ಸುದ್ದಿ9 ಕೈಕಂಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಂಗಳೂರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಂಗಳೂರು ನಗರ ಗ್ರಾಮಾಂತರ ಅಂತಾರಾಷ್ಟ್ರೀಯ ಮಾದಕ ವ್ಯಸನ ನಿಷೇಧವನ್ನು ಜೂ.26 ಶುಕ್ರವಾರದಂದು ಕೈಕಂಬದ ಪೇಟೆಯಲ್ಲಿ ಅಂಗಡಿ ಹಾಗೂ ವಾಹನಗಳಿಗೆ ಸ್ಟಿಕರ್ ಅಂಟಿಸಿ ಇದರಿಂದಾಗುವ ಅನಾಹುತದ ಕುರಿತು ಜಾಗ್ರತಿ ಮೂಡಿಸಲಾಯಿತು. ಈ ಕಾರ್ಯಕ್ರಮವನ್ನು ಮಾಜಿ ಜಿಲ್ಲಾಪಂಚಾಯತ್ ಸದಸ್ಯ ವಿನೋದ್ ಮಾಡ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಮಂಗಳೂರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಗ್ರಾಮಾಂತರ ಅಧ್ಯಕ್ಷರಾದ ಶ್ರೀಧರ್ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಜೆರಾಲ್ಡ್ ರೆಸ್ಕನ್ , ಕೈಕಂಬ ರಿಕ್ಷಾ ಯೂನಿಯನ್ ಅಧ್ಯಕ್ಷ ಅಹಮ್ಮದ್ ಭಾವ, ಕೈಕಂಬ ರಿಕ್ಷಾ ಯೂನಿಯನ್ ಇದರ ಮಾಜಿ ಅಧ್ಯಕ್ಷರು ರವಿ, ಶ್ರೀ ಕ್ಷೇತ್ರ ಧ. ಯೋಜನೆ ಕೈಕಂಬ ವಲಯ ಇದರ ಅಧ್ಯಕ್ಷ ಜಾನಪ್ಪ ಗೌಡ ಉಪಸ್ಥಿತರಿದ್ದರು.
ಎಡಪದವು ಸೇವಾಪ್ರತಿನಿಧಿ ಗೋಪಾಲ ಪೂಜಾರಿ ಸ್ವಾತಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ಕೈಕಂಬ ವಲಯ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಗುರುಪುರ ಮೂಳೂರು ಸೇವಾಪ್ರತಿನಿಧಿ ಜಯರಾಮ್ ಕೋಟ್ಯಾನ್ ಧನ್ಯವಾದವಿತ್ತರು.








