ಹಳೆಯಂಗಡಿ : ಪಾವಂಎ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ರಿಲೀಜಿಯಸ್ ಟ್ರಸ್ಟ್ನ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಯಕ್ಷಕಲಾ ವಿಭಾಗದಿಂದ ಕೊಡಮಾಡುವ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಕಲಾ ಪ್ರಶಸ್ತಿಯನ್ನು ಖ್ಯಾತ ಅರ್ಥವಾದಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳಿಗೆ ನೀಡಲಾಗುವುದು ಎಂದು ಎಂ.ಶಶೀಂದ್ರ ಕುಮಾರ್ ತಿಳಿಸಿದ್ದಾರೆ.

ಪಾವಂಜೆಯ ಜ್ಞಾನಶಕ್ತಿ ದೇವಳದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ತಾಳಮದ್ದಲೆ ಸಪ್ತಾಹ ನಮಃ ಪರಮ ಋಷಿಭ್ಯಃದ ಸಮಾರೋಪ ತಾ.14ರಂದು ನಡೆಯಲಿದ್ದು, ಈ ಸಂದರ್ಭ ತಾಳಮದ್ದಲೆ ಕ್ಷೇತ್ರದ ಅಪೂರ್ವ ಚಿಂತಕ, ಹಿರಿಯ ಅರ್ಥದಾರಿಗಳ ಸಮದಂಡಿ, ಪ್ರವಚನಕಾರ, ಸಾಹಿತಿ, ಶಿಕ್ಷಣ ತಜ್ಞ, ಕೃಷಿಕರೂ, ವಿದ್ವಾಂಸರೂ ಆದ ಮೂಡಂಬೈಲು ಶಾಸ್ತ್ರಿಗಳಿಗೆ ಈ ಕಲಾ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು ಎಂದವರು ತಿಳಿಸಿದ್ದಾರೆ
