ಮುಂಬಯಿ, ಜೂ.23: ಮುಂಬಯಿ ಹೊಟೇಲ್ ಉದ್ಯಮಿ, ಬೆಳುವಾಯಿ ಮಿತ್ತ ಬೆಟ್ಟು ಬರ್ಕೆ ದೈವ ಗುಡಿಗಳ ಜೀರ್ಣೋದ್ಧಾರ ಸಮಿತಿ ಮುಂಬಯಿ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಬೆಳುವಾಯಿ ನಾರಾಯಣ ಸುವರ್ಣ ಅವರಿಗೆ ನಮನ ಫ್ರೆಂಡ್ಸ್ ಮುಂಬಯಿ ವತಿಯಿಂದ ಶ್ರದ್ಧಾಂಜಲಿ  ಸಭೆ ನಡೆಯಿತು.

ಸಭೆಯು ಜೂ. 21 ರಂದು ಭಾನುವಾರ ದಾದರ್ ಪಶ್ಚಮದ ಛಬಿಲ್ದಾಸ್ ಹೈಸ್ಕೂಲ್  ಇದರ  ಕಿರು ಸಭಾಗೃಹದಲ್ಲಿ  ಜರಗಿತು. ಈ ಸಂದರ್ಭದಲ್ಲಿ ಬೆಳುವಾಯಿ ಮಿತ್ತಬೆಟ್ಟು ಬರ್ಕೆ ಕುಟುಂಬಸ್ಥರು ಸೇರಿದಂತೆ ನಾರಾಯಣ ಸುವರ್ಣ ಇವರ ಹಿತೈಷಿ ಬಂಧು-ಮಿತ್ರರು ಉಪಸ್ಥಿತರಿದ್ದು, ನಾರಾಯಣ ಸುವರ್ಣ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ನಮನ ಸಲ್ಲಿಸಿದರು.
Narayanna Beluvai - A

ಭೋಜ ಪೂಜಾರಿ, ಆನಂದ ಡಿ.ಸುವರ್ಣ, ಅಶೋಕ್ ಮೂಡಬಿದ್ರೆ, ಪ್ರಕಾಶ್ ಕುಮಾರ್ ಮೂಡಬಿದ್ರೆ, ಗೋಪಾಲ್ ಆರ್.ಪೂಜಾರಿ, ಪ್ರಭಾಕರ್ ಬೆಳುವಾಯಿ ಇವರು ಅಗಲಿದ ನಾರಾಯಣ ಸುವರ್ಣರ ಸಮಾಜಮುಖಿ ಸೇವೆ ಹಾಗೂ ತಮ್ಮ ಒಡನಾಟದ ಅನುಭವಗಳನ್ನು ಹಂಚಿಕೊಂಡು ನುಡಿ ನಮನದೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ರವೀಂದ್ರ ಸುವರ್ಣ, ಆನಂದ ಸುವರ್ಣ, ಕರುಣಾಕರ ಸುವರ್ಣ, ಉದಯ ಸುವರ್ಣ, ಪದ್ಮನಾಭ ಜಿ. ಕರ್ಕೇರ, ಸಂತೋಷ್ ಅಂಚನ್, ಜಗದೀಶ್ ಸುವರ್ಣ, ಬೇಬಿ ಎಸ್.ಅಂಚನ್, ಅನಿತಾ ಜಯ ಅಂಚನ್, ಜ್ಯೋತಿ ಸುವರ್ಣ, ಉದಯ ಸುವರ್ಣ ಡೊಂಬಿವಲಿ, ಹರ್ಷತ್, ದಿವಾಕರ್ ಇರ್ವತ್ತೂರು ಸೇರಿದಂತೆ ನಾರಾಯಣ ಸುವರ್ಣರ ಹಿತೈಷಿಗಳು ಹಾಗೂ ಅವರ ಮಿತ್ರರು ಉಪಸ್ಥಿತರಿದ್ದು, ಪುಷ್ಪ ವೃಷ್ಠಿಗೈದು ಶ್ರದ್ಧಾಂಜಲಿ ಸಲ್ಲಿಸಿದರು.

By suddi9

Leave a Reply

Your email address will not be published. Required fields are marked *