ಗೀತಾ ಶಿವರಾಜ್ ಕುಮಾರ್  ರಾಜಕೀಯ ಭವಿಷ್ಯ ಮತದಾರರ ಮೇಲೆ ಅವಲಂಬಿತ
ಸುದ್ದಿ9 ಮೂಲ್ಕಿ; ರಾಜ್ಕುಟುಂಬವು ರಾಜಕೀಯಕ್ಕೆ ಬಂದಿರುವುದು ಆ ಕುಟುಂಬದ ಸ್ವಂತ ನಿರ್ಧಾರ ಅದಕ್ಕೆ ಆಕ್ಷೇಪ ಇಲ್ಲ, ರಾಜಕೀಯ ಹಾಗೂ ಕನ್ನಡ ಚಿತ್ರರಂಗದ ಸ್ನೇಹ ಸಮ್ಮಿಲನದ ಪರಸ್ಪರ ನಂಟಿರುವುದರಿಂದ ಚಿತ್ರರಂಗದಲ್ಲಿ ಮಿಂಚಿದವರು ರಾಜಕೀಯದ ಅಖಾಡಕ್ಕೆ ಇಳಿಯುತ್ತಿರುವುದು ಸಹಜ ಪ್ರಕ್ರಿಯೆ, ಶಿವಮೊಗ್ಗದಲ್ಲಿ ಗೀತಾ ಶಿವರಾಜ್ಕುಮಾರ್ರ ರಾಜಕೀಯ ಸೋಲು, ಗೆಲುವು ಅವರ ಕ್ಷೇತ್ರದ ಮತದಾರರನ್ನು ಅವಲಂಬಿಸಿದ್ದು ಅದೇ ಅವರ ಭವಿಷ್ಯವನ್ನು ರೂಪಿಸುತ್ತದೆ ಎಂದು ಕನ್ನಡ ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ತಾರಾ ಹೇಳಿದರು.

kateelnali thara prachara
ಅವರು ಕಟೀಲು ಶ್ರೀ ದುಗರ್ಾಪರಮೇಶ್ವರೀ ದೇವಳಕ್ಕೆ ಶುಕ್ರವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
ಮಂಡ್ಯದಿಂದ ಸ್ಪಧರ್ಿಸುತ್ತಿರುವ ರಮ್ಯಾರವರು ಕಣ್ಣೀರಿನ ಮೂಲಕ ಮತಯಾಚಿಸುತ್ತಿದ್ದಾರಲ್ಲ ಎಂಬ ಪ್ರಶ್ನೆ ಉತ್ತರಿಸಿದ ತಾರಾರವರು ಅದು ಚುನಾವಣಾ ಕಣದಲ್ಲಿರುವ ಒಂದು ಗಿಮಿಕ್ ಅಷ್ಟೆ ಆಗಿರಬಹುದು ಅಥವಾ ಪ್ರಚಾರ ವೈಖರಿಯಲ್ಲಿ ಯಾವ ರೀತಿಯಲ್ಲೂ ಮತ ಯಾಚನೆ ಮಾಡಬಹುದು ಅದು ಅವರಿಗೆ ಬಿಟ್ಟ ವಿಷಯ ಎಂದರು.
ರಾಜ್ಯದಲ್ಲಿ ನರೇಂದ್ರ ಮೋದಿಯವರ ರಾಷ್ಟ್ರ ಚಿಂತನೆಯೇ ಈ ಬಾರಿ ಬಿಜೆಪಿಯನ್ನು ಗೆಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು ಸ್ವಾಭಿಮಾನಿ ರಾಷ್ಟ್ರವಾಗಲು ನರೇಂದ್ರ ಮೋದಿಯ ನೇತೃತ್ವದಲ್ಲಿ ದೇಶವನ್ನು ಮುನ್ನಡೆಸುವ ಸಂಕಲ್ಪವನ್ನು ಮತದಾರರು ಹೊಂದಿದ್ದು ಅದಕ್ಕೆ ಪೂರಕವಾಗಿ ವಾತಾವರಣವೂ ನಿಮರ್ಾಣವಾಗಿದೆ. ತನ್ನ ರಾಜಕೀಯ ಜೀವನವು ಸಹ ಕರಾವಳಿ ಜಿಲ್ಲೆಯಿಂದಲೇ ಆರಂಭವಾಗಿ ಇಲ್ಲೇ ನನ್ನ ಮೊದಲ ಭಾಷಣವನ್ನು ಮಾಡಿದ್ದೇನೆ ಆದುದರಿಂದ ತನಗೆ ಈ ಜಿಲ್ಲೆಯ ಬಗ್ಗೆ ಹೆಮ್ಮೆ ಎನಿಸಿದೆ ಎಂದು ಹೇಳಿದರು.
ಕನ್ನಡ ಚಿತ್ರರಂಗವು ಒಡೆದ ಮನೆಯಾಗದೇ ಸಂಘಟಿತ ಕುಟುಂಬವಾಗಿ ಬೆಳೆಯಬೇಕು ಯಾವುದಕ್ಕೂ ಪರಿಹಾರ ಕಂಡುಕೊಂಡು ಚಿತ್ರರಂಗವನ್ನು ಬೆಳೆಸಲು ಪ್ರಯತ್ನ ನಡೆಯಬೇಕು ಇತ್ತೀಚೆಗೆ ಕಲಾವಿದರ ಬಗ್ಗೆ ಎರಡು ಗುಂಪುಗಳಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಡಬ್ಬಿಂಗ್ಗೆ ನನ್ನ ಸ್ಪಷ್ಟ ವಿರೋಧವಿದೆ. ನನ್ನ ರಾಜಕೀಯ ಹಾಗೂ ಸಂಸಾರದ ನಡುವೆ ಸಾಕಷ್ಟು ಒತ್ತಡದ ಕೆಲಸವಿರುವುದರಿಂದ ಚಿತ್ರರಂಗದಿಂದ ಸ್ವಲ್ಪ ದೂರ ಉಳಿಯುವಂತಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಪ್ರಸಾದ ವಿತರಿಸಿದರು. ಸುಲೋಚನ ಭಟ್, ಕಸ್ತೂರಿ ಪಂಜ, ಲೀಲಾ ಬಂಜನ್, ಜಯಲಕ್ಷ್ಮೀ ಶೆಟ್ಟಿಗಾರ್, ಪ್ರವಿತಾ ಈಶ್ವರ ಕಟೀಲು, ಪ್ರಭಾಮಾಲಿನಿ, ಕೊಡೆತ್ತೂರು ಭುವನಾಭಿರಾಮ ಉಡುಪ, ದೇವಪ್ರಸಾದ ಪುನರೂರು, ಪ್ರಾಣೇಶ್ ಭಟ್ ದೇಂದಡ್ಕ, ಗೋಪಾಲ ಶೆಟ್ಟಿಗಾರ್, ಗಿರೀಶ್ ಕುಮಾರ್ ಇನ್ನಿತರರು ಹಾಜರಿದ್ದರು.
ವರದಿ; ನರೇಂದ್ರ ಕೆರೆಕಾಡ

By suddi9

Leave a Reply

Your email address will not be published. Required fields are marked *