ಕನಿಷ್ಟ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಬೇಡ: ಆರ್ ಬಿಐ
ನವದೆಹಲಿ: ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡ ವಿಧಿಸದಂತೆ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. ಕಡಿಮೆ ಬ್ಯಾಲನ್ಸ್ ಖಾತೆಗಳಿಗೆ ಸೇವೆಗಳನ್ನು ಕಡಿತ ಮಾಡಿ ಆದರೆ ದಂಡ ವಿಧಿಸಬೇಡಿ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.ಗ್ರಾಹಕರ ಕಷ್ಟ ಅಥವಾ ಗಮನಹರಿಸದಿರುವ ವರ್ತನೆಗೆ ಅನುಚಿತ ಲಾಭವನ್ನು ಬ್ಯಾಂಕ್‌ಗಳು ಪಡೆಯಬಾರದು.
ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುವ ಬದಲಿಗೆ ಇಂತಹ ಖಾತೆಗಳಿಗೆ ನೀಡುವ ಸೇವೆಯನ್ನು ಕಡಿತಗೊಳಿಸಿ ಮತ್ತು ಕನಿಷ್ಟ ಮೊತ್ತದ ಮಟ್ಟವನ್ನು ತಲುಪಿದಾಗ ಸೇವೆಯನ್ನು ಮರುಆರಂಭಿಸಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಖಾಸಗಿ ಬ್ಯಾಂಕ್‌ಗಳ ಖಾತೆಗಳಲ್ಲಿ 10,000 ರೂ. ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳಬೇಕಾದ ಸಂದರ್ಭದಲ್ಲಿ ಕನಿಷ್ಠ ಮೊತ್ತ ಉಳಿಸಿರದ ಕಾರಣಕ್ಕಾಗಿ ಪ್ರತೀ ಮೂರು ತಿಂಗಳಿಗೊಮ್ಮೆ ದಂಡ ವಿಧಿಸಿದ ಬಳಿಕ ಅವರ ಖಾತೆಯಲ್ಲಿದ್ದ ಹಣವೇ ಮಾಯವಾಗುತ್ತಿರುವುದು ಖಾತೆದಾರರಿಗೆ ಅರಿವಾಗುತ್ತಿದೆ. ಇದರಿಂದ ಖಾತೆದಾರರು ಆಕ್ರೋಶಿತರಾಗುತ್ತಿದ್ದಾರೆ.