bjp gramadedege nadige

1a

ಸುದ್ದಿ9 ಬಂಟ್ವಾಳ(ಜ.16): ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ `ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ ಮೂರನೇ ದಿನದ  ಪಾದಾಯಾತ್ರೆಗೆ ಗುರುವಾರ ಬೆಳಿಗ್ಗೆ ಕರೋಪಾಡಿ ಗ್ರಾಮದ ವಿಘ್ನೇಶ್ವರ ಭಟ್ ಅವರ ಮನೆಯಿಂದ  ಚಾಲನೆ ನೀಡಲಾಯಿತು.
ವಂದೇ ಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಾಯಾತ್ರೆ ಕನ್ಯಾನ, ಕರೋಪಾಡಿ ಗ್ರಾಮಗಳಲ್ಲಿ ಸಂಚರಿಸಿತು.
ಮೂರನೇ  ದಿನದ ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರುವಾರಿ ರಾಜೇಶ್ ನಾಕ್ ಉಳಿಪಾಡಿಗುತ್ತು, ಪಕ್ಷದ ಪ್ರಮುಖರಾದ ಜಿ.ಆನಂದ, ಸುಲೋಚನಾ ಜಿ.ಕೆ.ಭಟ್, ಶೈಲಜಾ ಭಟ್,  ದೇವದಾಸ್ ಶೆಟ್ಟಿ, ರಾಮದಾಸ್ ಬಂಟ್ವಾಳ, ಪರುಷ ಸಾಲ್ಯಾನ್ ನೆತ್ತರಕೆರೆ, ಚರಣ್ ಜುಮಾದಿಗುಡ್ಡೆ, ಪ್ರಥ್ವಿರಾಜ್, ವೇದಾವತಿ, ಲಿಂಗಪ್ಪಗೌಡ, ಮುರಳಿಕೃಷ್ಣ ಹಾಗೂ ಕನ್ಯಾನ ಗ್ರಾ.ಪಂ. ಅಧ್ಯಕ್ಷ ರಘುರಾಮ ಶೆಟ್ಟಿ, ದೇವಪ್ಪ ಪೂಜಾರಿ , ಹಾಗೂ ಪಕ್ಷದ ಪ್ರಮುಖರು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು

By suddi9

Leave a Reply

Your email address will not be published. Required fields are marked *