ಪದ್ಮನಾಭ ಎಸ್.ಪಯ್ಯಡೆ- ಬಂಟ್ಸ್ ನ್ಯಾಯ ಮಂಡಳಿ ನೂತನ ಅಧ್ಯಕ್ಷ
ನ್ಯಾಯಶಾಸ್ತ್ರವನ್ನು ಧರ್ಮಶಾಸ್ತ್ರವನ್ನಾಗಿ ಪಾಲಿಸಿ : ಜಸ್ಟಿಸ್ ಸಂತೋಷ್ ಹೆಗ್ಡೆ
ಮುಂಬಯಿ : ನಾನೋರ್ವ ಸಾಮಾನ್ಯ ವಕೀಲನಾಗಿ, ನ್ಯಾಯಧೀಶನಾಗಿ, ಲೋಕಾಯುಕ್ತನಾಗಿ, ಸರ್ವೋಚ್ಚ ನ್ಯಾಯಲಯದ ನ್ಯಾಯಧೀಶನಾಗಿ ವಿವಿಧ ಸ್ತರಗಳಲ್ಲಿ ಕಾನೂನು ಪರಿಪಾಲಕನಾಗಿ ಶ್ರಮಿಸಿದ್ದೇನೆ. ನ್ಯಾಯಶಾಸ್ತ್ರವನ್ನು ಧರ್ಮಶಾಸ್ತ್ರವನ್ನಾಗಿಸಿದ ಪರಿಣಾಮವಾಗಿಯೇ ಇಷ್ಟೆತ್ತರಕ್ಕೆ ಬೆಳೆದಿದ್ದೇನೆ. ಆದರೆ ರಾಷ್ಟ್ರದ ಸದ್ಯದ ನ್ಯಾಯ ಪ್ರಭುತ್ವದಿಂದ ಬೇಸರಗೊಳ್ಳುವಂತಿದೆ. ದೇಶದ ಪ್ರಸಕ್ತ ಕಾನೂನು ವ್ಯವಸ್ಥೆ ಹದಗೆಟ್ಟಿರುವುದು ವಿಪರ್ಯಾ. ಜಯಾಲಲಿತಾ, ಲಾಲೂ ಪ್ರಸಾದ್ ಮತ್ತಿತರ ರಾಷ್ಟ್ರೀಯ ನಾಯಕರ ಕೇಸು ಪ್ರಕರಣಗಳ ತೀರ್ಪುಗಳು ಇದಕ್ಕೆ ಸಾಕ್ಷಿಯಂತಿದೆ. ಏನೇ ಇರಲಿ ಆ ಮಧ್ಯೆ ಕನಿಷ್ಠ ತಮ್ಮ ಸಮುದಾಯದ ಜನತೆಗೆ ಬಂಟ್ಸ್ ನ್ಯಾಯ ಮಂಡಳಿ ನೀಡುವ ಸೇವೆ ಪ್ರಶಂಸನೀಯ. ಅನೇಕನೇಕ ತಕರಾರು ವಿಚಾರಿತಸಮಸ್ಯೆಗಳಿಗೆ ತಮ್ಮೊಳಗೆನೇ ಪರಿಹಾರ ಕಂಡು ಕೊಳ್ಳುವ ಮೂಲಕ ಇಡೀ ದೇಶಕ್ಕೆ ಮಾದರಿ ಸಂಸ್ಥೆಯಾಗಿ ಸಟೆದು ನಿಂತಿರುವುದು ಅಭಿಮಾನದ ವಿಚಾರ ಎಂದು ಭಾರತ ರಾಷ್ಟ್ರದ ಸರ್ವೋಚ್ಚ ನ್ಯಾಯಲಯದ ನಿವೃತ್ತ ನ್ಯಾಯಧೀಶ, ಕರ್ನಾಟಕ ರಾಜ್ಯದ ಮಾಜಿ ಲೋಕಾಯುಕ್ತ ಜಸ್ಟಿಸ್ ನಿಟ್ಟೆ ಸಂತೋಷ್ ಹೆಗ್ಡೆತಿಳಿಸಿದರು. ಬಂಟ್ಸ್ ನ್ಯಾಯ ಮಂಡಳಿ ತನ್ನ 15ನೆ ಮಹಾಸಭೆಯನ್ನು ಕಳೆದ ಮಂಗಳವಾರ ರಾತ್ರಿ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್ನ ಬಂಟರ ಭವನದ ಕಿರು ಸಭಾಗೃಹದಲ್ಲಿ ಮಂಡಳಿ ಅಧ್ಯಕ್ಷ ಎಂ.ಡಿ.ಶೆಟ್ಟಿಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಗೆ ಜಸ್ಟಿಸ್ ಹೆಗ್ಡೆದೀಪ ಬೆಳಗಿಸಿ ಚಾಲನೆಯನ್ನೀಡಿ ಮಾತನಾಡಿದರು.

ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಬಾಂಬೇ ಬಂಟ್ಸ್ ಅಸೋಸಿಯೇಶನ್ನ ಉಪಾಧ್ಯಕ್ಷ ಎಂ.ಬಿ ವಿಠಲ ರೈ ಅತಿಥಿಗಳಾಗಿ ವೇದಿಕೆಯಲ್ಲಿ ಆಸೀನರಾಗಿದ್ದರು. ಮಹಾಸಭೆಯಲ್ಲಿ ನ್ಯಾಯ ಮಂಡಳಿಯ 2015-17ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಪದ್ಮನಾಭ ಎಸ್.ಪಯ್ಯಡೆ ಅವರನ್ನು ಹಾಗೂ ಉಪಾಧ್ಯಕ್ಷರನ್ನಾಗಿ ರವೀಂದ್ರ ಎಂ.ಅರಸ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ನಡೆಸಿತು. ಕಾರ್ಯಕಾರಿ ಸಮಿತಿಗೆ ಅವರನ್ನು ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ನ್ಯಾ| ಅಶೋಕ್ ಡಿ.ಶೆಟ್ಟಿ, ನ್ಯಾ| ರತ್ನಾಕರ್.ವಿ.ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ, ನ್ಯಾ| ಆನಂದ್ ವಿ.ಶೆಟ್ಟಿ, ಎನ್.ಸಿ ಶೆಟ್ಟಿ, ಪ್ರಭಾಕರ್ ಎಲ್.ಶೆಟ್ಟಿ, ಶ್ರೀಮತಿ ಜ್ಯೋತಿ ಆರ್.ಶೆಟ್ಟಿ, ರಾಮಕೃಷ್ಣ ವಿ.ಶೆಟ್ಟಿ, ಸಂಜೀವ ಶೆಟ್ಟಿ, ಪಾಂಡು ಎಂ.ಶೆಟ್ಟಿ, ಜಯ ಎ.ಶೆಟ್ಟಿ, ಪಿ.ಡಿ ಶೆಟ್ಟಿಅವರನ್ನು ಸಭೆಯು ಆಯ್ಕೆಗೊಳಿಸಿತು. ಇದೇ ಶುಭಾವಸರದಲ್ಲಿ ಮಂಡಳಿಗೆ ಸದಾ ಮಾರ್ಗದರ್ಶನವನ್ನಿತ್ತು ಪ್ರೇರಕರಾಗಿ ಸೂಕ್ತನ್ಯಾಯ ಒದಗಿಸುವಲ್ಲಿ ಸಹಯೋಗವನ್ನೀಡುತ್ತಿರುವ ಸಂತೋಷ್ ಹೆಗ್ಡೆ ಅವರನ್ನು ಎಂ.ಡಿ. ಶೆಟ್ಟಿ ಅಭಿವಂದಿಸಿದರು ಹಾಗೂ ನೂತನ ಅಧ್ಯಕ್ಷಪದ್ಮನಾಭ ಪಯ್ಯಡೆಹಾಗೂ ಉಪಾಧ್ಯಕ್ಷರವೀಂದ್ರ ಎಂ.ಅರಸ ಅವರನ್ನು ಜ| ಹೆಗ್ಡೆಪುಷ್ಫಗುಚ್ಛವನ್ನಿತ್ತು ಅಭಿನಂದಿಸಿ ಶುಭಾರೈಸಿದರು. ಎಂ.ಡಿ ಶೆಟ್ಟಿ ಅವರು ಅಧ್ಯಕ್ಷೀಯ ಭಾಷಣಗೈದು ಬಂಟರಲ್ಲಿನ ವಿವಿಧ ವ್ಯಾಜ್ಯಗಳನ್ನು ಕೋರ್ಟ್ನ ಹೊರಗೆ ಇತ್ಯರ್ಥಗೊಳಿಸುವ ಮಹತ್ತರ ಹೆಜ್ಜೆಯನ್ನಾಗಿಸಿ ಹದಿನೈದು ವರ್ಷಗಳ ಹಿಂದೆ ಸಂತೋಷ್ ಹೆಗ್ಡೆ ಮಾರ್ಗದರ್ಶನದಲ್ಲಿ ರೂಪಿಸಲ್ಪಟ್ಟ ಈ ಬಂಟ್ಸ್ ನ್ಯಾಯ ಮಂಡಳಿ ಮೂಲಕ ಹಲವಾರು ವಿವಾದಗಳನ್ನು ಸೌಹಾರ್ದತೆಯಿಂದ ಬಗೆಹರಿಸಿದ ವಿಶ್ವಾಸ ನನ್ನನ್ನು ಸಂತೈಸಿದೆ. ನಾನು ಎಲ್ಲಾ ಕ್ಷೇತ್ರಗಳಲ್ಲೂ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಶ್ರಮಿಸಿರುವ ನೆಮ್ಮದಿ ನನಗಿದೆ. ನಾನು ಯಾವತ್ತೂ ಅನ್ಯಾಯವನ್ನು ಸಮರ್ಥಿಸಿದವನಲ್ಲ. ಸಂಘದ ಶೈಕ್ಷಣಿಕ, ಸಾಮಾಜಿಕ, ಆಥಿರ್sಕ ಇತ್ಯಾದಿ ವಿಚಾರಗಳಲ್ಲೂ, ಹೊಟೇಲು ಉದ್ಯಮದ ಸಮಸ್ಯೆಗಳಲ್ಲೂ ಕಟಿಬದ್ಧನಾಗಿ ಶ್ರಮಿಸಿ ನ್ಯಾಯ ಒದಗಿಸಿರುವ ಹಿರಿಮೆ ನನಗಿದೆ ಎಂದಣಿಸಿದ್ದೇನೆ. ಸದಾ ನ್ಯಾಯ ಬದ್ಧತೆಗೆ ನಿಷ್ಠುರನಾಗಿ ಬಂಟರ ಸಂಘದ, ಸಮುದಾಯದ ಜನತೆಯ ಸೇವೆಗೈಯಿರುವ ಅಭಿಮಾನ ನನಗಿದೆ. ಆದರೆ ಕೆಲವರಿಗೆ ನಿಷ್ಠುರವಾದಿ ಎಂದೆಣಿಸಿರುವುದು ನಿಜ. ತಿಳಿಯದೆತಪ್ಪು ಮಾಡಿದಿದ್ದಲ್ಲಿ ಕ್ಷಮಿಸಿ ಎಂದರು. ನಮಗೆ ರಾಷ್ಟ್ರದ ಪ್ರಜಾಪ್ರಭುತ್ವದ ಕಾನೂನುಗಳ ಅಪಾರವಾದ ಗೌರವವಿದೆ. ಆದರೆ ಅಂತರಿಕ ವೈಮನಸ್ಸುಗಳ ವಿಚಾರಗಳಿಗಾಗಿ ಕೋರ್ಟು ಮೆಟ್ಟಲನ್ನೇರಿ ಕಾಲಹರಣ, ದುಂದುವೆಚ್ಚ, ವೈಮನಸ್ಸುಗಳಿಗೆ ಇನ್ನಷ್ಟು ಕುಮ್ಮಕ್ಕು ನೀಡುವುದನ್ನು ತಡೆಯುವುದನ್ನು ಮನವರಿಸಿ ನಮ್ಮೊಳಗೆನೇ ಸಂಧಾನನಡೆದರೆ ಸರ್ವರಿಗೂ ಒಳಿತು ಎನ್ನುವ ಹಿತದೃಷ್ಟಿಯಿಂದ ನಾವು ಈ ಮಂಡಳಿ ಮುಖೇನ ಸೇವಾ ಪ್ರವೃತ್ತರಾಗಿದ್ದೇವೆ. ಈ ಮೂಲಕ ತೃಪ್ತಿಯನ್ನೂ ಅನುಭವಿಸಿದ್ದೇವೆ. ಇದನ್ನೇ ಬಯಸುತ್ತಾ ಮುಂದಿನ ದಿನಗಳಲ್ಲಿ ಸಮಾಜ ಬಾಂಧವರಿಗಾಗಿ ಮತ್ತಷ್ಟು ನ್ಯಾಯ ಒದಗಿಸುವಲ್ಲಿ ನನ್ನಲ್ಲಿ ಅಪಾರವಾದ ಭರವಸೆಯನ್ನಿರಿಸಿ ಬಂಟ್ಸ್ ನ್ಯಾಯ ಮಂಡಳಿ ಅಧ್ಯಕ್ಷರನ್ನಾಗಿಸಿರುವುದಕ್ಕಾಗಿ ವಂದನೆಗಳು. ತಮ್ಮೆಲ್ಲರ ಇಷ್ಟಾನುಸಾರ ನನ್ನ ಸಾರಥ್ಯದಲ್ಲಿ ಈ ಮಂಡಳಿಯನ್ನು ಶಸಕ್ತವಾಗಿ ನಿರ್ವಹಿಸುವ ಪ್ರಯತ್ನ ಮಾಡುವೆಎಂದು ನೂತನ ಅಧ್ಯಕ್ಷಪದ್ಮನಾಭ ಪಯ್ಯಡೆಆಶಯ ವ್ಯಕ್ತಪಡಿಸಿದರು. ಆರ್.ಸಿ ಶೆಟ್ಟಿ, ಸೀತರಾಮ ಎಂ.ಶೆಟ್ಟಿ ಕೊಲಬಾ, ಐಕಳ ಹರೀಶ್ ಶೆಟ್ಟಿ, ನ್ಯಾ| ರತ್ನಾಕರ್.ವಿ.ಶೆಟ್ಟಿ, ಲತಾ ಜಯರಾಮ ಶೆಟ್ಟಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ಉಪಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ನ್ಯಾ| ಅಶೋಕ್ ಡಿ.ಶೆಟ್ಟಿ ವಾರ್ಷಿಕ ವರದಿ ಮತ್ತು ಗತವಾರ್ಷಿಕ ಮಹಾಸಭೆವರದಿ ವಾಚಿಸಿದರು. ಕೋಶಾಧಿಕಾರಿ ಡಾ| ಪ್ರಭಾಕರ ಶೆಟ್ಟಿ, ವಾರ್ಷಿಕ ಲೆಕ್ಕಪತ್ರಗಳಮಾಹಿತಿ ನೀಡಿದರು. ಮಂಡಳಿಯ ಮಾಜಿ ಗೌ| ಪ್ರ| ಕಾರ್ಯದರ್ಶಿ ನ್ಯಾ| ಕೆ.ಪಿ ಪ್ರಕಾಶ್ ಎಲ್.ಶೆಟ್ಟಿಸಭಾ ಕಲಾಪಗಳನ್ನು ನಡೆಸಿ ವಂದಿಸಿದರು.






