ಕಿನ್ನಿಗೋಳಿ: ಸಮಾಜ ಸೇವೆ ಎಂದರೆ ಅದು ದೇವತಾ ಕಾರ್ಯ, ಸಂಘ ಸಂಸ್ಥೆಗಳು ನಿರಂತರ ಸಾಮಾಜ ಸೇವೆಯಲ್ಲಿ ತೂಡಗಿಕೊಳ್ಳ ಬೇಕು ಎಂದು ಇಸ್ಲಾಮಿಕ್ ಕಲ್ ರಲ್ ಸೆಂಟರ್ನ ಪ್ರಧಾನ ಕಾರ್ಯದರ್ಶಿ ಬಿ.ಎಂ ಮಮ್ತಾಜ್‍ಅಲಿ ಹೇಳಿದರು. ಅವರು ಜೂ. 18 ರಂದು ಕೃಷ್ಣಾಪುರ 7 ನೇ ಬ್ಲಾಕ್ನ ಪ್ಯಾರಡೈಸ್ ಕ್ಲಬ್ನ ವತಿಯಿಂದ ಸುಮಾರು 9 ಲಕ್ಷ ರೂಪಾಯಿ ವೆಚ್ಚದಲ್ಲಿ 3000 ರೂಪಾಯಿ ಮೌಲ್ಯದ 300 ಬಡ ಕುಟುಂಬಗಳಿಗೆ ಒಂದು ತಿಂಗಳ
ಅಗತ್ಯ ದೈನಂದಿನ ದಿನಬಳಕೆ ವಸ್ತುಗಳನ್ನು ಒಳಗೊಂಡ ರಂಝಾನ್ ಕಿಟ್ ವಿತರಿಸಿ ಮಾತನಾಡಿದರು.
katipalla kit vitarane
ಸಮಾರಂಭದಲ್ಲಿ ಮನಪಾ ಸದಸ್ಯ ತಿಲಕ್ ರಾಜ್ ಕೃಷ್ಣಾಪುರ, ಆಯಾಝ್ ಕೃಷ್ಣಾಪುರ, ಸುರತ್ಕಲ್ ಪೊಲೀಸ್ಠಾಣಾಧಿಕಾರಿ ಚೆಲುವರಾಜ್, ಕೃಷ್ಣಾಪುರ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಉಸ್ಮಾನ್, ಮಾಜಿ ಉಪಾಧ್ಯಕ್ಷ ಪಾಲ್ಕನ್ ಹಕೀಂ, ಪ್ಯಾರಡೈಸ್ ಸಂಸ್ಥೆಯ ಉಪಾಧ್ಯಕ್ಷ ಅಬುಬಕ್ಕರ್ ಟಿ.ಎಂ, ಕಾರ್ಯದರ್ಶಿ ಹಮೀದ್ ಮಾವರಿಯಬ್ಬ, ಜತೆ ಕಾರ್ಯದರ್ಶಿ ಅಜೀಜ್ ಸೈಲ್, ಮುಭಾರಕ್, ಕಬೀರ್, ಅಬುಬಕ್ಕರ್ ಬಿ.ಎಂ, ಇಪ್ತಿಕಾರ್ ಅಹ್ಮದ್, ?ರೋಜ್ಖಾನ್, ಬಶೀರ್, ಉಸ್ಮಾನ್, ಆದ್ದು, ಇಬ್ರಾಹಿಂ , ಲತೀಪ್, ಬಾಂಬೆ ಝಾಕೀರ್, ರಪೀಕ್ ಕೆಸಿಎಸ್, ಅಖಿ?ಕ್, ಉಮರಬ್ಬ, ಅಶ್ರಫ್ ಕೆಸಿಎಸ್, ಅಶಿಕ್ ಟ್ರೇಡರ್ಸ್ ಮಾಲಕ ಅರೀಫ್, ಅರಾಫತ್, ಶರೀಫ್ ಜೋಕಟ್ಟೆ ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕ ಅಬ್ದುಲ್ ಖಾದರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *