್ಕಳು ಹಾಳಾಗದಂತೆ ಅವರನ್ನು ಉತ್ತಮ ಮಾರ್ಗದಲ್ಲಿ ಬೆಳೆಸಬೇಕಾದದ್ದು ಒಬ್ಬ ತಾಯಿಯ ಕರ್ತವ್ಯ ಎಂದವರು ಹೇಳಿದರು. ಕಾರ್ಯಕ್ರಮದಲ್ಲಿ ಹಲವಾರು ಸ್ಥಳಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವು ಗೋಪೂಜೆ ಮತ್ತು ತುಳಸಿಪೂಜೆಯೊಂದಿಗೆ ಸಮಾಪನಗೊಂಡಿತು.



Well written