ಮುಂಬಯಿ : ಶ್ರೀ ಕ್ಷೇತ್ರಕದ್ರಿಯ ಮಂಜುನಾಥ ದೇವಳದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸೀಯಾಳಾಭಿಷೇಕ ನಡೆಸಲಾಯ್ತು. ಎ.ಜೆಶೆಟ್ಟಿ ನೇತೃತ್ವದಲ್ಲಿ ಹಾಗೂ ಎಸ್.ಪ್ರದೀಪಕುಮಾರ ಕಲ್ಕೂರ ಮಾರ್ಗದರ್ಶನದಲ್ಲಿ ಭಕ್ತಾದಿಗಳು ಸಮರ್ಪಿಸಿದ ಸಾವಿರಾರು ಎಳನೀರುಗಳಿಂದ ಅಭಿಷೇಕ ನಡೆಯಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ಕರ್ನಾಟಕ ಮುಜರಾಯಿ ಇಲಾಖೆಯ ರಾಜ್ಯ ಸದಸ್ಯರುಗಳಾದ ಜಗನ್ನಿವಾಸರಾವ್ ಪುತ್ತೂರು ಹಾಗೂ ಪದ್ಮನಾಭ ಕೋಟ್ಯಾನ್ ಅಲ್ಲದೆ ಕಾರ್ಪೊರೇಟರ್‍ಗಳಾದ ಅಶೋಕ್‍ಡಿ.ಕೆ., ಶಶಿಧರ ಹೆಗ್ಡೆ ಮತ್ತುಉದ್ಯಮಿ ರತ್ನಾಕರ ಜೈನ್, ಸುಂದರ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಮೋಹನ ಕೊಪ್ಪಳ, ದಿನೇಶ್ ದೇವಾಡಿಗ, ದೇವಳದ ಆಡಳಿತಾಧಿಕಾರಿ ನಿಂಗಯ್ಯ, ಸದಸ್ಯರಾದ ಪಿ. ಅನಂತಕೃಷ್ಣ ಭಟ್, ದೇವದಾಸ್, ನಿವೇದಿತಾ ಶೆಟ್ಟಿ ಮೊದಲಾದವರ ಸಹಿತಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು. ಏಕಾದಶಿ ರುದ್ರಾಭಿಷೇಕದೊಂದಿಗೆ, ಸಾಮೂಹಿಕ ಪ್ರಾರ್ಥನೆ ಹಾಗೂ ಸೀಯಾಳಾಭಿಷೇಕವನ್ನು ದೇವಳದ ಪ್ರಧಾನ ಅರ್ಚಾಕ ರಾಮ ಅಡಿಗರು ನೆರವೇರಿಸಿದರು. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ರಾಜ್ಯ ಮುಜರಾಯಿ ಇಲಾಖೆಯ ಸದಸ್ಯರಾಗಿ ನಿಯುಕ್ತಿಗೊಂಡಿರುವ ಜಗನ್ನಿವಾಸ ರಾವ್ ಹಾಗೂ ಪದ್ಮನಾಭ ಕೋಟ್ಯಾನ್ ಅವರನ್ನು ದೇವಳದ ವತಿಯಿಂದಗೌರವಿಸಲಾಯ್ತು.

