ಕೈಕಂಬ: ಕರಿಯಂಗಳ ಗ್ರಾಮದ ಪೊಳಲಿ ಶ್ರೀ ರಾಜರಾಜೇಶ್ವರೀ ದೇಗುಳಕ್ಕೆ ಹೋಗುವ ಕಾಂಕ್ರೀಟಿಕರಣದ ರಸ್ತೆಯ ಉದ್ಘಾಟನೆಯನ್ನು ಅರಣ್ಯ ಸಚಿವ ರಮಾನಾಥ ರೈ ಅವರು ಉದ್ಘಾಟಿಸಿದರು.


ಅವರು ಜೂ.22 ರಂದು ಸೋಮವಾರ ಪೊಳಲಿ ರಥ ಬೀದಿ ರಸ್ತೆಗೆ ಕಾಂಕ್ರ್ಟಿಕರಣಗೊಳಿಸಲು ನಾಬರ್ಾಡ್ ಆರ್ ಐ ಡಿ ಎಫ್ 19(ಪ್ರವಾಸೋದ್ಯಮ) ಯೋಜನೆಯಡಿಯಲ್ಲಿ ಮಂಜೂರಾದ ಮೊತ್ತ 132.00 ಲಕ್ಷ. ಮೊತ್ತವನ್ನು ಬಿಡುಗಡೆಗೊಳಿಸಿ ದೇವಳಕ್ಕೆ ಬರುವ ಭಕ್ತಾಧಿಗಳ ಅನುಕೂಲಕ್ಕೆ ರಸ್ತಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ರಾಜರಾಜೇಶ್ವರೀ ದೇವಳದ ಕಾರ್ಯನಿರ್ವಣಾಧಿಕಾರಿ ಹರೀಶ್ಚಂಧ್ರ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರರಾದ ಯು. ತಾರಾನಾಥ ಆಳ್ವ , ಚೇರ ಸೂರ್ಯನಾರಾಯಣ ರಾವ್, ಶ್ರೀ ರಾಜರಾಜೇಶ್ವರೀ ದೇವಳದ ಪ್ರಧಾನ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಕೆ. ರಾಮ್ ಭಟ್, ವಿಷ್ಣುಮೂತರ್ಿ ಭಟ್, ಎ ಡಬ್ಲ್ಯೊ ಉಮೇಶ್ ಭಟ್, ಜೆ.ಇ. ಅರುಣು ಪ್ರಕಾಶ್, ಪ್ರವಾಶೋದ್ಯಮ ಇಲಾಖೆಯ ಪ್ರಭಾಕರ್ , ಕರಿಯಂಗಳ ಗ್ರಾಮ ಪಂಚಾಯತ್ ಪಿಡಿಒ ನವೀನ್ ಭಂಡಾರಿ, ಕರಿಯಂಗಳ ಗ್ರಾ. ಪಂ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.







