ಮುಂಬಯಿ, ಫೆ.16: ರೈಲ್ವೆ ಯಾತ್ರಿ ಸೇವಾ ಸಂಘ(ರಿ) ಬೊರಿವಲಿ ಮುಂಬಯಿ, ಕನ್ನಡಿಗರ ಪತ್ರಕರ್ತರ ಸಂಘ, ಮಹಾರಾಷ್ಟ್ರ, ಕರ್ನಾಟಕ ಮಲ್ಲ, ಉದಯವಾಣಿ ಪತ್ರಿಕೆಯ ಸಹಯೋಗದಿಂದ ನಡೆಸಲಾದ ಜನತಾ ಅದಾಲತ್ ಒಂದು ಸಂವಾದ ಕಾರ್ಯಕ್ರಮವು ಶನಿವಾರ ಬೊರಿವಲಿ ಪಶ್ಚಿಮದ ವಝೀರ್ ಶಿಂಪೋಲಿ ಕ್ರಾಸ್ ರೋಡ್ನಲ್ಲಿನ ಶಾಂತಿಧಾಮ್ ಪ್ರಾರ್ಥನಾಲಯ ಸಭಾಗೃಹದಲ್ಲಿ ಸಂಸದ ಗೋಪಾಲ ಶೆಟ್ಟಿ ಅವರ ನೇತ್ರತ್ವದಲ್ಲಿ ನೇರವೇರಿತು.

Railway Yaatri Sangha Meeting-3

Railway Yaatri Sangha Meeting-5

ರೈಲ್ವೆ ಯಾತ್ರಿ ಸಂಘದ ಪದಾಧಿಕಾರಿಗಳು ಕಳೆದ 3 ವರ್ಷದ ಸತತ ಪ್ರಯತ್ನದಿಂದ ಏಳು ಮಂದಿ ರೈಲ್ವೆ ಮಂತ್ರಿಗಳಿಗೆ ವಿನಂತಿ ಪತ್ರ ನೀಡಿದ್ದೂ ಇದುವರೆಗೆ ಯಾರೂ ಸ್ಪಂದಿಸಿಲ್ಲ ಹಾಗೂ ಕಾರ್ಯಗತವಾಗಿಲ್ಲ. ಆದರೆ ಈ ಬಾರಿ ಗೋಪಾಲ ಶೆಟ್ಟಿ ಅವರು ತಮ್ಮ ಅಪ್ತರಾದ ರೈಲ್ವೆ ಮಂತ್ರಿ ಸುರೇಶ್ ಪ್ರಭು ಅವರಲ್ಲಿ ಮಾತನಾಡಿ ಪಶ್ಚಿಮ ರೈಲ್ವೆಯಿಂದ ಹೊಸ ಸೇವೆ ಆರಂಭಿಸುವ ಯೋಜನೆ ಸಫಲವಾಗುವ ಭರವಸೆ ನಮಗಿದೆ ಎಂದರು. . ಈ ಸಭೆಯಲ್ಲಿ  ಎಲ್ಲಾ ತುಳು ಕನ್ನಡಿಗರ ಸಂಘ ಸಂಸ್ಥೆಗಳೊಂದಿಗೆ  ಚರ್ಚಿಸಿ  ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡಲು ಅನುಕೂಲವಾಗುವ ದ್ರಷ್ಟಿಯಲ್ಲಿ   ಸಭೆಯನ್ನು  ಅಯೋಜಿಸಿಲಾಗಿದ್ದು   ಈ ಸಭೆಯಲ್ಲಿ ಭಾಗವಹಿಸಲು  ಎಸ್ಎಂಎಸ್ ಮೂಲಕ ಸಂದೇಶವನ್ನು ರವಾನಿಸಿ  ಸಮಾಜದ ಎಲ್ಲಾ ಬಾಂಧವರು ಅಧಿಕ ಸಂಖ್ಯೆಯಲ್ಲಿ  ಬರುವಂತಾಗಲು ಅನುಕೂಲವಾಯಿತು.  ಅಲ್ಲದೆ ಪ್ರೈವೇಟ್ ಟೂರಿಸ್ಟ್ ಬಸ್ಸುಗಳಲ್ಲಿ ಮುಂಬಯಿಯಿಂದ ಮಂಗಳೂರಿಗೆ ರಜಾದಿನಗಳನ್ನು ಹಾಗೂ ಹಬ್ಬದ ದಿನಗಳಲ್ಲಿ ದರವನ್ನು ಏರಿಸುತ್ತಾರೆ ಮತ್ತು ಮಳೆಗಾಲದಲ್ಲಿ ಕೆಳಗಿಳಿಸುತ್ತಾರೆ. ಹೀಗೆ ಮಾಡದೆ ವರ್ಷದ ಎಲ್ಲಾ ದಿನಗಳಲ್ಲಿ ಒಂದೇ ರೀತಿಯ ದರ ಇರಬೇಕೆಂದು ಸೂಚಿಸಿದರು.

ಸಭೆಯಲ್ಲಿ  ಎಲ್ಲರಿಗೂ ಪ್ರಶ್ನೆ ಕೇಳಲು ಮುಕ್ತ ಅವಕಾಶ ನೀಡಲಾಗಿತ್ತು  ಎಲ್ಲರು ಅವರವರ ಅಭಿಪ್ರಾಯಗಳನ್ನು ಸಭೆಯಲಿ ತಿಳಿಸಿದರು

ಜಯಕರ ಡಿ. ಪೂಜಾರಿ ಅವರು ಜಾರ್ಜ್  ಫೆರ್ನಾಂಡಿಸ್ ರೈಲ್ವೆ ಮಂತ್ರಿಯಾಗಿ ಆರಂಭಗೊಂಡ ಈ ಕೊಂಕಣ ರೈಲ್ವೆಯಿಂದ ಜನರಿಗೆ ಸಾಕಷ್ಟು ಪ್ರಯೋಜನವಾಗಿದ್ದರೂ ಪಶ್ಚಿಮ ರೈಲ್ವೆಯಲ್ಲಿ ನೆಲೆಸಿದ ಜನರಿಗೆ ಯಾವ ಪ್ರಯೋಜನವು ಸಿಗಲಿಲ್ಲ. ಹಾಗಾಗಿ ಗೋಪಾಲ ಶೆಟ್ಟಿ ಅವರು ಪಶ್ಚಿಮ ರೈಲ್ವೆಯಿಂದ ಒಂದು ರೈಲನ್ನು ಮಂಗಳೂರು ಕಡೆಗೆ ಓಡಿಸಿದಂತಾದರೆ ಜಾರ್ಜ್  ಫೆರ್ನಾಂಡಿಸ್  ಅವರಂತೆ ಗೋಪಾಲ್ ಶೆಟ್ಟಿ  ಅವರು ನೆನಪಿನಲ್ಲಿ ಇರುವಂತೆ ಆಗಬಹುದು ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಪ್ರೇಮನಾಥ ಕೋಟ್ಯಾನ್, ಕೋಶಾಧಿಕಾರಿ ಶ್ರೀಮತಿ ರತ್ನಾ ಶೆಟ್ಟಿ, ಜೊತೆ ಕಾರ್ಯದಶರ್ಿ ರಜಿತ್ ಸುವರ್ಣ, ಸಲಹೆಗಾರ ಸೈಮನ್ ಪಿ.ಡಿ’ಕೋಸ್ಟಾ, ಮಾಜಿ ರೈಲ್ವೆ ಪ್ರಾಂತಿಯ ವಲಯದ ಪ್ರತಿನಿಧಿ ಶ್ರೀಮತಿ ಶೀಲಾ ಶೆಟ್ಟಿ, ಶಕೀಲಾ ಶೆಟ್ಟೀ ಸಂಘದ ಇತರೇ ಪದಾಧಿಕಾರಿಗಳಾದ ಓಲಿವೆರ್ ಡಿ’ಸೋಜಾ ವಸಾಯಿ, ಟಿ.ಕೆ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಶಾಂತಿಧಾಮ್ ಪ್ರಾರ್ಥನಾಲಯದ ಅಧಿಕಾರಿ, ವಸಂತ್ ಶೆಟ್ಟಿ, ಪ್ರವೀಣ್ ಆರ್. ಶೆಟ್ಟಿ, ಪೇಟೆಮನೆ ಪ್ರಕಾಶ್ ಶೆಟ್ಟಿ, ಉಪಹಾರ ನೀಡಿದ ರವೀಂದ್ರ ಹೋಟೆಲ್ ಮಾಲಕ ಸಾಧು ಶೆಟ್ಟಿ ಮತ್ತು ದೀಪಕ್ ಹೊಟೇಲ್ನ ಪರವಾಗಿ ಶ್ರೀಮತಿ ಅಪ್ಪಿ ವಿಠಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.  ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಸಿ.ಕುಂದರ್ ಧನ್ಯವಾದಗೈದರು. ರೈಲ್ವೆ ಸಂಘದ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ   ಸ್ವಾಗತಿಸಿದರು  .  ನಿರೂಪಣೆಗೈದ ಜಯ ಶೆಟ್ಟಿ ಶಿಮಂತೂರು

By suddi9

Leave a Reply

Your email address will not be published. Required fields are marked *