(ಬೆಂಗಳೂರು), ಜೂ. 18: ಪತ್ರಕರ್ತರಿಗೂ ರಾಜೀವ್ ಆರೋಗ್ಯಭಾಗ್ಯ-ವಾರ್ತಾ  ಇಲಾಖೆ ಮುಂಬಯಿ ಕರ್ನಾಟಕ  ಸರ್ಕಾರ 2014-15ನೇ ಸಾಲಿನ ಬಜೆಟ್ನಲ್ಲಿ ಕಾರ್ಯನಿರತ ಪತಕ್ರರ್ತರು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ವಿಮಾ ಯೋಜನೆಯನ್ನು
ಘೋಷಿಸಿದೆ ಯೋಜನೆಗೆ ಸೇರಬಯಸುವ ಪತ್ರಕರ್ತರು ಜೂನ್ 25ರೊಳಗೆ ಹೆಸರನ್ನು ನೋಂದಾಯಿಸುವಂತೆ ಮನವಿ ಮಾಡ ಲಾಗಿದೆ.

download

ರಾಜೀವ್ ಆರೋಗ್ಯ ಭಾಗ್ಯ’ ಯೋಜನೆಗೆ ಮಾನ್ಯತೆ ಪಡೆದ ಪತ್ರಕರ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ
ಪಟ್ಟಿಯಲ್ಲಿರುವ ಪತ್ರಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರುಗಳನ್ನು ಪ್ರಥಮ ಹಂತದಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಬೆಂಗಳೂರಿನ ಮಾಧ್ಯಮ ಸಂಸ್ಥೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಹೆಸರುಗಳನ್ನು ಪೂರ್ಣ ವಿಳಾಸದೂಂದಿಗೆ ಪಟ್ಟಿಮಾಡಿ ವಾರ್ತಾ  ಇಲಾಖೆಸುದ್ದಿ ಮತ್ತು ಪತ್ರಿಕಾ ಶಾಖೆಗೆ ಕೆಳುಹಿಸುವಂತ ಕೋರಿದ್ದರೂ ಸಹ
ಇದುವರಗೆ ಪೂರ್ಣಪ್ರಮಾಣದಲ್ಲಿ ಪಟ್ಟಿ ಕಚೇರಿಗೆ ತಲುಪಿರುವುದಿಲ್ಲ. ಸಂಪಾದಕರು, ಸುದ್ದಿ ಸಂಪಾದಕರು, ಮುಖ್ಯ ಉಪಸಂಪಾದಕರು, ಉಪಸಂಪಾದಕರು, ವರದಿಗಾರರು, ಬಾತ್ಮೀದಾರರು, ಬ್ಯೂರೋ ಚೀಫ್, ಕ್ಯಾಮರಾಮೆನ್, ಛಾಯಾಗ್ರಾಹಕ ಹುದ್ದಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಪತ್ರಕರ್ತರ ಹೆಸರುಗಳನ್ನು ಮಾತ್ರ ಪಟ್ಟಿಯಲ್ಲಿ ನಮೂದಿಸುವಂತೆ ಕೋರಲಾಗಿದೆ . ಯೋಜನೆಗೆ ಒಳಪಡುವ ಪತಕ್ರರ್ತರು, ಮಾಧ್ಯಮ ಸಂಸ್ಥೆ ಸೇರುವ ಸಂದರ್ಭ ಪಡೆದ ನೇಮಕಾತಿ ಪ್ರಮಾಣ ಪತ್ರ ಮತ್ತು ಇತ್ತೀಚಿನ ವೇತನ ಪ್ರಮಾಣ ಪತ್ರಹೊಂದಿರುವುದು ಕಡ್ಡಾಯವಾಗಿರುತ್ತದೆ. ಈ ಕೆಳ ಕಂಡ ಮಾದರಿಯಲ್ಲಿ ಅರ್ಹ ಪತಕ್ರರ್ತರಪಟ್ಟಿಯನ್ನು ಸಂಸ್ಥೆಯೆ ಅಧಿಕೃತ ಮೊಹರು, ಸಹಿಯೊಂದಿಗೆ ಜೂನ್ 25ರೊಳಗೆ ಕಳುಹಿಸುವಂತೆ ಪಕ್ರಟಣೆಯುಲ್ಲಿ ಕೋರಲಾಗಿದೆ.

By suddi9

Leave a Reply

Your email address will not be published. Required fields are marked *