ಅಮೃತಸರದ ಹಾಲಿ ಸಂಸದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು ಪತ್ನಿ ನವಜೋತ್ ಕೌರ್ ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಕ್ಷೇತ್ರದ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾದ ಅವರು ಜೆಟ್ಲಿ ಪರ ಪ್ರಚಾರ ನಡೆಸಲು ಕಠಿಣ ಶ್ರಮ ವಹಿಸಿ ಎಂದು ಕೇಳಿಕೊಂಡಿದ್ದಾರೆ. ಈ ಬಾರಿ ಅಮೃತಸರದಿಂದ ಸಿದ್ಧು ಬದಲಿಗೆ ಅರುಣ ಜೇಟ್ಲಿಗೆ ಟಿಕೆಟ್ ನೀಡಲಾಗಿದೆ.

sidhu

ಅಮೃತಸರದ ಮಾಜಿ ಬಿಜೆಪಿ ಶಾಸಕಿ ನವಜೋತ್ ಕೌರ್ ಜೆಟ್ಲಿ ಪರ ಹೆಚ್ಚೆಚ್ಚು ಮತಗಳನ್ನು ಖಚಿತಪಡಿಸಿಕೊಳ್ಳಲು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿನ ವಿವಿಧ ನಿಗಮ ವಾರ್ಡ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರ ಜತೆ ಸಭೆ ನಡೆಸಿದರು.ತಮ್ಮ ವಿಧಾನಸಭಾ ಕ್ಷೇತ್ರದಲ್ಲೂ ಜೇಟ್ಲಿ ಪರ ಪ್ರಚಾರ ನಡೆಸಿದ ಅವರು “ನನ್ನ ಪತಿಯ ವಿಷಯ ಭಿನ್ನವಾಗಿದೆ. ನಾನು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *