ಮುಂಬಯಿ : ಮಂಗಳೂರುನಿಂದ ಮುಂಬಯಿ ಬರುವ ಆನಂದ್ ಟ್ರಾವೆಲ್ ಬಸ್ ರಾತ್ರಿ ಸುಮಾರು 10 ಗಂಟೆಗೆ ಅಪಘಾತಕ್ಕೀಡಾಗಿದ್ದು, ಚಾಲಕ ಮಹಾಬಲ ಪೂಜಾರಿ ಅವರು ಸ್ಥಳದಲ್ಲಿಯೆ ದುರ್ಮರಣಕ್ಕೀಡಾಗಿದ್ದಾರೆ. ಕ್ಲಿನರ್ ಉದಯ, ಮತ್ತೊರ್ವ ಚಾಲಕ ಮತ್ತು ಇನ್ನಿಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಅಸ್ಪತ್ರೆಗೆದಾಖಲ್ಪಟ್ಟಿಸಿದ್ದಾರೆ.


ಆದೇ ತರಹ ನಿನ್ನೆ ಮಧ್ಯಾಹ್ನ ಮಂಗಳೂರಿನಿಂದ ಮುಂಬಯಿಯ ಹೊರಟ ಬಸ್, ರಾತ್ರಿ ಯಲ್ಲಾಪುರದಿಂದ ಸಾಗುವ ವೇಳೆಗೆ ತೀವ್ರ ಮಳೆಯಿಂದಾಗಿ ಮರವೊಂದು ರಸ್ತೆ ಹೂರುಳಿ ಬಿದ್ದಿದ್ದು, ಮುಂಭಾಗದಿಂದ ಆಗಮಿಸಿದ್ದ ಲಾರಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆಯು ಸಂಭವಿಸಿದೆ ಎನ್ನಲಾಗಿದೆ. ಇತರ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಆನಂದ್ ಸಂಸ್ಥೆಯ ಮ್ಯಾಥ್ಯು ಹಾಗೂ ವ್ಯವಸ್ಥಾಪಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರ ಕಳಜಿ ವಹಿಸಿ ಹೆಚ್ಚುವರಿ ಪ್ರಯಾಣಿಕರನ್ನು ಮುಂಬಯಿಗೆ ಸುರಕ್ಷಿತವಾಗಿ ಕಳುಹಿಸಿರುತ್ತಾರೆ.ಯಲ್ಲಾಪುರ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮಹಾಬಲ ಪೂಜಾರಿ ಅವರು ಓರ್ವ ದಕ್ಷ ಮತ್ತು ನುರಿತ ಚಾಲಕರಾಗಿದ್ದರು ಎನ್ನಲಾಗಿದೆ.

